Featured, ಅಂಕಣ, ಸ್ಥಳೀಯ

ಇಂದು (ಫೆಬ್ರವರಿ 1) ಗೂನಡ್ಕದಲ್ಲಿ ಗ್ರ್ಯಾಂಡ್ ಇಶಲ್ ನೈಟ್, ಮಹ್ಳರತುಲ್ ಬದ್ರಿಯಾ ವಾರ್ಷಿಕ ಹಾಗೂ ಜಲಾಲಿಯ್ಯ ಮಜ್ಲಿಸ್

ಗೂನಡ್ಕ: 2026 ಫೆಬ್ರವರಿ 1ರಂದು ಆದಿತ್ಯವಾರ ಕರ್ನಾಟಕ ಮುಸ್ಲಿಂ ಜಮಾಅತ್, SYS, SSF ಹಾಗೂ SBS ಸಂಯುಕ್ತ ಆಶ್ರಯದಲ್ಲಿ ಗೂನಡ್ಕದಲ್ಲಿ ಗ್ರ್ಯಾಂಡ್ ಇಶಲ್ ನೈಟ್, ಮಹ್ಳರತುಲ್ ಬದ್ರಿಯಾ ವಾರ್ಷಿಕ ಹಾಗೂ ಜಲಾಲಿಯ್ಯ ಮಜ್ಲಿಸ್ ಕಾರ್ಯಕ್ರಮ ಭಕ್ತಿಪೂರ್ಣ ವಾತಾವರಣದಲ್ಲಿ ನಡೆಯಲಿದೆ.

ಅಸರ್ ನಮಾಝ್ ಬಳಿಕ ಮಹ್ಳರತುಲ್ ಬದ್ರಿಯಾ ವಾರ್ಷಿಕ ಹಾಗೂ ಜಲಾಲಿಯ್ಯ ಮಜ್ಲಿಸ್ ಕಾರ್ಯಕ್ರಮಕ್ಕೆ ಅನಸ್ ಅಹ್ಸನಿ ಅಲ್ ಮಳ್ಹರಿ ಜೋಗಿಬೆಟ್ಟು ನೇತೃತ್ವ ವಹಿಸಲಿದ್ದಾರೆ. ಮಗ್ರಿಬ್ ನಮಾಝ್ ಬಳಿಕ ನಡೆಯುವ ಗ್ರ್ಯಾಂಡ್ ಇಶಲ್ ನೈಟ್ ಕಾರ್ಯಕ್ರಮದಲ್ಲಿ ಶುಕೂರ್ ಇರ್ಫಾನಿ, ಅಝರುದ್ದೀನ್ ರಬ್ಬಾನಿ ಕಲ್ಲೂರ್, ಮುಝಮ್ಮಿಲ್ ತಂಙಳ್, ಮುಬಶ್ಶಿರ್ ಹಾಗೂ ನಾಶಿದ್ ನೇತೃತ್ವ ನೀಡಲಿದ್ದಾರೆ..

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬದ್ರಿಯಾ ಮಸೀದಿ ಗೂನಡ್ಕ ಅಧ್ಯಕ್ಷರಾದ ಮಹಮ್ಮದ್ ಕುಂಞಿ ವಹಿಸಲಿದ್ದು, ಗೂನಡ್ಕ ಖತೀಬ್ ಅಬ್ದುಲ್ ರಹಿಮಾನ್ ಸಖಾಫಿ ದುಆ ನೆರವೇರಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಸ್ತ್ರೀಯರಿಗೆ ಪ್ರತ್ಯೇಕ ಸ್ಥಳಾವಕಾಶ ಕಲ್ಪಿಸಲಾಗಿದ್ದು, ಹಲವಾರು ಉಲಮಾ, ಉಮಾರ ನಾಯಕರು, ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕ ಕ್ಷೇತ್ರದ ಗಣ್ಯರು ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಕೊನೆಯಲ್ಲಿ ಸೀರಣಿ ವಿತರಣೆ ನಡೆಯಲಿದೆ. ಎಂದು SSF ಗೂನಡ್ಕ ಯೂನಿಟ್ ಅಧ್ಯಕ್ಷ ಉನೈಸ್ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Posts