ಖ್ಯಾತ ಮೋಟಿವೇಶನ್ ಸ್ಪೀಕರ್ ಸೀನಾನ್ ಝಕಾರಿಯಾ ಇವರಿಂದ ಪ್ರೇರಣಾ ತರಭೇತಿ ಕಾರ್ಯಾಗಾರ

ಸುಳ್ಯ: ಸದಾ ಸಮಾಜಮುಖಿ ಚಟುವಟಿಕೆಗಳ ಮೂಲಕ ಗಮನ ಸೆಳೆಯುತ್ತಿರುವ ಫೈಝಲ್ ಕಟ್ಟೆಕ್ಕಾರ್ ನೇತೃತ್ವದ ಸುಳ್ಯದ KA 21 ಸುಳ್ಯ ವಾಟ್ಸಾಪ್ ಗ್ರೂಪ್ ವತಿಯಿಂದ ಹೈಸ್ಕೂಲ್ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಮಾಹಿತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ.
ಇಂದು ಜನವರಿ 5, ಭಾನುವಾರದಂದು ಸಂಜೆ 7 ಗಂಟೆಗೆ, ಸುಳ್ಯದ ನೂತನವಾಗಿ ಆರಂಭಗೊಂಡ ಅನ್ಸಾರಿಯಾ ಗಲ್ಫ್ ಆಡಿಟೋರಿಯಂನಲ್ಲಿ ಕಾರ್ಯಾಗಾರ ನಡೆಯಲಿದೆ.
ಮಂಗಳೂರಿನ ಯೆನೆಪೋಯ ಪಿಯು ಕಾಲೇಜಿನ ಪ್ರಾಧ್ಯಾಪಕರಾದ ಶ್ರೀ ಸಿನಾನ್ ಝಕಾರಿಯ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಲಿದ್ದಾರೆ.
ಹತ್ತನೇ ತರಗತಿ ಸೇರಿದಂತೆ ಹೈಸ್ಕೂಲ್ ಹಾಗೂ ಪ್ರಥಮ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿ, ತಮ್ಮ ಮುಂದಿನ ಶೈಕ್ಷಣಿಕ ಅಯ್ಕೆಗಳ ಕುರಿತು ಸೂಕ್ತ ಮಾಹಿತಿ ಪಡೆದುಕೊಳ್ಳಬಹುದಾಗಿದೆ ಎಂದು KA 21 ಸುಳ್ಯ ವಾಟ್ಸಾಪ್ ಗ್ರೂಪ್‌ನ ಅಡ್ಮಿನ್ ಫೈಝಲ್ ಕಟ್ಟೆಕ್ಕಾರ್ಸ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಯಾಕೆ ಈ ಒಂದು ಶೈಕ್ಷಣಿಕ ಕಾರ್ಯಾಗಾರದಲ್ಲಿ ಭಾಗವಹಿಸಬೇಕು?
ಹೈಸ್ಕೂಲ್ ಮತ್ತು ಪಿ.ಯು.ಸಿ ವಿಧ್ಯಾರ್ಥಿಗಳು ಹಾಗೂ ಪೋಷಕರಲ್ಲಿ ಹಲವು ಗೊಂದಲಗಳು ಸಹಜ, ಇಂತಹ ಸಂಧರ್ಬದಲ್ಲಿ ಹಲವು ಪೋಷಕರು ಶೈಕ್ಷಣಿಕವಾಗಿ ಅರಿವಿಲ್ಲದೇ ತಮ್ಮ ಮಕ್ಕಳ ಮುಂದಿನ ಭವಿಷ್ಯದ ಬಗ್ಗೆ ತೀರ್ಮಾನ ಹಾಗೂ ಹೇಗೆ ಓದಬೇಕು, ಎಸ್ ಎಸ್ ಎಲ್ ಸಿ / ಪಿ.ಯು.ಸಿ ಮುಂದೇನು ಈ ತರ ಹಲವಾರು ಯೋಚನೆಗಳಿಗೆ ಸಮರ್ಪಕವಾಗಿ ತೀರ್ಮಾನ ಕೈಗೊಳ್ಳಲಾಗದೆ ಇರುವವರಿಗೆ ಇದು ಸೂಕ್ತ ಅವಕಾಶ, ವಿಧ್ಯಾರ್ಥಿಗಳ ಜೀವನದ ಅಮೂಲ್ಯ ತಿರುವುಗಳಿಗೆ ಪೂರಕ ದಾರಿ ತೋರಿಸುವುದು ಮತ್ತು ಅನಗತ್ಯ ಯೋಚನೆಗಳನ್ನು ದೂರ ಸರಿಸಿ ಸಮುದಾಯದ ವಿದ್ಯಾರ್ಥಿಗಳಿಗೆ ಸಮರ್ಪಕ ವಾತಾವರಣ ಮತ್ತು ವಿಧ್ಯಾರ್ಥಿಗಳ ಆಯ್ಕೆ ಮತ್ತು ತೃಪ್ತಿಕರ ಬದಲಾವಣೆಗಾಗಿ ಈ ಕಾರ್ಯಾಗಾರ ಹಮ್ಮಿಕೊಂಡಿದ್ದಾರೆ.
ವಿಧ್ಯಾರ್ಥಿಗಳು ಮತ್ತು ಪೋಷಕರು ಈ ಒಂದು ಕಾರ್ಯಾಗಾರದಲ್ಲಿ ಭಾಗವಹಿಸುವುದರಿಂದ ತಮ್ಮಲ್ಲಿರುವ ಹಲವು ಗೊಂದಲಗಲಕನ್ನು ನಿವಾರಿಸಲು ಅನುಕೂಲವಾಗಬಗುದು ಎಂದು ಸಂಘಟಕರು ತಿಳಿಸಿದ್ದಾರೆ. ಕಾರ್ಯಾಗಾರದಲ್ಲಿ ಉಚಿತವಾಗಿ ಪ್ರವೇಶವಿದ್ದು ಎಲ್ಲರೂ ಈ ಒಂದು ಅವಕಾಶ ಸದುಪಯೋಗ ಪಡೆದ ದುಕೊಳ್ಳಬಹುದಾಗಿದೆ.

ಸಂಪನ್ಮೂಲ ವ್ಯಕ್ತಿ ಸಿನಾನ್ ಝಕರಿಯಾ ಇವರ ಬಗ್ಗೆ
ಖ್ಯಾತ ತರಬೇತುದಾರ ಸಿನಾನ್ ಝಕಾರಿಯಾ ಇವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಲಿದ್ದಾರೆ ಇವರು ಯೆನೆಪೊಯ ಸೆಂಟರ್ ಫಾರ್ ಅಡ್ವಾನ್ಸ್ ಲರ್ನಿಂಗ್ (YCAL) – ಬಹ್ರೇನ್ ಮತ್ತು ಕತಾರ್‌ನ ನಿರ್ದೇಶಕರಾಗಿ ಮತ್ತು ಮಂಗಳೂರಿನ ಯೆನೆಪೊಯ ಪಿಯು ಕಾಲೇಜಿನಲ್ಲಿ ರಸಾಯನಶಾಸ್ತ್ರದ ಶೈಕ್ಷಣಿಕ ಸಲಹೆಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ.ಇವರು ಅಂತರಾಷ್ಟ್ರೀಯ ಮಟ್ಟದಲ್ಲಿ ಸಂಪನ್ಮೂಲಗಳ ವ್ಯಕ್ತಿ ಯಾಗಿ ಗುರುತಿಸಿ ಕೊಂಡಿದ್ದಾರೆ ಅನೇಕ ಯಶಸ್ವಿ ಪ್ರೇರಣಾ ಕಾರ್ಯಾಗಾರ ನಡೆಸಿದ್ದಾರೆ ಅದೇ ರೀತಿ ನಾಳೆ ಸಂಜೆ ಸುಳ್ಯದಲ್ಲಿ k21 ಇವರು ಆಯೋಜಿಸಿದ ಪ್ರೇರಣಾ ತರಗತಿ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ




m

