Featured, ಇತರೆ, ಸ್ಥಳೀಯ

ಸುಳ್ಯ : ಅಕ್ರಮ ಕೋಳಿ ಅಂಕಕ್ಕೆ ಸುಳ್ಯ ಪೊಲೀಸ್ ದಾಳಿ : ಕೋಳಿ ಮತ್ತು ಬೈಕ್ ವಶ — ಅಂಕಗಾರರು ಪರಾರಿ.!!

ಸುಳ್ಯ ಉಬರಡ್ಕ ಸಮೀಪದ ಮದಕ ಎಂಬಲ್ಲಿ ಅಕ್ರಮವಾಗಿ ಕೋಳಿ ಅಂಕಣ ನಡೆಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಸುಳ್ಯ ಪೊಲೀಸರು ದಾಳಿ ನಡೆಸಿದ್ದಾರೆ. ದಾಳಿಯ ವೇಳೆ ಅಂಕಣದಲ್ಲಿ ಕಟ್ಟಲಾಗಿದ್ದ ಕೋಳಿಗಳನ್ನು ಹಾಗೂ ಸ್ಥಳದಲ್ಲಿದ್ದ ಒಂದು ದ್ವಿಚಕ್ರ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಪೊಲೀಸರ ಆಗಮನವನ್ನು ಗಮನಿಸಿದ ಅಂಕಣದಲ್ಲಿ ಆಡುತ್ತಿದ್ದ ಅಂಕಗಾರರು ಸ್ಥಳದಿಂದ ಪರಾರಿಯಾಗಿರುವುದು ತಿಳಿದುಬಂದಿದೆ. ಈ ಸಂಬಂಧ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಮುಂದುವರಿಸಲಾಗಿದೆ.
ದಾಳಿಯಲ್ಲಿ ಸುಳ್ಯ ಅಪರಾಧ ವಿಭಾಗದ ಉಪನಿರೀಕ್ಷಕಿ ಸರಸ್ವತಿ, ಎಎಸ್‌ಐ ತಾರಾನಾಥ್ ಹಾಗೂ ಇತರ ಪೊಲೀಸ್ ಸಿಬ್ಬಂದಿ ಭಾಗವಹಿಸಿದ್ದರು.

Related Posts