Featured, ಅಂಕಣ, ಲೇಖನ, ಸ್ಥಳೀಯ

ಕಣ್ಣೀರ ಯಾತ್ರೆ

ಅಹ್ಮದಾಬಾದ್ ನಿಂದ ಹೊರಟು

ಲಂಡನ್ ಗೆ ತಲುಪಬೇಕಾಗಿದ್ದ

ಏರ್ ಇಂಡಿಯಾ 171 ವಿಮಾನ

ತಾಂತ್ರಿಕ ದೋಷಕ್ಕೀಡಾಯಿತು

 

ಸುಮಾರು 242 ಪ್ರಯಾಣಿಕರು

ಪೈಲಟ್ ಗಳು ಗಗನಸಖಿಯರು

ವಿಮಾನದ ಹಲವು ಸಿಬ್ಬಂದಿಗಳು

ಎಲ್ಲರನ್ನೂ ಹೊತ್ತು ಹಾರಿದ ವಿಮಾನ

ಪತನವಾಗಿ ಗೋಚರವಾಯಿತು

 

ವರುಷಕ್ಕಿರುವ ಸಾಮಾಗ್ರಿಗಳು

ತಂಗಲಿರುವ ವಿದೇಶೀ ವೀಸಾ

ನೆಲೆಸಲಿರುವ ಮನೆ ಮಠಗಳು

ಎಲ್ಲವನ್ನೂ ಮುಂಗಡ ಸಿದ್ದಪಡಿಸಿ

ಬೋರ್ಡಿಂಗ್ ಪಾಸ್ ಎಮಿಗ್ರೆಷನ್

ಪಾಸ್ಪೋರ್ಟ್ ಬಧ್ರವಾಗಿ ಕೈಲಿರಿಸಿ

ಹ್ಯಾಪಿ ಜರ್ನಿ ಎಂಬ ಶುಭಸುದ್ದಿ

ಆಲಿಸುತ್ತಾ ಪ್ರಯಾಣ ಹೊರಟರು

 

ಊಹೆಗೂ ನಿಲುಕದ ಘಟನೆ

ಸೇಫ್ಟಿ ಬೆಲ್ಟ್ ಭಿಗಿಯಾಗಿರಿಸಿ

ತುರ್ತು ಸುರಕ್ಷೆಗಳನ್ನು ಆಲಿಸಿ

ಪ್ರಯಾಣ ನಿಯಮವ ಪಾಲಿಸಿ

ಎತ್ತರದ ಆಕಾಶದಲಿ ಕುಳಿತು

ವಿಶಾಲ ಭೂಮಿಯ ನೋಡುತ್ತಾ

 

ಸಾವಿರ ಕನಸಿನ ಮೂಟೆ ಹೊತ್ತು

ತವರಿಗೆ ಮರಳುವ ನಿರೀಕ್ಷೆ ಇಟ್ಟು

ಯಾತ್ರೆಯ ಹೇಳಿ ಹೊರಟವರು

ಬಾರದ ಪ್ರಪಂಚದಕ್ಕೆ ಮರಳಿದರು

 

ದೇಶ ಕಂಡ ಅತ್ಯಂತ ಭೀಕರ ದಾರುಣ ವಿಮಾನ ದುರಂತ

ನುಚ್ಚು ನೂರು,ಛಿದ್ರವಾಯಿತು

ಕನಸು ಕಂಡ ಹೃದಯಗಳ ಹೊತ್ತ

ನೂರಾರು ಮನುಷ್ಯ ದೇಹಗಳು

ಬೆಂಕೀಲಿ ಬೆಂದು ಭಸ್ಮವಾಯಿತು.

 

ಬದಲಿಡಲು ಅಂತರಾoಜಲಿ

ಅಲ್ಲದೆ ಬೇರೇನಿದೆ ನಮ್ಮಲ್ಲಿ

ಬೇರೇನಿಟ್ಟರು ಆ ಜೀವಗಳಿಗೆ

ಬದಲಾಗುತ್ತದೆಯೇ ಹೇಳಿ…..

ಬರಹ:- ಶಾಫಿ ಅನ್ವಾರಿ ಸಖಾಫಿ ಕೊಡಗರಹಳ್ಳಿ ಕೊಡಗು

m

Related Posts