Featured, ಸ್ಥಳೀಯ

ಅರಂತೋಡು ಅನ್ವಾರುಲ್ ಹುದಾ ಯಂಗ್ ಮೆನ್ಸ್ ಅಸೋಸಿಯೇಶನ್ ಸುವರ್ಣ ಮಹೋತ್ಸವ: ಸ್ವಾಗತ ಸಮಿತಿ ರಚನೆ

ಗೌರವಾಧ್ಯಕ್ಷರಾಗಿ ಟಿ.ಎಂ. ಶಹೀದ್ ತೆಕ್ಕಿಲ್, ಅಧ್ಯಕ್ಷರಾಗಿ ಅಮೀರ್ ಕುಕ್ಕುಂಬಳ, ಪ್ರಧಾನ ಕಾರ್ಯದರ್ಶಿಯಾಗಿ ಪಸೀಲು ಎ. ಆಯ್ಕೆ

ಅರಂತೋಡು: ಅನ್ವಾರುಲ್ ಹುದಾ ಯಂಗ್ ಮೆನ್ಸ್ ಅಸೋಸಿಯೇಶನ್ (ರಿ.) ಅರಂತೋಡು ಇದರ 50ನೇ ವರ್ಷಾಚರಣೆಯ ಅಂಗವಾಗಿ ಸುವರ್ಣ ಮಹೋತ್ಸವ ಸಮಾರಂಭವನ್ನು ಅರ್ಥಪೂರ್ಣ ಹಾಗೂ ಅದ್ದೂರಿಯಾಗಿ ಆಚರಿಸುವ ಉದ್ದೇಶದಿಂದ ಸುವರ್ಣ ಮಹೋತ್ಸವ ಸ್ವಾಗತ ಸಮಿತಿಯನ್ನು ಅಕ್ಟೋಬರ್ 23ರಂದು ರಚಿಸಲಾಯಿತು.

ಸ್ವಾಗತ ಸಮಿತಿಯ ಗೌರವಾಧ್ಯಕ್ಷರಾಗಿ ಕರ್ನಾಟಕ ಕಾರ್ಮಿಕರ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ (ಸಚಿವ ದರ್ಜೆ) ಟಿ.ಎಂ. ಶಹೀದ್ ತೆಕ್ಕಿಲ್, ಅಧ್ಯಕ್ಷರಾಗಿ ಅಮೀರ್ ಕುಕ್ಕುಂಬಳ, ಕಾರ್ಯಾಧ್ಯಕ್ಷರಾಗಿ ಕೆ.ಎಂ. ಅಬೂಬಕ್ಕರ್ ಪಾರೆಕ್ಕಲ್, ಪ್ರಧಾನ ಕಾರ್ಯದರ್ಶಿಯಾಗಿ ಪಸೀಲು ಎ. ಹಾಗೂ ಕೋಶಾಧಿಕಾರಿಯಾಗಿ ಸಂಶುದ್ಧೀನ್ ಪೆಲ್ತಡ್ಕ ಅವರನ್ನು ಆಯ್ಕೆ ಮಾಡಲಾಯಿತು.

ಉಪಾಧ್ಯಕ್ಷರುಗಳಾಗಿ ಹಾಜಿ ಕೆ.ಎಂ. ಮಹಮ್ಮದ್, ಹಾಜಿ ಅಬ್ದುಲ್ ಖಾದರ್ ಪಠೇಲ್, ಕೆ.ಎಂ. ಉಸ್ಮಾನ್ ಹಾಗೂ ಹನೀಫ್ ಎ. ಅವರನ್ನು ಆಯ್ಕೆ ಮಾಡಲಾಗಿದೆ.

ಜತೆ ಕಾರ್ಯದರ್ಶಿಗಳಾಗಿ ಆಶಿಕ್ ಕುಕ್ಕುಂಬಳ ಮತ್ತು ಕಬೀರ್ ಸೆಂಟ್ಯಾರ್, ಮಾಧ್ಯಮ ಕಾರ್ಯದರ್ಶಿಗಳಾಗಿ ತಾಜುದ್ಧೀನ್ ಅರಂತೋಡು, ಸಂಶುದ್ಧೀನ್ ಕ್ಯೂರ್ ಹಾಗೂ ಅನ್ಸಾಫ್ ಕೊಡಂಕೇರಿ ಅವರನ್ನು ನೇಮಿಸಲಾಗಿದೆ.

ಸಮಿತಿ ಸದಸ್ಯರು: ಕೆ.ಎಂ. ಮೂಸಾನ್, ಅಬ್ದುಲ್ಲಾ ಗುಂಡಿ ಎಸ್.ಎಂ., ಅಬ್ದುಲ್ ಮಜೀದ್, ಎ. ಉಮ್ಮರ್, ಕೆ.ಎಂ. ಮೊಯಿದು ಕುಕ್ಕುಂಬಳ, ಮನ್ಸೂರ್ ಪಾರೆಕ್ಕಲ್, ಸಂಶುದ್ಧೀನ್ ಕೆ.ಎ.ಯು., ಹಾಜಿ ಅಝರುದ್ಧೀನ್, ಜುಬೈರ್ ಎಸ್.ಇ., ಕೆ.ಎಸ್. ಇಬ್ರಾಹಿಂ ಕುಕ್ಕುಂಬಳ, ಹಾಜಿ ಅಬ್ದುಲ್ ರಜಾಕ್ ಅಡಿಮರಡ್ಕ, ಕೆ.ಎಂ. ಅನ್ವರ್, ಮುಜೀಬ್, ನವಾಜ್ ಉದಯನಗರ, ಸಮದ್ ಗುಂಡಿ, ಇಕ್ಬಾಲ್ ಬೆಳ್ಳಾರೆ, ಟಿ.ಎಂ. ಜಾವೇದ್ ತೆಕ್ಕಿಲ್, ಜವಾದ್ ಪಾರೆಕ್ಕಲ್, ಇಸಾಕುದ್ಧೀನ್, ಲತೀಫ್ ಮೊಟ್ಟೆಂಗಾರ್, ಹಕೀಮ್ ಕೊಡಂಕೇರಿ, ಸೂಫಿ (ಹಸೈನಾರ್), ಕೆ.ಇ. ಇಸ್ಮಾಯಿಲ್ ಕುಕ್ಕುಂಬಳ, ಕೆ.ಇ. ರಜಾಕ್ ಕುಕ್ಕುಂಬಳ, ರಫೀಕ್ ಸೆಂಟ್ಯಾರ್, ಮುಝಮ್ಮಿಲ್ ಕುಕ್ಕುಂಬಳ, ಮುಸ್ತಾಫ್ ಎ.ಎ., ನಿಝರ್ ಸೆಂಟ್ಯಾರ್, ಮಹಮ್ಮದ್ ನವಾಜ್, ಮಹಮ್ಮದ್ ಫರಾಜ್ ಹಾಗೂ ಅಬ್ದುಲ್ ಅಫೀಸ್ ಅವರನ್ನು ಆಯ್ಕೆ ಮಾಡಲಾಗಿದೆ.

ದುಬೈ ಪ್ರತಿನಿಧಿಗಳು: ಮುಕ್ತಾರ್ ಪಠೇಲ್, ಸಲಾವುದ್ದೀನ್ ಪಠೇಲ್, ನಾಸಿರುದ್ದೀನ್ ಪಠೇಲ್, ರಹೀಮ್ ಉದಯನಗರ ಹಾಗೂ ಅಶ್ರಫ್ ಅದೂರ್.

ಸೌದಿ ಅರೇಬಿಯಾ ಪ್ರತಿನಿಧಿಗಳು: ಮಹಮ್ಮದ್ ಕಮಾಲ್ ಪಾರೆಕ್ಕಲ್, ಅಬ್ದುಲ್ ಅಝೀಜ್ ಪೆಲ್ತಡ್ಕ, ಜಾವೇದ್ ಪೆಲ್ತಡ್ಕ ಹಾಗೂ ಹಬೀಬ್ ರೆಹ್ಮಾನ್ ಗುಂಡಿ ಅವರನ್ನು ಆಯ್ಕೆ ಮಾಡಲಾಗಿದೆ.

ಗೌರವ ಸಲಹೆಗಾರರು: ಆಸಿಫ್ ಅಝಹರಿ, ಹಾಜಿ ಎ. ಅಬ್ದುಲ್ಲಾ ಮಾಸ್ಟರ್, ಹಾಜಿ ಅಶ್ರಫ್ ಗುಂಡಿ, ಡಾ. ತಾಜುದ್ಧೀನ್ ಮಂಗಳೂರು ಹಾಗೂ ಹಾಜಿ ಬದುರುದ್ದೀನ್ ಪಠೇಲ್ ಅರಂತೋಡು ಅವರನ್ನು ಆಯ್ಕೆ ಮಾಡಲಾಗಿದೆ.

ಅನ್ವಾರುಲ್ ಹುದಾ ಯಂಗ್ ಮೆನ್ಸ್ ಅಸೋಸಿಯೇಶನ್ ತನ್ನ ಐದು ದಶಕಗಳ ಪಯಣದ ಮಹತ್ವದ ಮೈಲಿಗಲ್ಲಾಗಿರುವ ಸುವರ್ಣ ಮಹೋತ್ಸವವನ್ನು ಯಶಸ್ವಿಯಾಗಿ ಆಯೋಜಿಸುವ ನಿಟ್ಟಿನಲ್ಲಿ ಈ ಸ್ವಾಗತ ಸಮಿತಿಯನ್ನು ರಚಿಸಲಾಗಿದೆ.

Related Posts