Featured, ಇತರೆ, ಸ್ಥಳೀಯ

ಅನ್ಸಾರುಲ್ ಮುಸ್ಲಿಮೀನ್ ಯಂಗ್ ಮೆನ್ಸ್ ಅಸೋಸಿಯೇಷನ್ ಗುತ್ತಿಗಾರು – ನೂತನ ಕಾರ್ಯಕಾರಿ ಸಮಿತಿ ರಚನೆ

ಅಧ್ಯಕ್ಷರಾಗಿ ಅಶ್ರಫ್ ವಳಲಂಬೆ, ಪ್ರಧಾನ ಕಾರ್ಯದರ್ಶಿಯಾಗಿ ಸಮದ್ ಬಾಕಿಲ ಅಯ್ಕೆ

ಗುತ್ತಿಗಾರು, ಜ.30: ಅನ್ಸಾರುಲ್ ಮುಸ್ಲಿಮೀನ್ ಯಂಗ್ ಮೆನ್ಸ್ ಅಸೋಸಿಯೇಷನ್ ಗುತ್ತಿಗಾರು ಇದರ 2025ನೇ ಸಾಲಿನ ವಾರ್ಷಿಕ ಮಹಾಸಭೆ ಗುತ್ತಿಗಾರು ಮದರಸ ವಠಾರದಲ್ಲಿ ಜರುಗಿತು.
ಸಭೆಯನ್ನು ಸುಲೈಮಾನ್ ಸಅದಿ ಅವರು ದುವಾ ನೆರವೇರಿಸುವ ಮೂಲಕ ಉದ್ಘಾಟಿಸಿದರು. ನಂತರ ನಿಕಟಪೂರ್ವ ಕಾರ್ಯದರ್ಶಿ ಕಲಂದರ್ ಬಾಕಿಲ ಅವರು ಸಂಘಟನೆಯ ವಾರ್ಷಿಕ ವರದಿ ವಾಚಿಸಿ ಲೆಕ್ಕಪತ್ರವನ್ನು ಮಂಡಿಸಿದರು.
ಸಭೆಯಲ್ಲಿ 2026–27ನೇ ಸಾಲಿನ ನೂತನ ಸಮಿತಿಗೆ ಪದಾಧಿಕಾರಿಗಳ ಆಯ್ಕೆ ನಡೆಯಿತು. ಇದರಂತೆ ಅಧ್ಯಕ್ಷರಾಗಿ ಅಶ್ರಫ್ ವಳಲಂಬೆ, ಉಪಾಧ್ಯಕ್ಷರಾಗಿ ಆಸಿಫ್ ವಳಲಂಬೆ, ಪ್ರಧಾನ ಕಾರ್ಯದರ್ಶಿಯಾಗಿ ಸಮದ್ ಬಾಕಿಲ ಹಾಗೂ ಜೊತೆ ಕಾರ್ಯದರ್ಶಿಗಳಾಗಿ ರಹೀಂ ವಳಲಂಬೆ ಮತ್ತು ನಿಜಾಮುದ್ದೀನ್ ಅವರು ಆಯ್ಕೆಯಾದರು.
ನೂತನ ಪದಾಧಿಕಾರಿಗಳಿಗೆ ಸಭೆಯಲ್ಲಿದ್ದ ಸದಸ್ಯರು ಅಭಿನಂದನೆ ಸಲ್ಲಿಸಿ, ಸಂಘಟನೆಯ ಧಾರ್ಮಿಕ-ಸಾಮಾಜಿಕ ಚಟುವಟಿಕೆಗಳನ್ನು ಇನ್ನಷ್ಟು ಬಲಪಡಿಸುವಂತೆ ಶುಭಾಶಯ ಕೋರಿದರು.

 

Related Posts