Featured, ಅಂಕಣ, ಲೇಖನ

ರಮದಾನ್

ಓ ಮನುಜ..,

ಪುಣ್ಯ ವಸಂತದ ಮಾಸವೂ ನಮ್ಮಿಂದ ವಿರಾಮ ಹೇಳಿತ್ತಿದೆ

ಬದುಕಿರುವಾಗ ಒಳಿತು ಮಾಡು

ಅದುವೇ ನಿನ್ನ ಪರಲೋಕ

ಜೀವನದ ವಿಜಯದ ಹಾದಿ,

ಮರಣವೆಂಬ ಮೂರು ಅಕ್ಷರದ ಮತ್ತೊಂದು ಜೀವನಕ್ಕೆ

ಇಹದಲ್ಲಿ ಮಾಡಿದ ಒಳಿತು ಅಲ್ಲದೇ ಬೇರೇನೂ ಅಲ್ಲಿ,

ಕೆಡುಕು ತಿಳಿದು ತಿದ್ದಿಕ್ಕೋ ಮನುಜ

ಎಂದು ರಮದಾನ್ ನಮ್ಮಲ್ಲಿ ಹೇಳುತ್ತಿದೆ,

ಮತ್ತೊಂದು ಅವಕಾಶ ಸಿಗದು ನಿನಗೆ

ಪಾಪ ವಿಮೋಚನಕ್ಕೆ,

ಸಿಕ್ಕ ಅವಕಾಶವ ಸದುಪಯೋಗ ಪಡಿಸದೇ ಇದ್ದಲ್ಲಿ

ನೀ ಮನುಜನೇ ಅಲ್ಲ,

ಪುಣ್ಯ ತಿಂಗಳಲ್ಲಿ ಪಾಪದ ಕಳೆಯ ತೊಳೆದುಕೋ

ಖಬರ್ ಭಯಾನಕ ವೆಂಬುದು ಗೊತ್ತಲ್ಲವೇ,

ಮತ್ತೇ ಯಾಕೇ ನೀ ಈ ರೀತಿಯಾದೆ ಮನುಜ

ಮತ್ತೇ ಮತ್ತೇ ಹೇಳುತ್ತೇನೆ ಇದು ನಿನ್ನ ಕೊನೆ ಅವಕಾಶ

ತಿದ್ದಿಕೋ ನಿನ್ನ ತಪ್ಪನ್ನು ಮನುಜ,

ಸಮಯ ಮೀರಿದ ಮೇಲೆ ಯೋಚಿಸಿ ಪ್ರಯೋಜನವಿಲ್ಲ

ಪ್ರಾರ್ಥಿಸುತ್ತಲೇ ಇರು ಕೈ ಬಿಡಲ್ಲ ಸೃಷ್ಟಿಕರ್ತ,

ಕಾರಣ ಆತನ ಸೃಷ್ಟಿಯಲ್ಲಿ ಅತೀ ವಿವೇಕಿ ನೀನೇ ಮನುಜ…

✍🏻 ಫಾರೂಕ್ ಕಾನಕ್ಕೋಡ್

m

Related Posts