Featured, ಅಂಕಣ, ಸ್ಥಳೀಯ

ಎಸ್ಸೆಸ್ಸೆಫ್ ಪುತ್ತೂರು ಸೆಕ್ಟರ್ ವತಿಯಿಂದ ಬೃಹತ್ ರಕ್ತದಾನ ಶಿಬಿರ

ಪುತ್ತೂರು: ಎಸ್ಸೆಸ್ಸೆಫ್ ಪುತ್ತೂರು ಸೆಕ್ಟರ್ ವತಿಯಿಂದ, ರೋಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್ ಪುತ್ತೂರು ಇದರ ಸಹಭಾಗಿತ್ವದಲ್ಲಿ ಬೃಹತ್ ರಕ್ತದಾನ ಶಿಬಿರವು ಫೆಬ್ರವರಿ 23 ರಂದು ಬ್ಲಡ್ ಬ್ಯಾಂಕ್ ಪುತ್ತೂರಲ್ಲಿ ನಡೆಯಿತು.

ಎಸ್ಸೆಸ್ಸೆಫ್ ಪುತ್ತೂರು ಸೆಕ್ಟರ್ ಇದರ 2025-26 ನೇ ಸಾಲಿನ ಮೊದಲ ಪದ್ದತಿಯಂತೆ ನಡೆಸಿದ ಈ ರಕ್ತದಾನ ಶಿಬಿರವು ಅತ್ಯಂತ ಯಶಸ್ವಿಯಾಗಿ ನಡೆಯಿತು.

ಈ ಒಂದು ಶಿಬಿರದಲ್ಲಿ ಮುಖ್ಯ ಅತಿಥಿಗಳಾಗಿ ಇಕ್ಬಾಲ್ ಬಪ್ಪಳಿಗೆ, ಪುತ್ತೂರು ಡಿವಿಷನ್ ಅಧ್ಯಕ್ಷರಾದ ಸಲಾಂ ಹನೀಫಿ ಕಬಕ, ಡಿವಿಷನ್ ಸೆಕ್ರೆಟರಿ ಸಿನಾನ್ ಸಅದಿ ಈಶ್ವರಮಂಗಳ, ಬ್ಲಡ್ ಸೈಬೋ ದಕ್ಷಿಣ ಕನ್ನಡ ಈಸ್ಟ್ ಜಿಲ್ಲಾ ಕೋರ್ಡಿನೇಟರ್ ಶಿಹಾಬುರ್ರಹ್ಮಾನ್ ಹಸನ್ ನಗರ ಹಾಗೂ ಡಿವಿಷನ್ ಮತ್ತು ಸೆಕ್ಟರ್ ನ ನಾಯಕರು ಉಪಸ್ಥಿತರಿದ್ದರು.

ಪುತ್ತೂರು ಸೆಕ್ಟರ್ ವ್ಯಾಪ್ತಿಯ ಎಂಟು ಯುನಿಟ್ ನ ಹಲವಾರು ಸಂಘಟನಾ ಕಾರ್ಯಕರ್ತರು ಈ ಒಂದು ಶಿಬಿರದಲ್ಲಿ ಭಾಗವಹಿಸಿ ರಕ್ತದಾನ ಮಾಡಿದರು. ಇದು ಎಸ್ಸೆಸ್ಸೆಫ್ ಬ್ಲಡ್ ಸೈಬೋ ಕರ್ನಾಟಕ ಇದರ 328 ನೇ ರಕ್ತದಾನ ಶಿಬಿರವಾಗಿದೆ. ಕುಲ್ದೀಪ್ ನೇತೃತ್ವದ ಬ್ಲಡ್ ಬ್ಯಾಂಕ್ ಪುತ್ತೂರು ತಂಡವು ಈ ಒಂದು ಶಿಬಿರ ಯಶಸ್ವಿಯಾಗಲು ಸಂಪೂರ್ಣ ಸಹಕಾರ ನೀಡಿತು.

ಯುವ ಪಂಡಿತ, ಭಾಷಣಗಾರ ಗೂಡಲ್ಲೂರು ಮಶ್ಹೂದ್ ಸಖಾಫಿ ಉಸ್ತಾದರು ಶಿಬಿರ ನಡೆದ ದಿನದಂದೇ ಅನಿರೀಕ್ಷಿತವಾಗಿ ನಮ್ಮನ್ನಗಲಿದ ಕಾರಣ ಈ ಒಂದು ಬ್ಲಡ್ ಕ್ಯಾಂಪನ್ನು ಉಸ್ತಾದರ ಸ್ಮರಣಾರ್ಥವಾಗಿ ನಡೆಸಿದಾಗಿ ಸಂಘಟನೆಯ ನಾಯಕರು ತಿಳಿಸಿದರು‌.

ವರದಿ: ಬಿಕೆಎಸ್ಎ ಸಂಪ್ಯ

m

Related Posts