SSF ಬ್ಲಡ್ ಸೈಬೋ ಇದರ 325 ನೇ ಬೃಹತ್ ರಕ್ತದಾನ ಶಿಬಿರ ಹಾಗೂ ಸನ್ಮಾನ ಸಮಾರಂಭ
ಗೂನಡ್ಕ:- ಜನವರಿ 26 ರಂದು ಕರ್ನಾಟಕ ಮುಸ್ಲಿಂ ಜಮಾಅತ್ SYS SSF ಗೂನಡ್ಕ ಶಾಖೆ ವತಿಯಿಂದ ವಾರ್ಷಿಕ ಮಹ್ಲರತುಲ್ ಬದ್ರಿಯಾ, ಜಲಾಲಿಯ್ಯಾ ದ್ಸಿಕ್ರ್ ದುಆ ಮಜ್ಲಿಸ್ ಹಾಗೂ ಏಕ ದಿನ ಮತಪ್ರಭಾಷನ, ಮತ್ತು SSF ಬ್ಲಡ್ ಸೈಬೋ ಇದರ ಬೃಹತ್ ರಕ್ತದಾನ ಶಿಬಿರ ಹಾಗೂ ಸನ್ಮಾನ ಸಮಾರಂಭವು ಬದ್ರಿಯಾ ಜುಮಾ ಮಸೀದಿ ವಠಾರ ಗೂನಡ್ಕದಲ್ಲಿ ನಡೆಯಲಿದೆ, ಅಸ್ಸಯ್ಯದ್ ಕುಂಞಿಕೋಯ ತಂಙಳ್ ಸಅದಿ ಸುಳ್ಯ ದುಆ ಗೆ ನೇತೃತ್ವ ನೀಡಲಿದ್ದಾರೆ, ಮಶ್ಹೂದ್ ಸಖಾಫಿ ಗೂಡಲ್ಲೂರ್ ಮುಖ್ಯಪ್ರಭಾಷನ ಮಾಡಲಿದ್ದಾರೆ, ಮಸೀದಿ ಖತೀಬ್ ಅಬೂಬಕ್ಕರ್ ಸಿದ್ದೀಕ್ ಸಖಾಫಿ ಅಲ್ ಅರ್ಶದಿ ಉದ್ಘಾಟನೆ ಮಾಡಲಿದ್ದಾರೆ, ಮಸೀದಿ ಅಧ್ಯಕ್ಷರಾದ ಮಹಮ್ಮದ್ ಕುಂಞಿ ಗೂನಡ್ಕ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದೆ.
ಬೆಳಗ್ಗೆ 9:30 ರಿಂದ ಮಧ್ಯಾಹ್ನ 1 ಗಂಟೆ ವರೆಗೂ ಬೃಹತ್ ರಕ್ತದಾನ ಶಿಬಿರ ನಡೆಯಲಿದೆ, ಶಿಬಿರವನ್ನು ಪಿ ಬಿ ಸುಧಾಕರ ರೈ ಉದ್ಘಾಟಿಸಲಿದ್ದಾರೆ
ಅಸರ್ ನಮಾಝ್ ಬಳಿಕ ಮಹ್ಲರತುಲ್ ಬದ್ರಿಯಾ,ಮಗ್ರಿಬ್ ನಮಾಝ್ ಬಳಿಕ ಜಲಾಲಿಯ್ಯಾ ರಾತೀಬ್ ನಡೆಯಲಿದೆ ನಂತರ ಮುಖ್ಯ ಪ್ರಭಾಷಣ, ಸಭಾ ಕಾರ್ಯಕ್ರಮ ನಡೆಯಲಿದೆ, ಮಹಿಳೆಯರಿಗೆ ಪ್ರತ್ಯೇಕ ಸ್ಥಳಾವಕಾಶವನ್ನು ಏರ್ಪಡಿಸಲಾಗಿದೆ, ಕಾರ್ಯಕ್ರಮದಲ್ಲಿ ಹಲವಾರು ಸಾಮಾಜಿಕ ಧಾರ್ಮಿಕ ನಾಯಕರು ಭಾಗವಹಿಸಿದ್ದಾರೆ, ಸರ್ವರನ್ನು ಕಾರ್ಯಕ್ರಮಕ್ಕೆ ಆಹ್ವಾನವನ್ನು ಇ ವಾರ್ತೆ ಪ್ರಕಟಣೆ ಮೂಲಕ ಸಂಘಟಕರು ತಿಳಿಸಿದ್ದಾರೆ.






m

