ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾ ಕುಂಭ ಮೇಳದಲ್ಲಿ ಸೋಮವಾರ ದಿನಾಂಕ 17-02-2025 ರಂದು ಮಡಿಕೇರಿ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಶ್ರೀ ಡಾ.ಮಂತರ್ ಗೌಡ ರವರು ತಮ್ಮ ಶ್ರೀಮತಿಯವರಾದ ದಿವ್ಯಾ ಮಂತರ್ ಹಾಗೂ ಕುಟುಂಬದ ಸದಸ್ಯರುಗಳೊಂದಿಗೆ ತಮ್ಮ ವಿವಾಹ ವಾರ್ಷಿಕೋತ್ಸವದ ದಿನದಂದೇ ಪಾಲ್ಗೊಂಡು ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ನೆರವೇರಿಸಿದರು. 144 ವರ್ಷಗಳಿಗೊಮ್ಮೆ ನಡೆಯುವ ಮಹಾ ಕುಂಭದಲ್ಲಿ ಪಾಲ್ಗೊಳ್ಳಲು ನನ್ನ ವಿವಾಹ ವಾರ್ಷಿಕೋತ್ಸವದ ಸುದಿನದಂದೇ ಅವಕಾಶ ಸಿಕ್ಕಿದ್ದು ನಿಜಕ್ಕೂ ಸಂತಸ ತಂದಿದೆ ಎಂದು ಮಾನ್ಯ ಶಾಸಕರಾದ ಶ್ರೀ ಡಾ.ಮಂತರ್ ಗೌಡ ರವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ತಿಳಿಸಿದ್ದಾರೆ.




m
