Featured, ಅಂಕಣ, ಸ್ಥಳೀಯ

NO.1 ಸಾರಿಗೆ ಕರ್ನಾಟಕ KSRTC

ಸಾರಿಗೆ ಅಂದರೆ ಹೀಗಿರಬೇಕು

ನಾಮದಲ್ಲು ನೋಟದಲ್ಲೂ

ಸೇವೆಯಲ್ಲು ಸೌಂದರ್ಯದಲ್ಲೂ

ದೇಶಕ್ಕೇ ನಂಬರ್ ಒನ್

ನಮ್ಮ ಕರ್ನಾಟಕ ಸಾರಿಗೆ

ಉತ್ತರ ನೈರುತ್ಯ ದಕ್ಷಿಣ ಈಶಾನ್ಯ

ನಗರ ಗ್ರಾಮ ಅಂತರ್ ರಾಜ್ಯಗಳಿಗೆ

ವರ್ಣರಂಜಿತ ವಿಶಿಷ್ಟ ಬಸ್ಸುಗಳು

ಕರುನಾಡ ಸಾರಿಗೆಯ ಸೇವೆಗಳು

ಶ್ವೇತ ವರ್ಣದ ಐರಾವತ ಸುಂದರಿ

ಸುಖ ನಿದ್ದೆಗೆ ಎರಡಂತಸ್ತಿನ ಅಂಬಾರಿ

ಕೆಂಪಗಿನ ಕನ್ಯೆ ಸಾಮಾನ್ಯ ಸಾರಿಗೆ

ಹೆಮ್ಮೆಯಾಗಿ ಸದಾ ಕರುನಾಡಿಗೆ

ಮಹಾನಗರದ ಬೃಹತ್ ಬೀದಿಗಳಲ್ಲಿ

ಬಣ್ಣಬಣ್ಣದ ನಗರ ಸಾರಿಗೆ ಗಳು

ಗ್ರಾಮದ ಸುಂದರ ಹಾದಿಗಳಲ್ಲಿ

ಗ್ರಾಮಾಂತರ ಸಾರಿಗೆಗಳು

ವೇಗದ ನವೀಕೃತ ಅಶ್ವಮೇಧ

ಪಾರಿವಾಳದ ರೂಪದಿ ರಾಜಹಂಸ

ವಿಮಾನಕ್ಕೇರಿಸುವ ಫ್ಲೈ ಬಸ್ಸುಗಳು

ವಿದ್ಯುತ್ ಚಾಲಿತ ನೀಲಿ ತಾರೆಗಳು

ಮಿತ ದರಕ್ಕೆ ದೂರ ಯಾತ್ರೆ

ಸುರಕ್ಷಿತ ಮತ್ತು ಸುಖಕರ ಯಾತ್ರೆ

ಮಹಿಳೆಯರಿಗೆ ಪ್ರಯಾಣ ಉಚಿತ

ವಿದ್ಯಾರ್ಥಿಗಳಿಗೆ ರಿಯಾಯಿತಿ ಖಚಿತ

ಅಭಿಮಾನವಿದೆ ನಮ್ಮ ಬಸ್ಸೆನ್ನಲು

ಎದೆಯೆತ್ತಿ ಅಶ್ವಮೇಧ ಏರಲು

ಅಂಬಾರಿ, ಐರಾವತದಿ ಕೂರಲು

ನೆಮ್ಮದಿಯ ಸಾರಿಗೆಯಲಿ ಸಾಗಲು

Shafi Anvaari Kodagu Karnataka

m

Related Posts