Featured, ಅಂಕಣ, ಸ್ಥಳೀಯ

ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಕೊಡಗು ಜಿಲ್ಲೆ ಇದರ ವತಿಯಿಂದ ನಡೆಯುವ ಕನ್ನಡ ಶಾಲೆ ಉಳಿಸಿ ಬೆಳೆಸಿ ಅಭಿಯಾನದ ಪ್ರಯಕ್ತ ಕೊಯನಾಡು ಶಾಲೆಯಲ್ಲಿ ಆಟೋಪಕರಣಗಳ ಉದ್ಘಾಟನೆ

ಕೊಯನಾಡು:- ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಯನಾಡು ವಿನಲ್ಲಿ ಜನವರಿ 26 ರಂದು ಗಣರಾಜ್ಯೋತ್ಸವ ಮತ್ತು ಶಾಲಾ ವಾರ್ಷಿಕೋತ್ಸವದಂದು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಕೊಡಗು ಜಿಲ್ಲೆ ಇದರ ವತಿಯಿಂದ ಕನ್ನಡ ಶಾಲೆ ಉಳಿಸಿ ಬೆಳೆಸಿ ಅಭಿಯಾನದ 49 ನೇ ಶಾಲೆ ಕೊಯನಾಡು ಶಾಲೆಯಲ್ಲಿ ನಡೆಯಿತು, ರಕ್ಷಣಾ ವೇದಿಕೆಯಿಂದ ಕೊಡುವಂತಹ ದಾನಿಗಳಾದ ಸುನೀತಾ ಮಹೇಶ್ವರಿ ಮತ್ತು ಅರ್ಜುನ್ ಕಲ್ಯಾಣಪುರ ರವರು ಕೊಡುವಂತಹ ಆಟೋಪಕರಣಗಳು ಮತ್ತು ಜಾರುಬಂಡಿಯನ್ನು ಶಾಲೆ ಹಸ್ತಾಂತರಿಸಿ ಉದ್ಘಾಟನೆ ಮಾಡಲಾಯಿತು, ಉದ್ಘಾಟನೆಯನ್ನು ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ರಮಾದೇವಿ ಕಳಗಿ ಉದ್ಘಾಟಿಸಿದರು, ಈ ಸಂದರ್ಭದಲ್ಲಿ ಶಾಲಾ SDMC ಅಧ್ಯಕ್ಷರಾದ ಪುರುಷೋತ್ತಮ ಬಿಸುಲುಮನೆ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹನೀಫ್ ಎಸ್ ಪಿ, ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಕೊಡಗು ಜಿಲ್ಲಾಧ್ಯಕ್ಷರಾದ ಉನೈಸ್ ಪೆರಾಜೆ, ಗ್ರಾಮ ಪಂಚಾಯತ್ ಸದಸ್ಯರಾದ ನವೀನ್ ಕುಮಾರ್, ಜಗದೀಶ್ ಪರಮಲೆ, ಶಾಲಾ ಮುಖ್ಯೋಪಾಧ್ಯಾಯರಾದ ವನಿತಾಮಣಿ, SDMC ಸದಸ್ಯರು, ಹಿರಿಯ ವಿಧ್ಯಾರ್ಥಿಗಳು, ಸಾರ್ವಜನಿಕರು, ಪೋಷಕರು ಉಪಸ್ಥಿತರಿದ್ದರು.

m

Related Posts