Featured, ಇತರೆ, ಸ್ಥಳೀಯ

ಆಶ್ರಫ್ ಪರ್ಪುಂಜ ಮಾಲೀಕತ್ವದ ಮಹಮ್ಮದೀಯ ಉಮ್ರಾ ಸರ್ವಿಸ್ ನಿಂದ ಉಮ್ರಾ ಯಾತ್ರಿಕರಿಗೆ ಭಾರೀ ವಂಚನೆ : ಮುಸ್ಲಿಂ ಯೂತ್ ಫೆಡರೇಶನ್ ಸುಳ್ಯ ತಾಲೂಕು ಖಂಡನೆ

ಇವನ(ಆಶ್ರಫ್ ಪರ್ಪುಂಜ) ವಂಚನೆಯಿಂದ ಸಾರ್ವಜನಿಕರನ್ನು ರಕ್ಷಿಸಬೇಕಾದರೆ ದಕ್ಷಿಣ ಕನ್ನಡ ಜಿಲ್ಲಾಡಳಿತವು ಈ ವ್ಯಕ್ತಿಯ ಪಾಸ್ಪೋರ್ಟ್ ನ್ನು ಮುಟ್ಟುಗೊಲು ಹಾಕಿ, ಅದೇ ರೀತಿ ವಂಚನೆಗೊಳಗಾದವರಿಗೆ ನ್ಯಾಯ ಒದಗಿಸಿಕೊಡಬೇಕು : ಮುಸ್ಲಿಂ ಯೂತ್ ಫೆಡರೇಶನ್. ಸುಳ್ಯ ತಾಲೂಕು ಸಮಿತಿ ಆಗ್ರಹ 

ಸುಳ್ಯ

ಈಗ ಅಂತರರಾಷ್ಟ್ರೀಯ ಮಟ್ಟದಲ್ಲಿ ಸದ್ದು ಆಗುತ್ತಿರುವ  ಮುಸ್ಲಿಂ ರ ಪವಿತ್ರ ಯಾತ್ರೆ ಉಮ್ರಾ ಸೇವೆಯಲ್ಲಿ ಯಾತ್ರಿಕರನ್ನು ಭಾರೀ ರೀತಿಯಲ್ಲಿ ವಂಚಿಸಿದ ಆರೋಪ ಹೊತ್ತು ತನ್ನ ತಪ್ಪುನ್ನು ಸಮರ್ಥಿಸಿ ಕೊಂಡು ಬರುತ್ತಿರುವ ಪುತ್ತೂರು  ಪರ್ಪುಂಜ ನಿವಾಸಿ ಅಶ್ರಫ್ ಪರ್ಪುಂಜ ಇವರ ಮಾಲೀಕತ್ವದ ಮಹಮ್ಮದೀಯ ಉಮ್ರಾ ಸರ್ವಿಸ್ ನ ಕೃತ್ಯಕ್ಕೆ ಭಾರೀ ಜನಾಕ್ರೋಶ ವ್ಯಕ್ತವಾಗತ್ತಿದ್ದು ಇ ಬಗ್ಗೆ ಸುಳ್ಯ ತಾಲೂಕು ಮುಸ್ಲಿಂ ಯೂತ್ ಫೆಡರೇಶನ್ ಮಾಧ್ಯಮ ಹೇಳಿಕೆ ನೀಡಿ ಘಟನೆಯನ್ನು ತಿವ್ರವಾಗಿ ಖಂಡಿಸಿದೆ ಮಾತ್ರವಲ್ಲ ಇವನ(ಆಶ್ರಫ್ ಪರ್ಪುಂಜ) ವಂಚನೆಯಿಂದ ಸಾರ್ವಜನಿಕರನ್ನು ರಕ್ಷಿಸಬೇಕಾದರೆ ದಕ್ಷಿಣ ಕನ್ನಡ ಜಿಲ್ಲಾಡಳಿತವು ಈ ವ್ಯಕ್ತಿಯ ಪಾಸ್ಪೋರ್ಟ್ ನ್ನು ಮುಟ್ಟುಗೊಲು ಹಾಕಿ, ಅದೇ ರೀತಿ  ವಂಚನೆಗೊಳಗಾದವರಿಗೆ ನ್ಯಾಯ ಒದಗಿಸಿಕೊಡಬೇಕು : ಮುಸ್ಲಿಂ ಯೂತ್ ಫೆಡರೇಶನ್ ಸುಳ್ಯ ತಾಲೂಕು ಸಮಿತಿ ಜಿಲ್ಲಾಡಳಿತ ಕ್ಕೆ ಒತ್ತಾಯಮಾಡಿ ಆಗ್ರಹಿಸಿದೆ

ಕರ್ನಾಟಕ ಮತ್ತು ಕೇರಳ ರಾಜ್ಯದ ವಿವಿಧ ಜಿಲ್ಲೆಗಳಿಂದ ಪವಿತ್ರವಾದ ಉಮ್ರಾ ನಿರ್ವಹಿಸಲುಸುಮಾರು 160 ಜನರ ಮಹಿಳೆಯರು ವೃದ್ಧರು ಸೇರಿ ತಂಡವನ್ನು ಪವಿತ್ರವಾದ ಮಕ್ಕಾ ಮತ್ತು ಮದೀನಾ ಯಾತ್ರೆಯನ್ನು ಮುಗಿಸಿ ನಮ್ಮೂರಿಗೆ ಹಿಂತಿರುಗುವ ಸಮಯದಲ್ಲಿ ಯಾತ್ರಿಕರನ್ನು ಅರ್ಧ ದಾರಿಯಲ್ಲಿ ಕೈ ಬಿಟ್ಟು ವಂಚನೆ ಎಸಗಿರುವುದು ಖಂಡನೀಯ. ಇತ್ತೀಚೆಗೆ ಉಮ್ರಾ ಯಾತ್ರೆ ದರದಲ್ಲಿ ಪೈಪೋಟಿ ನಡೆಯುತ್ತಿದ್ದು ಇದನ್ನೇ ಕಸುಬಾಗಿ ಮಾಡಿಕೊಂಡ ಅಶ್ರಫ್ ಪರ್ಪುಂಜ ಎಂಬ ವ್ಯಕ್ತಿಯು ಈ ಮೊದಲು ಇದೇ ರೀತಿ ಉಮ್ರಾ ಯಾತ್ರಿಕರಿಕರಿಗೆ ವಂಚನೆ ಮಾಡಿದ್ದು ಕಂಡು ಬರುತ್ತದೆ.


ಆದರೂ ಮುಗ್ದ ಜನರು ಮತ್ತೆ ಮತ್ತೆ ಇಂತಹಾ ವಂಚಕರ ಬಲೆಗೆ ಬೀಳುತ್ತಿದ್ದಾರೆ.
ಇವನ ವಂಚನೆಯಲ್ಲಿ ಸಿಲುಕಿದ ಉಮ್ರಾ ಯಾತ್ರಿಕರು ವಸತಿ ಊಟೋಪಚಾರ ಸಿಗದೆ ಪರದಾಡುವ ಪರಿಸ್ಥಿತಿಯು ನಿರ್ಮಾಣವಾಗಿರುತ್ತದೆ. 160ಕ್ಕೂ ಮಿಕ್ಕ ಯಾತ್ರಿಕರು ತಾಯ್ನಾಡಿಗೆ ಮರಳಲು ವಿಮಾನ ಟಿಕೇಟಿಗಾಗಿ ಪರದಾಡುವಂತಾಯ್ತು. ಈ ಸಂದರ್ಭದಲ್ಲಿ ಸಂಕಷ್ಟಕ್ಕೆ ಒಳಗಾಗಿದ್ದ ಉಮ್ರಾ ಯಾತ್ರಿಕರಿಗೆ ಅನಿವಾಸಿ ಭಾರತೀಯರ ವಿವಿಧ ಸಂಘಟನೆಗಳು ಒಂದುಗೂಡಿ ಸಂಕಷ್ಟಕೊಳಗಾದ ಯಾತ್ರಿಕರಿಗೆ ವಸತಿ ಮತ್ತು ಉಟೋಪಚಾರದ ವ್ಯವಸ್ಥೆಯನ್ನು ಮಾಡಿರುವುದಲ್ಲದೆ, ಹಲವಾರು ಯಾತ್ರಿಕರಿಗೆ ತಾಯ್ನಾಡಿಗೆ ಮರಳಲು ವಿಮಾನದ ಟಿಕೇಟ್ಗಳನ್ನು ನೀಡಿ ಮಾನವೀಯ ಸೇವೆಯನ್ನು ನೀಡಿದ ಎಲ್ಲಾ ಅನಿವಾಸಿ ಭಾರತೀಯರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತಿದ್ದೇವೆ.
ಸರಕಾರವು ಇಂತಹ ವಂಚನೆಗಳನ್ನು ಮಾಡುವ ವ್ಯಕ್ತಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈ ಗೊಳ್ಳಬೇಕಾಗಿಯೂ ಮತ್ತು ಮೇಲೆ ತಿಳಿಸಿದ ಅಶ್ರಫ್ ಪರ್ಪುಂಜ ಎಂಬ ವ್ಯಕ್ತಿಯು ಇದೇ ಜನವರಿ ತಿಂಗಳ ವಿವಿಧ ದಿನಾಂಕಗಳಲ್ಲಿ ಬೇರೆ ಬೇರೆ ಜನರನ್ನು ಉಮ್ರಾ ಯಾತ್ರಗೆ ಕರೆದುದುಕೊಂಡು ಹೋಗುವ ಬಗ್ಗೆ ಈಗಾಗಲೇ ಮುಂಗಡ ಹಣ ಪಡೆದಿದ್ದು ಮತ್ತಷ್ಟು ಜನ ವಂಚನೆಗೊಳಗಾಗುವ ಸಾಧ್ಯತೆಗಳಿರುತ್ತದೆ.


ಈ ಬಗ್ಗೆ ಮೇಲೆ ತಿಳಿಸಿದ ಅಶ್ರಫ್ ಪರ್ಪುಂಜ ಎಂಬವನಲ್ಲಿ ವಂಚನೆಗೊಳಗಾದ ವ್ಯಕ್ತಿಗಳು ವಿಚಾರಿಸಿದಾಗ. ಜೀವ ಬೆದರಿಕೆ ಹಾಕಿದ್ದು ಮತ್ತು ಮುಂದೆಯೂ ಸಹ ನಾನು ಇದೇ ತರ ಉಮ್ರಾ ಯಾತ್ರಿಕರನ್ನು ಕರೆತರುತ್ತೆನೆ ಕರ್ನಾಟಕದಲ್ಲಿ ನನ್ನನ್ನು ಮೀರಿಸುವ ಗ್ರೂಪ್ ಇಲ್ಲಾ  ಎಂದು ಸೋಶಿಯಲ್ ಮೀಡಿಯಾ ಗಳಲ್ಲಿ  ಸಾರ್ವಜನಿಕರಿಗೆ ಸವಾಲು ಹಾಕಿರುವುದು ಕಂಡು ಬರುತ್ತದೆ.
ಇವನ ವಂಚನೆಯಿಂದ ಸಾರ್ವಜನಿಕರನ್ನು ರಕ್ಷಿಸಬೇಕಾದರೆ ದಕ್ಷಿಣ ಕನ್ನಡ ಜಿಲ್ಲಾಡಳಿತವು ಈ ವ್ಯಕ್ತಿಯ ಪಾಸ್ಪೋರ್ಟ್ ನ್ನು ಮುಟ್ಟುಗೊಲು ಹಾಕಿಕೊಂಡು ವಂಚನೆಗೊಳಗಾದವರಿಗೆ ನ್ಯಾಯ ಒದಗಿಸಬೇಕಾಗಿ ಮುಸ್ಲಿಂ ಯೂತ್ ಫೆಡರೇಶನ್ ಸುಳ್ಯ ತಾಲೂಕು ಸಮಿತಿ ಜಿಲ್ಲಾಡಳಿತಕ್ಕೆ ಮನವಿ ಮಾಡಿದೆ. ಎಂದು ಮಾಧ್ಯಮ  ಪ್ರಕಟನೆಯ  ಮೂಲಕ ಹೇಳಿಕೊಂಡಿದೆ
ಈ ಬಗ್ಗೆ ರಾಜ್ಯದ ವಖ್ಫ್ ಸಚಿವರನ್ನು ಭೇಟಿಯಾಗಿ ಸೂಕ್ತ ಕಾನೂನು ರೂಪಿಸುವ ಬಗ್ಗೆ ಚರ್ಚಿಸುವುದಾಗಿ ಮುಸ್ಲಿಂ ಯೂತ್ಫೆಡರೇಷನ್ ಸುಳ್ಯ ತಾಲೂಕು ಪದಾಧಿಕಾರಿಗಳು ಇವಾರ್ತೆ ಗೆ ತಿಳಿಸಿರುತ್ತಾರೆ

m

Related Posts