Featured, ರಾಜ್ಯ

ಹತ್ತು ವರ್ಷದ ಪ್ರೀತಿ, ಪಾಗಲ್ ಪ್ರೇಮಿಯಿಂದ ಕೊನೆಗೆ ಪ್ರಿಯತಮೆಯ ಪತಿಯ ಭೀಕರ ಕೊಲೆ

ಶಿರಸಿ: ಹತ್ತು ವರ್ಷಗಳ ಕಾಲ ಪ್ರೀತಿಸುತ್ತಿದ್ದ ಮಾಜಿ ಪ್ರಿಯತಮೆ ಬೇರೊಬ್ಬರನ್ನು ಮದುವೆಯಾದ ನಂತರ, ಭಗ್ನ ಹೃದಯದ ಪ್ರೇಮಿ ಪ್ರೀತಮ್ ಡಿಸೋಜಾ ತನ್ನ ಮಾಜಿ ಪ್ರಿಯತಮೆಯ ಗಂಡ ಗಂಗಾಧರನನ್ನು ಚೂರಿ ಇರಿದು ಹತ್ಯೆ ಮಾಡಿದ್ದಾನೆ. ಈ ಘಟನೆ ಶಿರಸಿಯಲ್ಲಿ ನಡೆದಿದೆ.

ಪ್ರೀತಮ್ ಡಿಸೋಜಾ ಶಿರಸಿ ಮೂಲದ ಪೂಜಾ ಎಂಬಾಕೆಯನ್ನು ಹತ್ತು ವರ್ಷಗಳಿಂದ ಪ್ರೀತಿಸುತ್ತಿದ್ದನು. ಇಬ್ಬರು ರಿಜಿಸ್ಟರ್ ಮದುವೆಗೆ ಯೋಜಿಸಿದ್ದರು. ಆದರೆ, ಪೂಜಾ ಪ್ರೀತಮ್ಗೆ ಇನ್ನೊಬ್ಬಳ ಜೊತೆ ಸಂಬಂಧ ಇರುವುದು ತಿಳಿದು ಅವನನ್ನು ಬಿಟ್ಟುಬಿಟ್ಟಿದ್ದಳು. ನಂತರ ಗಂಗಾಧರನನ್ನು ಮದುವೆಯಾಗಿದ್ದಳು. ನಂತರದಲ್ಲಿ ಈ ವಿಷಯ ತಿಳಿದ ಪ್ರೀತಮ್ ಪೂಜಾಗೆ ಕ್ಷಮೆ ಕೇಳಿದನು ಮತ್ತು ಇಬ್ಬರ ನಡುವೆ ಮತ್ತೆ ಪ್ರೀತಿ ಶುರುವಾಯಿತು.

ಆದರೆ, ಗಂಗಾಧರನನ್ನು ತಮ್ಮ ಪ್ರೀತಿಗೆ ಅಡ್ಡಿಯಾಗಿ ಕಂಡ ಇಬ್ಬರು, ಅವನನ್ನು ತೊಡೆದುಹಾಕಲು ನಿರ್ಧರಿಸಿದರು. ಇದರ ಪರಿಣಾಮವಾಗಿ, ಪ್ರೀತಮ್ ಫೆ.22 ಶಿರಸಿಗೆ ಬಂದು ಗಂಗಾಧರನೊಂದಿಗೆ ಜಗಳವಾಡಿ, ಅವನಿಗೆ ಚೂರಿ ಇರಿದು ಕೊಂದನು. ಘಟನೆಯ ಸ್ಥಳಕ್ಕೆ ಬಂದ ಪೊಲೀಸರು ತನಿಖೆ ನಡೆಸಿದರು. ಪೂಜಾಳನ್ನು ಕರೆದು ವಿಚಾರಣೆ ನಡೆಸಿದಾಗ, ಅವಳು ಪ್ರೀತಮ್ನ ಹೆಸರನ್ನು ಬಹಿರಂಗಪಡಿಸಿದಳು.

ಈ ಮಾಹಿತಿಯ ಆಧಾರದ ಮೇಲೆ, ಉತ್ತರ ಕನ್ನಡ ಎಸ್.ಪಿ. ಎಂ. ನಾರಾಯಣ್ ಅವರು ತಂಡಗಳನ್ನು ರಚಿಸಿ, ಯಲ್ಲಾಪುರದಿಂದ ಜಿಲ್ಲೆಯ ಗಡಿ ದಾಟಲು ಯತ್ನಿಸುತ್ತಿದ್ದ ಪ್ರೀತಮ್ನನ್ನು ಬಂಧಿಸಿದ್ದಾರೆ.

m

Related Posts