Featured, ಸ್ಥಳೀಯ

ಸಂಪಾಜೆ : ಸುಳ್ಯ ತಾಲೂಕು ಮಟ್ಟದ ಮತ್ತು ರಾಜ್ಯ ಮಟ್ಟದ ಸಂಪಾಜೆ ದಫ್‌ ಸ್ಪರ್ಧೆಯ ರ್ಯಾಲಿಗೆ ಉದ್ಯಮಿ ಬಿ ಯಂ ಫಾರೂಕ್ ರಿಂದ ಚಾಲನೆ

ಅನೀರಿಕ್ಷಿತವಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಉದ್ಯಮಿ ಬಿ ಯಂ ಫಾರೂಕ್ : ಸಂಘಟಕರಿಂದ ಗೌರವಾರ್ಪಣೆ

 

 

 

ಸುಳ್ಯ : ಮುಹಿಯ್ಯದ್ದೀನ್ ರಿಪಾಯಿ ದಫ್ ಅಸೋಸಿಯೇಶನ್ ಪೇರಡ್ಕ, ತೆಕ್ಕಿಲ್ ಸಮೂಹ ಶಿಕ್ಷಣ ಸಂಸ್ಥೆಗಳು ಗೂನಡ್ಕ, ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ, ಸಿ. ಕೆ. ಲೆಜೆಂಡ್ಸ್ ಕಲ್ಲುಗುಂಡಿ, ತಾಲೂಕು ಮುಸ್ಲೀಂ ಫೆಡರೇಷನ್ ಹಾಗು ಇತರ ಸಂಘ ಸಂಸ್ಥೆಗಳ ಸಹಕಾರದಲ್ಲಿ ಸುಳ್ಯ ತಾಲೂಕು ಮಟ್ಟದ ಹಾಗೂ ರಾಜ್ಯಮಟ್ಟದ ದಫ್ ಸ್ಪರ್ಧೆಯ ಅಂಗವಾಗಿ ಗೂನಡ್ಕ ರಸ್ತೆಯಲ್ಲಿ ವರ್ಣರಂಜಿತ ದಫ್ ರ್ಯಾಲಿ ದರ್ಖಾಸು ಜಂಕ್ಷನ್ ನಿಂದ ಗೂನಡ್ಕ ಸಜ್ಜನ ಮೈದಾನ ಅಂಗಣಕ್ಕೆ ಸಾಗಿ ಬಂತು ಈ ಮೊದಲು ರ್ಯಾಲಿ ಯನ್ನು ಅನೀರಿಕ್ಷಿತವಾಗಿ ಕಾರ್ಯಕ್ರಮದಲ್ಲಿ ಭಾಗಿಯಾದ ಮಾಜಿ ವಿಧಾನ ಪರಿಷತ್ ಸದಸ್ಯ, ಉದ್ಯಮಿ ಬಿ ಯಮ್ ಫಾರೂಕ್ ರ್ಯಾಲಿಗೆ ಚಾಲನೆ ನೀಡಿದರು ಇ ಸಂದರ್ಭದಲ್ಲಿ ದುವಾ ವನ್ನು ಪೇರಡ್ಕ ಮಸೀದಿ ಖತೀಬ್ ರಾದ ನಹೀಮ್ ಫೈಝಿ ನೆರವೇರಿಸಿದರು ಚಾಲನೆ ಕಾರ್ಯಕ್ರಮದಲ್ಲಿ ಜಿ ಕೆ ಹಮೀದ್ ಎಲ್ಲರನ್ನೂ ಸ್ವಾಗತಿಸಿದರು, ಟಿ ಮ್ ಶಹೀದ್, ಉಮ್ಮರ್ ಬೀಜದಕಟ್ಟೆ, ಎಸ್ ಕೆ ಹನೀಪ್ ಸಂಪಾಜೆ, ತಾಜ್ ಮಹಮ್ಮದ್, ಆಲಿಹಾಜಿ ಕಲ್ಲುಗುಂಡಿ, ಹನೀಫ್ ಮೊಟ್ಟೆಂಗಾರ್, ಸುಳ್ಯ ಮುಸ್ಲಿಂ ಯೂತ್ ಫೆಡರೇಶನ್ ಇದರ ಸದಸ್ಯರಾದ ಉಮ್ಮರ್ ಕೆ ಎಸ್, ಶರೀಫ್ ಕಂಠಿ, ರಶೀದ್ ಜಟ್ಟಿಪಳ್ಳ, ನಝೀರ್ ಶಾಂತಿನಗರ, ಕಲಂದರ್ ಎಲಿಮಲೆ, ಸಿದ್ದೀಕ್ ಕ್ಕೊಕ್ಕೊ, ಸಾಮಾಜಿಕ ಕಾರ್ಯಕರ್ತ ಆಶ್ರಫ್ ಟರ್ಲಿ, ಕಲಾಮ್ ಸುಳ್ಯ, ಅಬ್ಬುಲ್ ಖಾದರ್ ಮೊಟ್ಟೆಂಗಾರ್,ರಹೀಮ್ ಬೀಜದಕಟ್ಟೆ,


ಮೊದಲಾದವರು ಉಪಸ್ಥಿತರಿದ್ದು ವರ್ಣರಂಜಿತ ಯಾರ್ಲಿಯಲ್ಲಿ ಭಾಗವಹಿಸಿದ್ದರು

m

Related Posts