ನವದೆಹಲಿ : ನ.18. ವಿಮೆ ಇಲ್ಲದ ವಾಹನಗಳನ್ನು ಪತ್ತೆಹಚ್ಚಲು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಹೊಸ ಸ್ವಯಂಚಾಲಿತ ವ್ಯವಸ್ಥೆಯ ಪ್ರಾಯೋಗಿಕ ಪರೀಕ್ಷೆ ಆರಂಭಿಸಿದೆ. ದೆಹಲಿಯ ಅರ್ಬನ್ ಎಕ್ಸ್ಟೆನ್ಶನ್ ರೋಡ್-IIನ ಮುಂಡ್ಕಾ ಟೋಲ್ ಪ್ಲಾಜಾದಲ್ಲಿ ಈ ಯೋಜನೆ ಜಾರಿಗೊಳಿಸಲಾಗಿದೆ.
ಈ ವ್ಯವಸ್ಥೆಯು ವಾಹನದ ನೋಂದಣಿ ಸಂಖ್ಯೆಯನ್ನು ‘ವಾಹನ್’ ಡೇಟಾಬೇಸ್ ಮೂಲಕ ಪರಿಶೀಲಿಸಿ ವಿಮೆಯ ಅವಧಿಯನ್ನು ಖಚಿತಪಡಿಸಿಕೊಳ್ಳುತ್ತದೆ. ವಿಮೆ ಅವಧಿ ಮುಗಿದಿದ್ದರೆ, ವಾಹನದ ಮಾಲೀಕರ ಮೊಬೈಲ್ಗೆ ಟೋಲ್ ದಾಟಿದ ದಿನಾಂಕ, ಸಮಯ ಹಾಗೂ ವಿಮೆ ನವೀಕರಿಸುವಂತೆ ಸೂಚಿಸುವ ಎಸ್ಎಂಎಸ್ ರವಾನೆಯಾಗಲಿದೆ.

ಮೋಟಾರು ವಾಹನ ಕಾಯ್ದೆಯ ಪ್ರಕಾರ, ಮೊದಲ ಬಾರಿಗೆ ಮಾನ್ಯ ಥರ್ಡ್ ಪಾರ್ಟಿ ವಿಮೆ ಇಲ್ಲದೆ ವಾಹನ ಚಲಾಯಿಸಿದರೆ ₹5,000 ಅಥವಾ ಮೂಲ ವಿಮಾ ಪ್ರೀಮಿಯಂನ ಮೂರು ಪಟ್ಟು, ಇವೆರಡರಲ್ಲಿ ಹೆಚ್ಚಿನ ಮೊತ್ತ ದಂಡ ವಿಧಿಸಲಾಗುತ್ತದೆ. ಪುನರಾವರ್ತಿತ ಉಲ್ಲಂಘನೆಗೆ ₹10,000 ಅಥವಾ ಮೂಲ ವಿಮಾ ಪ್ರೀಮಿಯಂನ ಐದು ಪಟ್ಟು ದಂಡ ವಿಧಿಸಲು ಅವಕಾಶವಿದೆ.
ಪ್ರಾಯೋಗಿಕ ಪರೀಕ್ಷೆ ಯಶಸ್ವಿಯಾದ ಬಳಿಕ ಈ ವ್ಯವಸ್ಥೆಯನ್ನು ದೇಶದ ಇತರ ಟೋಲ್ ಪ್ಲಾಜಾಗಳಿಗೂ ವಿಸ್ತರಿಸಲು NHAI ಯೋಜಿಸಿದೆ.