Featured, ಅಂಕಣ, ಸ್ಥಳೀಯ

ಸಮಾಜ ಸೇವೆಯನ್ನು ಗುರುತಿಸಿ ಮೊಯ್ದೀನ್ ಪಾಲಡ್ಕ ರವರಿಗೆ ಸನ್ಮಾನ

ಅರಂಬೂರು :- ಮಾಂಬ್ಲಿ ಬಸ್ಟಾಂಡ್ ವಾಟ್ಸಾಪ್ ಗ್ರೂಪ್ ಇದರ ದಶಮಾನೋತ್ಸವದ ಅಂಗವಾಗಿ ಆಯೋಜಿಸಿದ ಮಾಂಬ್ಲಿ ಉತ್ಸವ ಕಾರ್ಯಕ್ರಮ ಜನವರಿ 26 ಮಾಂಬ್ಲಿ ಶಟಲ್ ಗ್ರೌಂಡ್ ನಲ್ಲಿ ನಡೆಯಿತು.ಉತ್ಸವದ ಭಾಗವಾಗಿ ಆಟೋಟ ಸ್ಪರ್ಧೆ ಹಾಗೂ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಸಮಾಜ ಸೇವೆಯನ್ನು ಗುರುತಿಸಿ ಆಪತ್ಭಾಂದವರಾಗಿ ಸೇವೆ ಸಲ್ಲಿಸಿದ ಮೊಯ್ದೀನ್ ಪಾಲಡ್ಕ ರವರಿಗೆ ಸನ್ಮಾನ ಮಾಡಲಾಯಿತು. 2024 ಡಿಸೆಂಬರ್ 28 ರಂದು ಸಂಜೆ ವೇಳೆ ಪಾಲಡ್ಕ ಸಮೀಪದ ಪಯಶ್ವಿನಿ ನದಿಗೆ ಸ್ಥಳೀಯ ಕೆಲ ಮಕ್ಕಳು ಸ್ನಾನ ಮಾಡಲು ಹೋಗಿದ್ದರು. ಮಕ್ಕಳಲ್ಲಿ ಒಬ್ಬ ನೀರಿನ ಸೆಳೆತಕ್ಕೆ ಸಿಲುಕಿದ, ಬಾಲಕನ ಕಿರುಚಾಟ ಕೇಳಿದ ಸ್ಥಳೀಯರಾದ ಮೊಯ್ದೀನ್ ಪಾಲಡ್ಕ ಎಂಬವರು ಈಜುತ್ತಾ ಹೋಗಿ ಆ ಹುಡುಗನನ್ನು ರಕ್ಷಿಸಿದ್ದಾರೆ, ಈ ಸೇವೆಯನ್ನು ಗುರುತಿಸಿ ಊರಿನ ಯುವಕರು ಹಿರಿಯರ ಸಮ್ಮುಖದಲ್ಲಿ ಸನ್ಮಾನ ಮಾಡಲಾಯಿತು.

m

Related Posts