ಅನಂತ ಆಕಾಶ ಗಗನದಲ್ಲಿ ನಮಗೆ
ಸುಖದ ಸುಪ್ಪತ್ತಿಗೆ ಅಡಗಿದೆ
ಇಳೆ ಧರೆ ಧರಿತ್ರಿಯಲ್ಲಿ ನಮ್ಮ
ದೀರ್ಘಾಯುಷ್ಯದ ಗುಟ್ಟು ಇದೆ
ಕಡಲು ಸಾಗರ ಸಮುದ್ರದಲ್ಲಿ
ತಂಪಾದ ಬಾಳು ಹುದುಗಿದೆ
ಬೆಟ್ಟ ಪರ್ವತ ಶಿಖರದ ತಪ್ಪಲಲ್ಲಿ
ಬಾಳು ಪೂರ್ಣ ಮೇಲ್ಮಟ್ಟದಲ್ಲಿದೆ
ಕಾಡು ಅರಣ್ಯ ಅಡವಿಯ ಒಳಗೆ
ಬದುಕು ತಂಪಾಗಿ ಸಾಗಿದೆ
ನದಿ ತೊರೆ ಸರೋವರಗಳೆಲ್ಲವೂ
ಸುಂದರವಾದ ಹಾಡು ಹಾಡುತಿವೆ
ಹೂವು ಸುಮ ಪುಷ್ಪಗಳರಳಿ
ಜಾಗತಿಕ ಸುದ್ದಿ ತಲುಪಿಸುವವು
ಹಕ್ಕಿ ಪಕ್ಷಿ ಬಾನಾಡಿಗಳು ಒಂದಾಗಿ
ನೀತಿಯ ಮಳೆಯ ಸುರಿಸುವವು
ಗಿಡ ಮರ ವೃಕ್ಷ ಭುವಿಯಲ್ಲಿ
ಚರಿತ್ರೆಯಲ್ಲಿ ನೆರಳಾಗಿರುವವು
ಪ್ರಾಣಿ ಮೃಗ ಕ್ರೂರಿ ವರ್ಗಗಳು
ಮನುಷ್ಯರನ್ನು ಅಟ್ಟಾಡಿಸುವವು?
✍️ ಎಂ.ಎ.ಮುಸ್ತಫಾ ಬೆಳ್ಳಾರೆ
ವಿಳಾಸ-ಬೂಡು ಮನೆ, ಬೆಳ್ಳಾರೆ ಗ್ರಾಮ ಮತ್ತು ಅಂಚೆ ,ಸುಳ್ಯ ತಾಲೂಕು ,ದ ಕ-574212ಸಂಚಾರಿವಾಣಿ ಸಂಖ್ಯೆ-7259153922





m
