ಸುಳ್ಯ: ವಜ್ರಮಹೋತ್ಸವದ ಹೊಸ್ತಿಲಲ್ಲಿರುವ ಸುಳ್ಯದ ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಷನ್ ವತಿಯಿಂದ ವಿವಿಧ ಸಂಘ–ಸಂಸ್ಥೆಗಳು ಹಾಗೂ ಶಿಕ್ಷಣ ಸಂಸ್ಥೆಗಳ ಸಹಯೋಗದಲ್ಲಿ ‘ಸ್ವಚ್ಛತೆ ನಮ್ಮ ಆದ್ಯತೆ’ ಎಂಬ ಘೋಷವಾಕ್ಯದಡಿ ಹಮ್ಮಿಕೊಳ್ಳಲಾಗಿರುವ ಸ್ವಚ್ಛತಾ ಮಾಸಾಚರಣೆಯ ಅಂಗವಾಗಿ ಎರಡನೇ ವಾರದ ಸ್ವಚ್ಛತಾ ಶಿಬಿರ ಯಶಸ್ವಿಯಾಗಿ ನಡೆಯಿತು.

ಮಾಸಾಚರಣೆಯ ಅಂಗವಾಗಿ ವಾರಕ್ಕೊಮ್ಮೆ ಸ್ವಚ್ಛತಾ ಶಿಬಿರ, ಪೋಸ್ಟರ್ ಹಾಗೂ ಕರಪತ್ರಗಳ ಮೂಲಕ ಸಾರ್ವಜನಿಕ ಜಾಗೃತಿ ಅಭಿಯಾನ, ರಸಪ್ರಶ್ನೆ, ಚಿತ್ರಕಲಾ ಸ್ಪರ್ಧೆ ಮತ್ತು ಸ್ವಚ್ಛತೆಯ ಮಹತ್ವದ ಕುರಿತು ಉಪನ್ಯಾಸ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಎರಡನೇ ವಾರದ ಸ್ವಚ್ಛತಾ ಶಿಬಿರದ ಅಂಗವಾಗಿ ಅನ್ಸಾರಿಯಾ ಆಶ್ರಮ, ಗ್ರೀನ್ ವ್ಯೂ ಶಾಲೆ, ಅನ್ಸಾರಿಯಾ ಗಲ್ಫ್ ಆಡಿಟೋರಿಯಂ, ಬೋರುಗುಡ್ಡೆ ಚರ್ಚ್ ಪರಿಸರ ಹಾಗೂ ನಾವೂರು ಜಂಕ್ಷನ್ ಸೇರಿದಂತೆ ವಿವಿಧ ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತಾ ಕಾರ್ಯಗಳನ್ನು ಕೈಗೊಳ್ಳಲಾಯಿತು. ವಿವಿಧ ಸಂಘ–ಸಂಸ್ಥೆಗಳ ಕಾರ್ಯಕರ್ತರು, ಪದಾಧಿಕಾರಿಗಳು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಸೇರಿದಂತೆ ನೂರಾರು ಮಂದಿ ಶ್ರಮದಾನದ ಮೂಲಕ ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿ ಅಭಿಯಾನವನ್ನು ಯಶಸ್ವಿಗೊಳಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ಅನ್ಸಾರಿಯಾ ದಅವಾ ಕಾಲೇಜಿನ ಪ್ರಾಂಶುಪಾಲ ಅಬೂಬಕ್ಕರ್ ಹಿಮಮಿ ದುಆ ನೆರವೇರಿಸಿದರು. ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಷನ್ ಅಧ್ಯಕ್ಷ ಕೆ.ಬಿ. ಇಬ್ರಾಹಿಂ ಅಧ್ಯಕ್ಷತೆ ವಹಿಸಿದ್ದರು. ಅನ್ಸಾರಿಯಾ ಎಜುಕೇಶನ್ ಸೆಂಟರ್ ಅಧ್ಯಕ್ಷ ಹಾಜಿ ಕೆ.ಎಂ. ಅಬ್ದುಲ್ ಮಜೀದ್ ಜನತಾ ಸ್ವಚ್ಛತಾ ಶಿಬಿರಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಸ್ವಚ್ಛತಾ ಆಂದೋಲನದ ಸಂಚಾಲಕ ಯಾಕೂಬ್ ಎಸ್.ಟಿ., ಸುಳ್ಯ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಎಂ. ಮುಸ್ತಫ, ಕಾರ್ಯಕ್ರಮ ಸಂಯೋಜಕ ಕೆ.ಬಿ. ಅಬ್ದುಲ್ ಮಜೀದ್, ಎಂ.ಜೆ.ಎಂ. ಅಧ್ಯಕ್ಷ ಹಾಜಿ ಕೆ.ಎಂ.ಎಸ್. ಮಹಮ್ಮದ್, ಪದಾಧಿಕಾರಿಗಳಾದ ಎಸ್.ಎಂ. ಅಬ್ದುಲ್ ಹಮೀದ್, ಅಬ್ದುಲ್ ಗಫಾರ್, ಹಮೀದ್ ಬೀಜಕೊಚ್ಚಿ, ಮುಹಿಯದ್ದೀನ್ ಫ್ಯಾನ್ಸಿ ಹಾಗೂ ವರ್ತಕರ ಸಂಘದ ಅಧ್ಯಕ್ಷ ಹಾಜಿ ಕೆ.ಎಂ. ಅಬ್ದುಲ್ ಹಮೀದ್ ಜನತಾ ಉಪಸ್ಥಿತರಿದ್ದರು.
ಅನ್ಸಾರ್ ಪದಾಧಿಕಾರಿಗಳಾದ ಹನೀಫ್ ಬುಶ್ರಾ, ಬಿ.ಎಂ. ಹನೀಫ್ ಜನತಾ, ಶಂಸುದ್ದೀನ್ ಕೆ.ಬಿ., ಬಶೀರ್ ಸಪ್ನ, ಎನ್.ಎ. ಜುನೈದ್, ಎಂ.ಕೆ. ಅಬ್ದುಲ್ ಲತೀಫ್, ಶುಕೂರ್ ಕೆ.ಎಚ್., ಶಹೀದ್ ಪಾರೆ, ನೌಶಾದ್ ಬಾರ್ಪಣೆ, ಮಜೀದ್ ಕೆ.ಪಿ., ಸಿರಾಜ್ ಫ್ಯಾನ್ಸಿ, ಅಬ್ದುಲ್ಲ ಕಟ್ಟೆಕ್ಕಾರ್ಸ್ ಭಾಗವಹಿಸಿದ್ದರು.
ಅನ್ಸಾರಿಯಾ ಪದಾಧಿಕಾರಿಗಳಾದ ಎಸ್.ಪಿ. ಅಬೂಬಕ್ಕರ್, ಶಾಫಿ ಕುತ್ತಾಮೊಟ್ಟೆ, ಆದಂ ಹಾಜಿ ಕಮ್ಮಾಡಿ, ಸಿದ್ದೀಕ್ ಕೊಕ್ಕೋ, ಅಝೀಝ್ ಸಂಗಂ, ಇಕ್ಬಾಲ್ ಬೋರುಗುಡ್ಡೆ ಹಾಗೂ ಅಝೀಝ್ ಬೋರುಗುಡ್ಡೆ ಉಪಸ್ಥಿತರಿದ್ದರು.

ವಿವಿಧ ಸಂಘ–ಸಂಸ್ಥೆಗಳ ಪ್ರತಿನಿಧಿಗಳಾದ ಹಾಜಿ ಎಸ್.ಎ. ಹಮೀದ್ ಹಾಜಿ, ಆಶಿಕ್ ಎಸ್.ಎ., ಮಸೂದ್ ಎಫ್.ಎಸ್.ಎಫ್., ಸಿದ್ದೀಕ್ ಗೂನಡ್ಕ, ಹನೀಫ್ ಕೆವಿಜಿ ಮೊಗರ್ಪಣೆ, ಸಮೀರ್ ಮೊಬೈಲ್ ಹಾರ್ಟ್, ಅಬ್ಬಾಸ್ ಬಾಯಿಕ್ಕೆರೆ, ಅಬೂಬಕ್ಕರ್ ಮೇಸ್ತ್ರಿ ಜಟ್ಟಿಪ್ಪಳ್ಳ, ಅಬ್ದುಲ್ ರಹಮಾನ್ ಮೊಗರ್ಪಣೆ, ರಹೀಂ ಮೊಗರ್ಪಣೆ, ಹನೀಫ್ ಸಂಗಂ ಮೊಗರ್ಪಣೆ, ಶಾಲಿ ಕಟ್ಟೆಕ್ಕಾರ್, ಹನೀಫ್ ಕುರುಂಜಿ, ಖಯ್ಯು ಕಟ್ಟೆಕ್ಕಾರ್ಸ್, ಅಂದಚ್ಚ ಅಡ್ಕತ್ತಬೈಲ್, ಆದ್ದು ಬೋರುಗುಡ್ಡೆ ಸೇರಿದಂತೆ ಹಲವಾರು ಪ್ರಮುಖರು ಹಾಗೂ ಸ್ವಯಂಸೇವಕರು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡರು.
ವಜ್ರಮಹೋತ್ಸವದ ಸಂಭ್ರಮವನ್ನು ಸಾಮಾಜಿಕ ಕಾಳಜಿ ಹಾಗೂ ಸಾರ್ವಜನಿಕ ಜಾಗೃತಿಯ ಕಾರ್ಯಕ್ರಮಗಳ ಮೂಲಕ ಅರ್ಥಪೂರ್ಣಗೊಳಿಸುವ ಉದ್ದೇಶದಿಂದ ಹಮ್ಮಿಕೊಳ್ಳಲಾಗಿರುವ ಈ ಸ್ವಚ್ಛತಾ ಮಾಸಾಚರಣೆಯು ವಿವಿಧ ಸಂಘ–ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು ಹಾಗೂ ಸಾರ್ವಜನಿಕರ ಸಹಭಾಗಿತ್ವದೊಂದಿಗೆ ಮುಂದುವರಿಯುತ್ತಿದೆ.