Featured, ಇತರೆ, ಸ್ಥಳೀಯ

ಸುಳ್ಯ ಗಾಂಧಿನಗರ : ಕಾರ್ಯಕ್ರಮ ನಿರೂಪಕರು ದಫ್ ತರಬೇತು ದಾರರು ಆಗಿದ್ದ ಎಸ್.ಎಂ ಅಬ್ಬಾಸ್ ಹಾಜಿ (ವೆಲ್ಕಮ್) ನಿಧನ

ಸುಳ್ಯ : ಗಾಂಧಿನಗರ ಕೇಂದ್ರ ಜುಮಾ ಮಸೀದಿಯ ಜಮಾಹತ್ ಸದಸ್ಯರು ಸುಳ್ಯದ ವೆಲ್ ಕಮ್ ಹೊಟೇಲ್ ಮಾಲಿಕರಾದ ಶಮೀರ್ ಕುಂಬ್ಳೆ ಯವರ ಆಳಿಯ ( ಸಹೋದರಿಯ ಪತಿ) ಉತ್ತಮ ಕಾರ್ಯಕ್ರಮ ನಿರೂಪಕರು, ದಫ್ ತರಬೇತು ದಾರರು ಆಗಿದ್ದ ಎಸ್.ಎಂ ಅಬ್ಬಾಸ್ ಹಾಜಿ ಅಡ್ಕ( ವೆಲ್ಕಮ್) ಇಂದು ಅಪರಾಹ್ನ ಇಹಲೋಕ ತ್ಯಜಿಸಿದರು ಬಹಳ ಸೌಜನ್ಯ ಮತ್ತು ಸರಳ ವ್ಯಕ್ತಿತ್ವದ ಪರೋಪಕಾರಿ,ಕ್ರಿಯಾಶೀಲ ವ್ಯಕ್ತಿ ಯಾಗಿದ್ದರು ಇವರು ಪತ್ನಿ ಪೌಝಿಯ, ಪುತ್ರರಾದ ದುಬೈನಲ್ಲಿ ಉದ್ಯೋಗದಲ್ಲಿ ಇರುವ ಸಿನಾನ್, ಶೈಬಾನ್, ಮಂಗಳೂರು ಯೇನೆಪೊಯ ಮೆಡಿಕಲ್ ಕಾಲೇಜ್ ಉದ್ಯೋಗಿ ಶರ್ಫಾನ್, ಸಲ್ಮಾನ್, ಶಿಬಿಲಿ ಹಾಗೂ ಆಳಿಯಂದಿರಾದ ಶಮೀರ್, ರಫೀಕ್, ಸಹೋದರರಾದ ಸುಳ್ಯ ಜೂನಿಯರ್ ಕಾಲೇಜ್ ದೈಹಿಕ ಶಿಕ್ಷಕರಾದ ಯೂಸುಫ್, ದಫ್ ತರಬೇತು ದಾರರಾದ ಅಬೂಬ್ಬಕ್ಕರ್, ಫಾರೂಕ್ ಮತ್ತು ಕುಟುಂಬಸ್ಥರು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ

m

Related Posts