Featured, ಇತರೆ

ಸುಳ್ಯ: ಮಗ ಹಿಮ್ಮುಖವಾಗಿ ಚಲಾಯಿಸುತ್ತಿದ್ದ ಕಾರು ತಾಯಿಗೆ ಡಿಕ್ಕಿ; ಗಂಭೀರವಾಗಿ ಗಾಯಗೊಂಡ ತಾಯಿ ಮೃತ್ಯು

ಸುಳ್ಯ: ಮನೆಯ ಅಂಗಳದಲ್ಲಿ ಮಗ ಹಿಮ್ಮುಖವಾಗಿ ಚಲಾಯಿಸುತ್ತಿದ್ದ ಕಾರು ಆಕಸ್ಮಿಕವಾಗಿ ತಾಯಿಗೆ ಡಿಕ್ಕಿ ಹೊಡೆದ ಪರಿಣಾಮ ತಾಯಿ ಮೃತಪಟ್ಟ ದಾರುಣ ಘಟನೆ ಸುಳ್ಯ ತಾಲೂಕಿನ ದುಗ್ಗಲಡ್ಕ ಸಮೀಪದ ಕೊಳಂಜಿಕೊಡಿಯಲ್ಲಿ ವರದಿಯಾಗಿದೆ.

ಮೃತ ಮಹಿಳೆಯನ್ನು ದುಗ್ಗಲಡ್ಕದ ಕೊಳಂಜಿಕೊಡಿ ನಿವಾಸಿ ಕಮರುನ್ನಿಸಾ ಎಂದು ಗುರುತಿಸಲಾಗಿದೆ.

ಮಗ ಮನೆಯ ಅಂಗಳದಲ್ಲಿ ಕಾರನ್ನು ಹಿಮ್ಮುಖವಾಗಿ ಚಲಾಯಿಸುತ್ತಿದ್ದ ವೇಳೆ ಆಕಸ್ಮಿಕವಾಗಿ ತಾಯಿಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಡಿಕ್ಕಿಯ ರಭಸಕ್ಕೆ ಗಂಭೀರವಾಗಿ ಗಾಯಗೊಂಡ ಕಮರುನ್ನಿಸಾ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಘಟನೆ ಸಂಬಂಧ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.

Related Posts