Featured, ಅಂಕಣ, ಸ್ಥಳೀಯ

ಮದ್ರಸಾ ವಿದ್ಯಾರ್ಥಿಗಳಿಗೆ ವಿಮಾನ ಯಾತ್ರೆ …!!

ಹೀಗೊಂದು ಬಹುಮಾನ ಏಕೆಂದು ತಿಳಿಯಲು ಉತ್ಸಾಹವಿದೆಯೇ?

ಹೀಗೊಂದು ಬಹುಮಾನ ಏಕೆಂದು ತಿಳಿಯಲು ಉತ್ಸಾಹವಿದೆಯೇ? ಇದು ಪುರುಷರುಕಟ್ಟೆ ಹಿಮಾಯತುಲ್ ಇಸ್ಲಾಂ ಮದ್ರಸ ವಿದ್ಯಾರ್ಥಿಗಳಿಗೆ ನೀಡುವ ಅಭೂತಪೂರ್ವ, ಮಾದರಿಯುತ ಬಹುಮಾನ. ನಿತ್ಯವೂ ನಮಾಝ್ ಜಮಾಅತ್ತಿಗೆ ಅದರಲ್ಲೂ ಸುಬಹಿ ಜಮಾಅತ್ ನಮಾಝಿಗೆ ಕ್ರಮವಾಗಿ ತಲುಪುವ ಆರು ವಿದ್ಯಾರ್ಥಿಗಳಿಗೆ ವಿಮಾನ ಯಾತ್ರೆಯ ಬಹುಮಾನ ದೊರೆತಿದೆ. ಪುರುಷರಕಟ್ಟೆ ಮಹಲ್ಲಿನ ಆರು ವ್ಯಕ್ತಿಗಳು ಆರು ವಿದ್ಯಾರ್ಥಿಗಳಿಗೆ ಈ ಗಿಫ್ಟ್ ಪ್ರಯೋಜಿಸಿದ್ದು ಅರ್ಹ ವಿದ್ಯಾರ್ಥಿಗಳಲ್ಲಿ ಸಂತೋಷ ಮನೆಮಾಡಿದೆ.

ಕಳೆದ ವರ್ಷವೂ ಇದೇ ರೀತಿ ಜಮಾಅತ್ ನಮಾಝಿನ ತಲುಪುವ ವಿದ್ಯಾರ್ಥಿಗಳಿಗೆ ಬೈಸಿಕಲ್ ವಿತರಿಸಿದ್ದು, ಇದರಿಂದ ಪ್ರೇರಿತರಾಗಿ ವಿದ್ಯಾರ್ಥಿಗಳು ಈ ಸತ್ಕಾರ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.

ಒಟ್ಟಿನಲ್ಲಿ ಪುರುಷರಕಟ್ಟೆ ಮದ್ರಸಾ ಮ್ಯಾನೇಜ್ಮೆಂಟ್ ಮತ್ತು ಅಧ್ಯಾಪಕರಾದ ರಿಯಾಝ್ ಫೈಝಿ ಪಟ್ಟೆ, ಮತ್ತು ಖಾದರ್ ಮುಸ್ಲಿಯಾರ್ ಮುಕ್ವೆ ಸೇರಿದಂತೆ ಊರಿನವರ ಇಂತಹ ದೀನಿ ಪ್ರೋತ್ಸಾಹ ನಿಜಕ್ಕೂ ಹೆಮ್ಮೆ ಮತ್ತು ಮಾದರಿಯಾಗಿದೆ.

ವರದಿ:- ರಿಯಾಝ್ ಫೈಝೀ ಪಟ್ಟೆ ಸವಣೂರು

m

Related Posts