ಆಲೆಟ್ಟಿ ಗ್ರಾಮದ ಬಡ್ಡಡ್ಕ ಎಂಬಲ್ಲಿಯ ಕುರ್ನಡ್ಕದ ಆಡಿಂಜ ಎಂಬಲ್ಲಿಕಿರು ಸೇತುವೆ ರಚನೆಗೆ 2024-25 ನೆ ಸಾಲಿನಲ್ಲಿ ಉಂಟಾದ ಅತಿವೃಷ್ಟಿ ಹಾಗೂ ನೆರೆ ಹಾವಳಿ ಯಿಂದ ಹಾನಿಗೊಳಗಾದ ಸೇತುವೆಗಳ ತುರ್ತು ದುರಸ್ತಿಗಾಗಿ ಲೆಕ್ಕ ಶೀರ್ಷಿಕೆ 3034-04-105-0-01-200 ಜಿಲ್ಲಾ ಮತ್ತು ಇತರೆ ರಸ್ತೆ ಸೇತುವೆಗಳು – ನಿರ್ವಹಣೆಯಡಿ ಉಲ್ಲೇಖ (1) ರ ಆದೇಶದಂತೆ ಮತ್ತು ಸರಕಾರದ ಆದೇಶ ಸಂಖ್ಯೆ ಲೋಇ/691/ಐ ಎಫ್ಎ2024 (ಇ ಕಚೇರಿ) ಬೆಂಗಳೂರು ದಿನಾಂಕ14/08/2024 ರಂತೆ ರೂಪಾಯಿ 25,00,000/- (ರೂಪಾಯಿ ಇಪ್ಪತೈದು ಲಕ್ಷ) ಅನುದಾನವು ಬಿಡುಗಡೆಗೊಂಡಿರುತ್ತದೆ. ಇದರ ಟೆಂಡರ್ ಪ್ರಕ್ರಿಯೆ ಸಂಪೂರ್ಣಗೊಂಡಿದ್ದು ಇದರ ಸಂಕ ರಚನೆಯ ಗುದ್ದಲಿಪೂಜೆಯು ದಿನಾಂಕ 01/02/2025 ರ ಶನಿವಾರದಂದು ಬೆಳಿಗ್ಗೆ ಗಂಟೆ 11ಕೆ ಸರಿಯಾಗಿ ಕಾಂಗ್ರೆಸ್ ಪಕ್ಷದ ನಾಯಕರಾದ ರಾಜ್ಯ ಅರೆಭಾಷೆ ಮತ್ತು ಸಾಹಿತ್ಯ ಅಕಾಡೆಮಿ ಇದರ ಸದಸ್ಯರಾದ ತೇಜಕುಮಾರ್ ಬಡ್ಡಡ್ಕ ಹಾಗೂ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ದೇವಪ್ಪ ನಾಯ್ಕ ಬಡ್ಡಡ್ಕ ಇವರು ನೆರವೇರಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಸತ್ಯಕುಮಾರ್ ಅದಿಂಜ, ಧರ್ಮಪಾಲ ಕೊಯ0ಗಾಜೆ, ಸುಳ್ಯ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಯೂಸೂಫ್ ಅಂಜಿಕ್ಕಾರು, ಬ್ಲಾಕ್ ಕಾಂಗ್ರೆಸ್ ನಾಯಕರಾದ ಭಾವನಿಶಂಕರ ಕಲ್ಮಡ್ಕ, ಚೇತನ್ ಕಜೆಗದ್ದೆ, ಕಾಂಗ್ರೆಸ್ ನಾಯಕರಾದ ಕೇಶವ ಮೊರಂಗಲ್ಲು, ಗೋಪಾಲ ಗುಂಡ್ಯ, ನಾರಾಯಣ ರೈ ಆರಂಬೂರು, ರಾಮಕೃಷ್ಣ ಬಡ್ಡಡ್ಕ, ದಯಾನಂದ ತಲೆಪಲ್ಲ, ರಾಮಚಂದ್ರ ಪಾವಳಿಕಜೆ, ಚೇತನ್ ಪತ್ತುಕುಂಜ, ರಜನೀಶ್ ಹೊನ್ನೇಡಿ, ಮೀನಾಕ್ಷಿ ಆರಂಬೂರು, ಸರೋಜಿನಿ ಕಾಪುಮಲೆ, ರಾಜ್ ಕುಮಾರ್ ನಾಗಪಟ್ಟಣ, ಊರವರಾದ ವಿವೇಕಾನಂದ ಕೂರ್ನಡ್ಕ, ಸುಬ್ರಾಯ ಗೌಡ ಅಡಿಂಜ ಮೊದಲಾದವರು ಉಪಸ್ಥಿತರಿದ್ದರು.





m
