Featured, ಇತರೆ, ಸ್ಥಳೀಯ

ಸುಳ್ಯ ನಗರದ ಲಾಡ್ಜ್‌ನಲ್ಲಿ ಕೇರಳ ಮೂಲದ ವ್ಯಕ್ತಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ !

ಸುಳ್ಯ (ದಕ್ಷಿಣ ಕನ್ನಡ), ಜ.31, 2026:
ಸುಳ್ಯ ನಗರದ ಲಾಡ್ಜ್‌ವೊಂದರಲ್ಲಿ ಕೇರಳ ಮೂಲದ ವ್ಯಕ್ತಿಯ ಮೃತದೇಹ ಪತ್ತೆಯಾಗಿರುವ ಘಟನೆ ಶನಿವಾರ ಬೆಳಕಿಗೆ ಬಂದಿದೆ.
ಲಾಡ್ಜ್‌ನ ಕೋಣೆಯೊಂದರಲ್ಲಿ ವಾಸವಾಗಿದ್ದ ವ್ಯಕ್ತಿಯಿಂದ ಯಾವುದೇ ಚಲನವಲನ ಕಾಣಿಸದಿರುವುದನ್ನು ಗಮನಿಸಿದ ಲಾಡ್ಜ್ ಸಿಬ್ಬಂದಿ, ಕೂಡಲೇ ಈ ಕುರಿತು ಸುಳ್ಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ, ಮೃತದೇಹ ಪತ್ತೆಯಾದ ಕೋಣೆಯನ್ನು ಪರಿಶೀಲಿಸಿದರು.
ಪ್ರಾಥಮಿಕ ತನಿಖೆಯ ಪ್ರಕಾರ, ಇದು ನೈಸರ್ಗಿಕ ಸಾವು ಎಂದು ಅಂದಾಜಿಸಲಾಗಿದ್ದು, ಮೃತ ವ್ಯಕ್ತಿಯ ಗುರುತು ಪತ್ತೆಯಾಗಿದೆ. ಮೃತರು ಕೇರಳ ರಾಜ್ಯದ ವಯನಾಡ್ ಜಿಲ್ಲೆಯ ನಡವಯಲ್, ಪುತುಕ್ಕುಳತಿಲ್ ನಿವಾಸಿ ವಿಜೇಶ್, ಎಂಬುವವರು ಎಂದು ತಿಳಿದುಬಂದಿದೆ.


ಮೃತ ವ್ಯಕ್ತಿ ಸುಳ್ಯ ಪಂಜ ಸಮೀಪದ ರಬ್ಬರ್ ತೋಟವೊಂದನ್ನು ನೋಡಿಕೊಳ್ಳುವ ಕೆಲಸ ನಿರ್ವಹಿಸುತ್ತಿದ್ದು, ಕೆಲಸದ ನಿಮಿತ್ತ ಸುಳ್ಯ ನಗರದಲ್ಲಿರುವ ಲಾಡ್ಜ್‌ನಲ್ಲಿ ವಾಸವಾಗಿದ್ದರು ಎನ್ನಲಾಗಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಮೃತರ ಸಂಬಂಧಿಕರು ಸುಳ್ಯಕ್ಕೆ ಆಗಮಿಸಿದ್ದು, ಮುಂದಿನ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ ಬಳಿಕ, ಸುಳ್ಯದ ಕೊಡಿಯಾಲ ಬೈಲು ಸ್ಮಶಾನದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ತಿಳಿದುಬಂದಿದೆ.
ಈ ಸಂದರ್ಭದಲ್ಲಿ ಸುಳ್ಯ ಪೊಲೀಸರೊಂದಿಗೆ ಸಮಾಜ ಸೇವಕ ಅಚ್ಚು ಪ್ರಗತಿ ಅವರು ಸಹಕರಿಸಿದರು.

Related Posts