ಕವನ
ಮರಣವೇ ನೀ ಏಕೆ ಬರುವೆ?
ಸುಂದರವಾದ ಸಮಯಗಳನ್ನು
ಮಜಾದಿಂದ ಕಳೆಯುವಾಗ
ಮರಣವೇ ನೀ ಏಕೆ ಬರುವೆ?
ಶಾಲಾ ದಿನಗಳಲ್ಲಿ ಸಹಪಾಠಿಗಳ ಜೊತೆ ಸಂಭ್ರಮದಿಂದಿರುವಾಗ
ಮರಣವೇ ನೀ ಏಕೆ ಬರುವೆ?
ಉನ್ನತ ಶಿಕ್ಷಣವನ್ನು ಪೂರೈಸಿ
ಉದ್ಯೋಗ ಹಿಡಿದು ಹೋಗುವಾಗ
ಮರಣವೇ ನೀ ಏಕೆ ಬರುವೆ?
ವೈವಾಹಿಕ ಜೀವನದ ಕನಸಿನಲ್ಲಿ
ದಿನಗಳಿಲ್ಲಿ ಉರುಳುತ್ತಲಿರುವಾಗ
ಮರಣವೇ ನೀ ಏಕೆ ಬರುವೆ?
ಮದುವೆ ಮುಗಿದು ಗಂಟೆಗಳಿಲ್ಲಿ
ಕಳೆಯುವಷ್ಟರಲ್ಲಿ ಎಲ್ಲಿಂದಲೋ
ಮರಣವೇ ನೀ ಏಕೆ ಬರುವೆ?
ಸುಖವಾಗಿ ಬಾಳಲು ಬಿಡು ಇಲ್ಲಿ
ಅನರ್ಥಕಾರಿಯಾಗಿ ಓಡಿ ಓಡಿ
ಮರಣವೇ ನೀ ಏಕೆ ಬರುವೆ?
ಸಾರ್ಥಕ್ಯ ಅನುಭವಿಸಲಿ ಲೋಕದಿ
ಬಸವಳಿದ ಬಡ ಮನಗಳು
ಮರಣವೇ ನೀ ಏಕೆ ಬರುವೆ?
ಚಿರಂಜೀವಿಗಳಿರುವರು ಧರೆಯಲ್ಲಿ
ಶಾಶ್ವತವಾಗಿ ಇಲ್ಲಿರುವರು ಅವರೆಲ್ಲ
ಮರಣವೇ ನೀ ಏಕೆ ಬರುವೆ?
✍️ ಎಂ.ಎ.ಮುಸ್ತಫಾ ಬೆಳ್ಳಾರೆ





m
