Featured, ಇತರೆ

ಮಕ್ಕಾ: ನಿರಂತರ ಭಾರೀ ಮಳೆಯಿಂದ ಪ್ರವಾಹಕ್ಕೆ ಒಳಗಾದ ಮಕ್ಕಾ ನಗರ

ನಿರಂತರ ಭಾರೀ ಮಳೆಯಿಂದಾಗಿ ಸೌದಿ ಅರೇಬಿಯಾದ ಮಕ್ಕಾದಲ್ಲಿ ರಸ್ತೆಗಳು ಜಲಾವೃತವಾಗಿವೆ. ಇದರಿಂದಾಗಿ ಅಲ್ಲಿನ ಸಹಜ ಸ್ಥಿತಿಗೆ ಹೆಚ್ಚಿನ ಪರಿಣಾಮ ಉಂಟಾಗಿದೆ.

ಸೌದಿ ಅರೇಬಿಯಾದ ಪವಿತ್ರ ನಗರಗಳಾದ ಮೆಕ್ಕಾ ಮತ್ತು ಮದೀನಾದಲ್ಲಿ ಕಳೆದ ಕೆಲವು ದಿನಗಳಿಂದ ಭಾರೀ ಮಳೆಯಾಗುತ್ತಿದೆ. ಇದರಿಂದಾಗಿ ರಸ್ತೆಗಳು ಜಲಾವೃತವಾಗಿವೆ. ಬಸ್ಸುಗಳು ಮತ್ತು ಕಾರುಗಳು ಚಲಿಸಲು ಸಾಧ್ಯವಾಗದೆ ಸರದಿಯಲ್ಲಿ ನಿಂತಿರುವ ವೀಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿವೆ.

ಜೆಡ್ಡಾ ನಗರದ ಹಲವು ಭಾಗಗಳು ಸಹ ಪ್ರವಾಹಕ್ಕೆ ಸಿಲುಕಿವೆ. ತಗ್ಗು ಪ್ರದೇಶಗಳಲ್ಲಿ ಸಿಲುಕಿರುವ ಜನರನ್ನು ರಕ್ಷಿಸಲು ಸೌದಿ ಸರ್ಕಾರ ಕಾರ್ಯಾಚರಣೆಯನ್ನು ತೀವ್ರಗೊಳಿಸಿದೆ. ತುರ್ತು ಸಹಾಯದ ಅಗತ್ಯವಿರುವವರು 997 ಗೆ ಕರೆ ಮಾಡಲು ಸಹ ಸೂಚಿಸಲಾಗಿದೆ.

ಸೌದಿ ಹವಾಮಾನ ಇಲಾಖೆ ಮಕ್ಕಾ, ಮದೀನಾ ಮತ್ತು ಜಿದ್ದ ನಗರಗಳಿಗೆ ರೆಡ್ ಅಲರ್ಟ್ ಘೋಷಿಸಿದೆ. ಸೌದಿ ರಾಜಧಾನಿ ರಿಯಾದ್, ಅಲ್-ಬಹಾ, ತಬೂಕ್ ಸೇರಿದಂತೆ ನಗರಗಳು ಕೂಡ ಭಾರೀ ಮಳೆಗೆ ತತ್ತರಿಸಿವೆ. ಈ ವಾರವಿಡೀ ಭಾರೀ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿರುವುದರಿಂದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವ ಪ್ರಯತ್ನ ನಡೆಯುತ್ತಿದೆ. ಪ್ರತಿಕೂಲ ಹವಾಮಾನದಿಂದಾಗಿ ಜೆಡ್ಡಾ ವಿಮಾನ ನಿಲ್ದಾಣದಲ್ಲಿ ಹಲವಾರು ವಿಮಾನಗಳನ್ನು ರದ್ದುಗೊಳಿಸಲಾಗಿದೆ, ಮಕ್ಕಾದಲ್ಲಿ ಶಿಕ್ಷಣ ಸಂಸ್ಥೆಗಳಿಗೆ ರಜೆ ನೀಡಲಾಗುತ್ತದೆ.

m

Related Posts