Featured, ಇತರೆ

ರಸ್ತೆ ದಾಟುತ್ತಿದ್ದ 9ನೇ ತರಗತಿ ವಿದ್ಯಾರ್ಥಿನಿಗೆ ಲಾರಿ ಡಿಕ್ಕಿ: ಸ್ಥಳದಲ್ಲೇ ದಾರುಣ ಮೃತ್ಯು

ನೇರಳಕಟ್ಟೆಯಲ್ಲಿ ಸಂಜೆ ಸಂಭವಿಸಿದ ಭೀಕರ ಅಪಘಾತ 

ಶಾಲೆ ಮುಗಿಸಿ ಕಂಬಳಬೆಟ್ಟುವಿನಿಂದ ಕಬಕಕ್ಕೆ ಬಂದಿದ್ದ ವಿದ್ಯಾರ್ಥಿನಿ, ಅಲ್ಲಿಂದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಕಂಬಳಬೆಟ್ಟುವಿಗೆ ಪ್ರಯಾಣಿಸಿದ್ದಳು. ಬಸ್ಸಿನಿಂದ ಇಳಿದು ರಸ್ತೆ ದಾಟುತ್ತಿದ್ದ ಸಂದರ್ಭದಲ್ಲಿ ಗುಜರಾತ್ ನೋಂದಣಿಯ (GJ 27 T 3022) ಲಾರಿಯೊಂದು ಆಕೆಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ರಸ್ತೆಗೆ ಬಿದ್ದ ವಿದ್ಯಾರ್ಥಿನಿಯ ಮೇಲೆ ಲಾರಿ ಹರಿದ ಪರಿಣಾಮ ಆಕೆ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾಳೆ.

ಮೃತ ವಿದ್ಯಾರ್ಥಿನಿಯ ಕುಟುಂಬ ಮೂಲತಃ ಅತೂರಿನವರಾಗಿದ್ದು, ಪ್ರಸ್ತುತ ನೇರಳಕಟ್ಟೆ ಕಿರಿಯ ಪ್ರಾಥಮಿಕ ಶಾಲೆಯ ಹಿಂಭಾಗದಲ್ಲಿ ವಾಸವಾಗಿದ್ದರು. ಮೃತರು ತಂದೆ, ತಾಯಿ ಹಾಗೂ ಓರ್ವ ತಮ್ಮನನ್ನು ಅಗಲಿದ್ದಾರೆ.

ವಿದ್ಯಾಭ್ಯಾಸದ ಹಂತದಲ್ಲೇ ಬಾಲಕಿಯ ದಾರುಣ ಸಾವು ಸಂಭವಿಸಿರುವುದು ಕುಟುಂಬಸ್ಥರು, ಬಂಧುಗಳು ಹಾಗೂ ಸ್ಥಳೀಯರಲ್ಲಿ ತೀವ್ರ ದುಃಖಕ್ಕೆ ಕಾರಣವಾಗಿದೆ.

Related Posts