“ಸುಳ್ಯ ಕಾಂಗ್ರೆಸ್ನ ಆಂತರಿಕ ವಿವಾದಗಳು ಪಕ್ಷದ ಸಾಂಸ್ಥಿಕ ದುರ್ಬಲತೆಯನ್ನು ಹೊರಗೆಡಬಹುದು ಇದನ್ನು ತಡೆಯಲು ತಕ್ಷಣದ ಸಂವಾದ ಮತ್ತು ಸಮನ್ವಯ ಅಗತ್ಯ. ಇಲ್ಲದಿದ್ದರೆ, ಭವಿಷ್ಯದ ಚುನಾವಣೆಗಳಲ್ಲಿ ಪಕ್ಷದ ಪ್ರಭಾವ ಕುಗ್ಗುವ ಸಾಧ್ಯತೆ ಇದೆ.”

ಸುಳ್ಯ : ಒಂದು ಹಂತದಲ್ಲಿ ಬಡವರ ಪಕ್ಷವೆಂದೇ ಕರೆಯುತ್ತಿದ್ದ ಸುಳ್ಯ ಕಾಂಗ್ರೆಸ್ನಲ್ಲಿ ಇದೀಗ ಬಣ ರಾಜಕೀಯದ ತಾಕಲಾಟ, ತೊಳಲಾಟ, ಮತ್ತು ವೈರಸೆ ಮುಗಿಯುವ ಹಂತ ಕಾಣುತ್ತಿಲ್ಲ. 2023ರ ಕರ್ನಾಟಕ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಬೀದಿಗೆ ಬಂದ ಬಣ ರಾಜಕೀಯದ ಥಿಯರಿಗೆ ಉಸ್ತುವಾರಿ ಮಮತಾ ಗಟ್ಟಿಯವರು, ಗಟ್ಟಿಯಾಗಿ ಬಣ ರಾಜಕೀಯಕ್ಕೆ ತಡೆ ತಾಯತ ಕಟ್ಟಿ ಹೋಗಿದ್ದರು. ಆದರೂ, ಸಮನ್ವಯ ಇಲ್ಲದ್ದಿದ್ದರೂ, ಮೇಲ್ನೋಟಕ್ಕೆ ಒಂದಾಗಿದ್ದರು ಎಂದು ಗೋಚರಿಸಿತು. ಈಗ ಗಟ್ಟಿ ಕಟ್ಟಿದ ಬಣ ತಡೆ ತಾಯತದ ಕಾಲಾವಧಿ ಮುಗಿದಿದೆ ಎಂದು ಕಾಣುತ್ತಿದೆ.

ಗ್ರಾಮ ಪಂಚಾಯತ್ ಮತ್ತು ಸಹಕಾರಿ ಸಂಘಗಳ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷದ ಫಲಿತಾಂಶ ಕುಸಿದಿದೆ ಎಂಬುದು ದಾಖಲಾಗಿದೆ. ಇದಕ್ಕೆ ಕಾಂಗ್ರೆಸ್ ಪಕ್ಷದ ಆಂತರಿಕ ಕಲಹ ಮತ್ತು ಬೇಗುದಿಯೇ ಕಾರಣ ಎಂದು ವಿಶ್ಲೇಷಕರು ನಂಬುತ್ತಾರೆ. ಇನ್ನೊಂದು ಗಮನಾರ್ಹ ಅಂಶವೆಂದರೆ, ಸುಳ್ಯ ತಾಲೂಕಿನಲ್ಲಿ ರಾಜಕೀಯ ತಿರುವು ಎಂಬಂತೆ ಯುವಜನತೆ ಕಾಂಗ್ರೆಸ್ ಪಕ್ಷದತ್ತ ಒಲವು ತೋರಿಸುತ್ತಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಯುವಜನರು ಕಾಂಗ್ರೆಸ್ ಪಕ್ಷದತ್ತ ಸೇರುತ್ತಿರುವುದು ನಿಜವಾದರೂ, ಈ ಒಲವನ್ನು ರಾಜಕೀಯವಾಗಿ ಉಳಿಸಿಕೊಂಡು ಬೆಳೆಸುವ ಸಾಮರ್ಥ್ಯವುಳ್ಳ ತಂಡವು ತಯಾರಾಗುತ್ತಿಲ್ಲ ಎಂಬ ಪ್ರಶ್ನೆ ಉದ್ಭವಿಸಿದೆ.
ಈ ಪರಿಸ್ಥಿತಿಯನ್ನು ಸರಿಪಡಿಸಲು ಕಾಂಗ್ರೆಸ್ ಪಕ್ಷವು ತನ್ನ ಆಂತರಿಕ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವುದು ಮತ್ತು ಯುವಜನರ ನಂಬಿಕೆಗೆ ಪಾತ್ರವಾಗುವಂತಹ ನೀತಿಗಳು ಮತ್ತು ಕಾರ್ಯನೀತಿಗಳನ್ನು ರೂಪಿಸುವುದು ಅಗತ್ಯವಾಗಿದೆ.

“ವಾಡಿಕೆಯಂತೆ, ಸುಳ್ಯ ಕಾಂಗ್ರೆಸ್‌ಗೆ ನೂತನ ಸಾರಥಿಯ ಹೆಸರು ಘೋಷಣೆಯಾಗಿದೆ. ಆಡ್ಕಾರು ರಾಮಣ್ಣ ಗೌಡರ ಕಾಲದ ಅಪ್ಪಟ ಕಾಂಗ್ರೆಸ್‌ಗರಾಗಿದ್ದ ರಾಧಾಕೃಷ್ಣ ಬೊಳ್ಳೂರು ಅವರನ್ನು ಈ ಹುದ್ದೆಗೆ ನೇಮಿಸಲಾಗಿದೆ. ನಡುವೆ ಬೇಸತ್ತು ಬಿಜೆಪಿ ಸೇರಿದ್ದ ಇವರು, ಅಲ್ಲಿ ಡೀಪ್ ರೈಡ್ ಆಡಿ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದರಲ್ಲದೆ, ಬಿಜೆಪಿ ಪಕ್ಷವನ್ನು ಗಣನೀಯವಾಗಿ ಬೆಳೆಸಿದ್ದರು. ಆದರೆ, ಕೊನೆಗೆ ಬಿಜೆಪಿಯ ಡಬಲ್ ಗೇಮ್‌ಗೆ ಬೇಸತ್ತು ಮತ್ತೆ ಮಾತೃ ಪಕ್ಷವಾದ ಕಾಂಗ್ರೆಸ್‌ಗೆ ಮರಳಿದ್ದರು. ಇದರ ಪರಿಣಾಮವಾಗಿ, ಅವರಿಗೆ ಸುಳ್ಯ ಕಾಂಗ್ರೆಸ್‌ನಲ್ಲಿ ಮಹತ್ವದ ಜವಾಬ್ದಾರಿಯನ್ನು ನೀಡಲಾಗಿದೆ.
ಆದರೂ, ತಂದೂರಿ ರೊಟ್ಟಿಯ ಆಂಡೆಯ ಹಾಗೆ, ಸುಳ್ಯ ಕಾಂಗ್ರೆಸ್‌ನಲ್ಲಿ ಒಳಗೊಳಗೆ ಉರಿಯುತ್ತಿದ್ದ ಬೇಗುದಿ ಈಗ ಹೊರಗೆ ಬಂದಿದೆ. ಒಂದು ಕಡೆ, ರಾಧಾಕೃಷ್ಣ ಬೊಳ್ಳೂರು ಅವರನ್ನು ಹೆಚ್ಚಿನವರು ಒಪ್ಪಿಕೊಂಡಿದ್ದರೆ, ಇನ್ನೊಂದು ಕಡೆ ಕೆಲವರು ಅವರ ನೇಮಕವನ್ನು ಒಪ್ಪಿಕೊಳ್ಳಲು ನಿರಾಕರಿಸಿದ್ದಾರೆ. ಇದರ ಪರಿಣಾಮವಾಗಿ, ಕೆಲವು ಸುಳ್ಯ ಕಾಂಗ್ರೆಸ್‌ಗರು ಬೆಂಗಳೂರಿನ ಕೆಪಿಸಿಸಿ ಕಛೇರಿಗೆ ಧಾವಿಸಿ, ಬೊಳ್ಳೂರು ಅವರ ಸ್ಥಾನಕ್ಕೆ ತಾತ್ಕಾಲಿಕ ತಡೆ ತರುವಲ್ಲಿ ಯಶಸ್ವಿಯಾಗಿದ್ದಾರೆ.

ಇತ್ತ ಪದಗ್ರಹಣ ಕಾರ್ಯಕ್ರಮದ ದಿನಾಂಕ ನಿಶ್ಚಯಿಸಿ ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮದ ವಿವರಗಳನ್ನು ನೀಡಿ ಹೊರ ಬರುವಾಗ ಬೊಳ್ಳೂರು ರವರ ವಾಟ್ಸಪ್ಗೆ ತಡೆ ಹಿಡಿದ ಸಂದೇಶ ಬಂದಿದೆ. ನಂತರ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಶುರುವಾಗಿ ಟ್ರೊಲರ್ ಗಳಿಗೆ ಅಹಾರವಾಗಿತ್ತು. ಈ ನಡುವೆ ಇ-ವಾರ್ತೆ ಪ್ರಾಮಾಣಿಕವಾಗಿ ಹಲವು ಯುವ ಕಾಂಗ್ರೆಸ್ ನಾಯಕರೊಂದಿಗೆ ಅಭಿಪ್ರಾಯ ಕೇಳಲಾಯಿತು. ಹೆಚ್ಚಿನವರು ಪಕ್ಷ ಉತ್ತಮವಾಗಿ ಬೆಳೆಯಲು ಎಲ್ಲರೂ ಒಗ್ಗಾಟಾಗಿ ಇರುವಾಗ ಇಂತಹ ಸನ್ನಿವೇಶ ಹಿಂಜರಿಕೆಯ ಬಾವನೆಗೆ ಒಳಪಡುತ್ತದೆ. ಎಲ್ಲವೂ ಸರಿ ಇದೇ ಎಂದು ಇರುವಾಗ ಅಚಾನಕ್ ಅಗಿ ಬೊಳ್ಳೂರು ರವರ ಸ್ಥಾನಕ್ಕೆ ಸ್ಟೇ ತಂದದ್ದು ಸೂಕ್ತ ಅಲ್ಲ. ಒಂದು ಅವಕಾಶ ಬೊಳ್ಳೂರು ಅವರಿಗೆ ನೀಡಬಹುದಿತ್ತು. ಅವರು ಜನರ ನಡುವೆ ನಿಂತು ಸರಳವಾಗಿ ಬೆರೆಯುವರು ಮಾತ್ರವಲ್ಲ ಡೇರಿಂಗ್ ಪರ್ಸನ್. ಇವರು ಅಧ್ಯಕ್ಷರಾದರೆ ಬಿಜೆಪಿಗೂ ಒಂದು ಸವಾಲು ಆಗುತ್ತಿತ್ತು. ಅದಲ್ಲದೇ ಅಧ್ಯಕ್ಷ ಗಾದಿಗೆ ಹೊಸಮುಖ ಅವರಿಗೂ ಒಂದು ಉತ್ಸಾಹ ಕೂಡ ಇತ್ತು ! ಹೀಗೆ ಹಲವು ಕಾಂಗ್ರೆಸ್ ಯುವ ಮುಖಂಡರ ಅಭಿಪ್ರಾಯ ಈ ರೀತಿಯಲ್ಲಿ ಕೇಳಿಬಂದಿದೆ.

ಸುಳ್ಯದ ರಾಜಕೀಯ ಇತಿಹಾಸ ಗಮನಿಸಿದರೆ ಕಾಂಗೈ ಮತ್ತು ಬಿಜೆಪಿ ಗೆ ಮಾತ್ರ ಭದ್ರವಾದ ಅವಕಾಶ. ಜೆ ಡಿ ಎಸ್ ತನ್ನ ಓಟ್ ಬ್ಯಾಂಕ್ ಸಂಪೂರ್ಣ ಕಳೆದು ಕೊಂಡಿದೆ ಎನ್ನಬಹುದು. ಎಡೆಯಲ್ಲಿ ಆಪ್ ತನ್ನ ಹೋರಾಟ ಮತ್ತು ಅಬ್ಬರ ಪ್ರಚಾರದಿಂದ ಬಂದರು. ಸುಳ್ಯದಲ್ಲಿ ಗಟ್ಟಿಯಾಗಿ ನೆಲೆಯೂರಲು ಪರದಾಡುತ್ತಿದೆ.
ಎಸ್ ಡಿ ಪಿ ಐ ಒಂದು ಸಮುದಾಯಕ್ಕೆ ಎಂದು ಬಿಂಬಿಸಲಾಗಿದೆ. ಬಿಜೆಪಿ ಸುಳ್ಯದಲ್ಲಿ ಹಿಂದುತ್ವದ ಪ್ರಬಲ ಬೆಂಬಲದಿಂದ ಜಯಶಾಲಿಯಾಗುತ್ತಿದೆ. ಕಾಂಗ್ರೆಸ್ ಇನ್ನೂ ಸಹ ಪ್ರಬಲ ಮಧ್ಯಮ ವರ್ಗ ಮತ್ತು ಅಲ್ಪಸಂಖ್ಯಾತರ ಸಂಪೂರ್ಣ ಬೆಂಬಲ ಇನ್ನೂ ಬಡವರ ಪಕ್ಷ ಎಂದೇ ಬಿಂಬಿತ ವಾಗಿರುವುದರಿಂದ. ಇತ್ತಿಚಿನ ದಿನಗಳಲ್ಲಿ ಯುವ ಸಮುದಾಯ ಕಾಂಗ್ರೆಸ್ ಬಗ್ಗೆ ಒಲವು ತೋರಿರುವುದರಿಂದ ಬಿಜೆಪಿಯ ಭದ್ರ ಕೋಟೆಗೆ ಲಗ್ಗೆ ಇಡಲು ಸಾಧ್ಯ ಎಂದು ಅಭಿಮತ!

ಆದರೇ.. ಸುಳ್ಯ ಕಾಂಗ್ರೆಸ್ ನಲ್ಲಿ ತಾರತಕ್ಕೆ ಏರಿರುವ ಬಣ – ರಾಜಕೀಯಕ್ಕೆ ಅಂತ್ಯ ಹಾಡುವುದು ಅನಿವಾರ್ಯ. ಇಲ್ಲದಿದ್ದರೆ ಸುಳ್ಯ ಕಾಂಗ್ರೆಸ್ನ ಆಂತರಿಕ ವಿವಾದಗಳು ಪಕ್ಷದ ಸಾಂಸ್ಥಿಕ ದುರ್ಬಲತೆಯನ್ನು ಹೊರಗೆಡಬಹುದು ಇದನ್ನು ತಡೆಯಲು ತಕ್ಷಣದ ಸಂವಾದ ಮತ್ತು ಸಮನ್ವಯ ಅಗತ್ಯ. ಇಲ್ಲದಿದ್ದರೆ, ಭವಿಷ್ಯದ ಚುನಾವಣೆಗಳಲ್ಲಿ ಪಕ್ಷದ ಪ್ರಭಾವ ಕುಗ್ಗುವ ಸಾಧ್ಯತೆ ಇದೆ.





m

