Featured, ಇತರೆ, ಸ್ಥಳೀಯ

SMA ಮಾಣಿ ರೀಜನಲ್ ಮತ್ತು SJM ಮಾಣಿ ರೇಂಜ್ ವತಿಯಿಂದ ರಂಝಾನ್ ಕಿಟ್ ವಿತರಣೆ

ಮಾಣಿ: SMA ಮತ್ತು SJM ಮಾಣಿ ರೀಜನಲ್ ರೇಂಜ್ ಇದರ ವತಿಯಿಂದ ದಿನಾಂಕ 23/02/2025 ರಂದು ರೀಜನಲ್ ವ್ಯಾಪ್ತಿಯ ಮದರಸ ಅಧ್ಯಾಪಕರುಗಳಿಗೆ ರಂಝಾನ್ ತಿಂಗಳಿಗೆ ರೇಶನ್ ಕಿಟ್ ವಿತರಿಸಲಾಯಿತು,ಪೇರಮೊಗರು ಮದ್ರಸಾ ಹಾಲ್ ನಲ್ಲಿ ಕಾರ್ಯಕ್ರಮ ನಡೆಯಿತು, ಸಯ್ಯಿದ್ ಹಂಝ ಹಾದಿ ತಂಙಲ್ ಪಾಟ್ರಕೋಡಿ ನೇತೃತ್ವದಲ್ಲಿ SMAಅಧ್ಯಕ್ಷರಾದ.ಮುಹಮ್ಮದ್ ಪೇರಮೊಗರು ರವರ ಅಧ್ಯಕ್ಷತೆಯಲ್ಲಿ ರೇಂಜ್ ಅಧ್ಯಕ್ಷರಾದ ಯೂನುಸ್ ಸ‌ಅದಿ ಉದ್ಘಾಟಿಸಿ ರೇಂಜ್ ಕಾರ್ಯದರ್ಶಿ ಲತೀಫ್ ಸ‌ಅದಿ‌ ಶೇರಾ ಸ್ವಾಗತಿಸಿದರು ನಂತರ ತಾಜುಶ್ಯ‌ರೀಅ ಉಸ್ತಾದ್ ಮತ್ತು ನೆಕ್ಕಿಲಾಡಿ ಉಸ್ತಾದ್ ಮತ್ತು ಮಸೂದ್ದ್ ಸಖಾಫಿ ಉಸ್ತಾದರ ಹೆಸರಿನಲ್ಲಿ ತಹ್ಲೀಲ್ ಸಮರ್ಪಿಸಿ ದುಆ ನಡೆಸಲಾಯಿತು,ರೀಜನಲ್ ವ್ಯಾಪ್ತಿಯ 27 ಅಧ್ಯಾಪಕರುಗಳಿಗೆ ರಂಝಾನ್ ತಿಂಗಳ ರೇಶನ್ ಕಿಟ್ಟ್ ವಿತರಿಸಲಾಯಿತು,ಕಾರ್ಯದರ್ಶಿ ಹೈದರ್ ಸಖಾಫಿ ಶೇರಾ ಕಾರ್ಯಕ್ರಮ ನಿರೂಪಿಸಿ ಧನ್ಯವಾದ ಹೇಳಿದರು.

ವರದಿ : ಸಲೀಂ ಮಾಣಿ

m

Related Posts