Featured, ಅಂಕಣ, ಸ್ಥಳೀಯ

ಜನಿವಾರ..

ಜನಿವಾರ ಕೇವಲ

ಒಂದು ತುಂಡು

ದಾರ ಅಲ್ಲ…!!

ಹಿಜಾಬ್ ಕೇವಲ

ಒಂದು ತುಂಡು

ಬಟ್ಟೆಯೂ ಅಲ್ಲ…!!

ಅರಿವು ಮೂಡುವಾಗ

ಬಹು ದೂರ

ಸಾಗಿ ಬಂದು ಅಯಿತಲ್ಲ….!!

ತಲೆಗೆ ಹೊಯ್ದ ವಿಷ

ಕಾಲ ಬುಡಕ್ಕೆ

ಬರಲು ಸಮಯ ಬೇಕಿಲ್ಲ….!

ಪಕ್ಕದ ಮನೆ ಉರಿವಾಗ

ನಗದಿರು

ಕಾಲ,ಗಾಳಿಗೆ ಹಿಡಿತ ಇಲ್ಲ….!!

ಅಹಂಕಾರ ಬೇಡ

ಚಪ್ಪಲಿಗೆ ಇರುವ ಗ್ಯಾರಂಟಿ

ಚಪ್ಪಲಿ ಹೊರುವ ಮನುಜನಿಗಿಲ್ಲ..!!

ವಕ್ಫ್ , ಹಿಜಾಬ್, ಜನಿವಾರ,

ಶಿಲುಬೆ ಮುಟ್ಟಿದರೆ

ಸುಟ್ಟು ಹೋಗದೆ ಇರಲಿಕ್ಕಿಲ್ಲ…!!

ಧರ್ಮದಿಂದ ನಡೆದರೆ

ನಿಸರ್ಗವು ಮಾನವನ ಸುಖಕ್ಕೆ ಅನುಕೂಲವಾಗಲೇ ಬೇಕಲ್ಲ..!!

ಲೋಕಾ ಸಮಸ್ತಾಃ ಸುಖಿನೋ ಭವಂತು

ಸರ್ವೇ ಜನಾಃ ಸುಖಿನೋ ಭವಂತು

ಇದುವೇ ಧರ್ಮ ಬೇರೆ ಏನೂ ಅಲ್ಲ…!!

ದ್ವೇಷದ ದಳ್ಳುರಿಯ ಗುಂಗು ಇಲ್ಲ.

ದುಷ್ಟತೆಯ ಹಂಗಂತೂ ಮೊದಲೇ ಇಲ್ಲ.

ಧರ್ಮ ಎಷ್ಟೊಂದು ಸರಳ…!!

ದೇವ ಮಂದಿರದಿ ದೇವನ ಮಾತಾಡಿ,

ಹೊರಗೆ ಬಂದಾಗ ಮಾನವೀಯತೆ

ಕಾಣದೆ ಪ್ರಯೋಜನ ಇಲ್ಲ……!!

ಮಲಿನ ಮನಸಿಗೆ ಮಂದಿರ ಮಸೀದಿ

ಯಾವ ಪುರುಷಾರ್ಥ….

ಮನದ ಜ್ಯೋತಿಯ ಬೆಳಗಿಸದ

ಧರ್ಮಕ್ಕೆ ಯಾವ ಅರ್ಥ…!!

ಅಂತರಂಗದ ಕೊಳಕ ತೊಲಗಿಸಲು.

ನನ್ನೊಳಗಿನ ದೇವನ

ನಾನು ಕಂಡರೆ ನಾನು ಅತಿ ಸಮರ್ಥ

ಜಮುಕ್ರಿ

m

Related Posts