Featured, ಅಂಕಣ, ಸ್ಥಳೀಯ

ಎಸ್ಸೆಸ್ಸೆಫ್ ಸಂಪ್ಯ ಯುನಿಟ್ ವತಿಯಿಂದ ರಮಳಾನ್ ಪೂರ್ವ ಸಿದ್ದತಾ ತರಗತಿ ಹಾಗೂ ಹಾಫಿಳ್ ಮಶ್ಹೂದ್ ಸಖಾಫಿ ಉಸ್ತಾದರ ಹೆಸರಿನಲ್ಲಿ ದುಆ ಮಜ್ಲಿಸ್

ರಂಝಾನಿನಲ್ಲಿ ಆಹಾರಕ್ಕೆ ಮಿತಿಯಿರಲಿ, ಇಬಾದತ್ ಅಧಿಕವಾಗಲಿ: ಯಾಸೀನ್ ಹಿಮಮಿ ಅಲ್ ಅಹ್ಸನಿ

ಪವಿತ್ರ ರಂಝಾನ್ ಮಾಸ ಅನ್ನುವುದು ಅದು ತಿಂದುಂಡು ಮಲಗುವ ಮಾಸವಲ್ಲ. ಬದಲಾಗಿ ಅಲ್ಲಾಹನಿಗೆ ಇಬಾದತ್ ತೆಗೆಯುವ ಮಾಸವಾಗಿದೆ. ಒಂದು ಸತ್ಕರ್ಮಕ್ಕೆ ಎಪ್ಪತ್ತರಷ್ಟು ಪ್ರತಿಫಲ ಲಭಿಸುವ ಪವಿತ್ರ ರಂಝಾನ್ ನಲ್ಲಿ ಹೆಚ್ಚೆಚ್ಚು ಪುಣ್ಯಕರ್ಮಗಳನ್ನು ಮಾಡಿ ಅಲ್ಲಾಹನ ಪ್ರೀತಿಗೆ ಪಾತ್ರರಾಗೋಣ ಎಂದು ಬಿ.ಕೆ.ಯಾಸೀನ್ ಹಿಮಮಿ ಅಲ್ ಅಹ್ಸನಿ ಉಸ್ತಾದರು ತಿಳಿಸಿದರು.

ಎಸ್ಸೆಸ್ಸೆಫ್ ಸಂಪ್ಯ ಯುನಿಟ್ ಸಂಘಟಿಸಿದ ರಮಳಾನ್ ಪೂರ್ವ ಸಿದ್ದತಾ ತರಗತಿ ಹಾಗೂ ನಮ್ಮನ್ನಗಲಿದ ಹಾಫಿಳ್ ಮಶ್ಹೂದ್ ಸಖಾಫಿ ಉಸ್ತಾದರ ಹೆಸರಿನಲ್ಲಿ ನಡೆಸಿದ ದುಆ ಮಜ್ಲಿಸ್ ಕಾರ್ಯಕ್ರಮದಲ್ಲಿ ತರಗತಿ ನಡೆಸಿದ ಯಾಸೀನ್ ಉಸ್ತಾದರು ಪವಿತ್ರ ರಂಝಾನನ್ನು ಯಾವ ರೀತಿ ಸ್ವಾಗತಿಸಬೇಕು, ರಮಳಾನ್ ಗೆ ನಾವು ಯಾವ ರೀತಿ ಪೂರ್ವ ತಯಾರಿ ನಡೆಸಬೇಕು ಮುಂತಾದುವುಗಳ ಬಗ್ಗೆ ಸವಿಸ್ತಾರವಾದ ತರಗತಿ ನಡೆಸಿದರು.

ಕೆಎಂಜೆ ಸಂಪ್ಯ ಇದರ ಅಧ್ಯಕ್ಷರಾದ ಇಬ್ರಾಹಿಂ ವಾಗ್ಳೆಯವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮವನ್ನು ಎಸ್ ವೈ ಎಸ್ ಸಂಪ್ಯ ಇದರ ಪ್ರ.ಕಾರ್ಯದರ್ಶಿ ಕೊಂಬಾಳಿ ಕೆಎಂಹೆಚ್ ಝುಹ್ರಿ ಉಸ್ತಾದರು ಉದ್ಘಾಟಿಸಿದರು. ಕಾರ್ಯಕ್ರಮವನ್ನು ದುಆದ ಮೂಲಕ ಚಾಲನೆಗೊಳಿಸಿದ ಎಸ್ ವೈ ಎಸ್ ಸಂಪ್ಯ ಇದರ ದಅವಾ ಕಾರ್ಯದರ್ಶಿ ರಶೀದ್ ಮದನಿ ಉಸ್ತಾದರು ಪ್ರಾಸ್ತಾವಿಕ ಭಾಷಣ ನಡೆಸಿದರು.

ನಂತರ ಇತ್ತೀಚೆಗೆ ನಮ್ಮನ್ನಗಲಿದ ಯುವ ಪಂಡಿತ, ಭಾಷಣಗಾರ ಮರ್ಹೂಂ ಗೂಡಲ್ಲೂರು ಹಾಫಿಳ್ ಮಶ್ಹೂದ್ ಸಖಾಫಿ ಉಸ್ತಾದರ ಹರಸರಿನಲ್ಲಿ ಖುರ್ ಆನ್ ಪಾರಾಯಣ, ತಹ್ಲೀಲ್ ಹಾಗೂ ದುಆ ಮಜ್ಲಿಸ್ ನಡೆಯಿತು.

ಇದೇ ಸಂದರ್ಭದಲ್ಲಿ ಎಸ್ಸೆಸ್ಸೆಫ್ ಸದಸ್ಯರಿಗೆ ಐಡಿ ಕಾರ್ಡ್ ವಿತರಣೆ ನಡೆಸಲಾಯಿತು.

ವೇದಿಕೆಯಲ್ಲಿ ಸಂಘಟನೆಯ ಮಾರ್ಗದರ್ಶಕರಾದ ಎಸ್.ಅಬೂಬಕ್ಕರ್ ಹಾಜಿ ಸಂಪ್ಯ, ಕೆ ಎಂ ಜೆ ಸಂಪ್ಯ ನಾಯಕರಾದ ಮೂಸ ಮದನಿ ಸಂಪ್ಯ, ರಝಾಕ್ ವಾಗ್ಳೆ, ಎಸ್ ವೈ ಎಸ್ ನಾಯಕರಾದ ಅಶ್ರಫ್ ಕಲ್ಲರ್ಪೆ,ಅಝೀಝ್ ಕಲ್ಲರ್ಪೆ ಮುಂತಾದವರು ಉಪಸ್ಥಿತರಿದ್ದರು.

ಎಸ್ಸೆಸ್ಸೆಫ್ ಯುನಿಟ್ ಅಧ್ಯಕ್ಷರಾದ ಬಿ.ಕೆ.ಕಾಮಿಲ್ ಮದನಿ ಸ್ವಾಗತಿಸಿ, ಕೋಶಾಧಿಕಾರಿ ಬಿ.ಕೆ.ಸ್ವಾದಿಕ್ ಅಲಿ ಸಂಪ್ಯ ವಂದಿಸಿದರು. ಮುಸ್ತಫಾ ವಾಗ್ಳೆ ಕಾರ್ಯಕ್ರಮ ನಿರೂಪಿಸಿದರು.

ವರದಿ: ಬಿಕೆಎಸ್ಎ ಸಂಪ್ಯ

Related Posts