ಡಾ. ದಯಾನಂದ ಪೈ ಸತೀಶ್ ಪೈ ಸ್ಮಾರಕ ಕಾಲೇಜಿನಲ್ಲಿ ನಡೆದ ಅಂತರ್ ಕಾಲೇಜು ಚೆಸ್ ಸ್ಪರ್ಧೆಯಲ್ಲಿ ಸಾಧನೆ
ಮಂಗಳೂರು ವಿಶ್ವವಿದ್ಯಾಲಯದ ಅಂತರ್ ಕಾಲೇಜು ಚೆಸ್ ಪಂದ್ಯಾವಳಿಯಲ್ಲಿ ಸುಳ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ತಂಡ ದ್ವಿತೀಯ ಸ್ಥಾನ ಗೆದ್ದುಕೊಂಡಿದೆ.
ಈ ಸ್ಪರ್ಧೆ 28 ಫೆಬ್ರವರಿ 2025ರಂದು ಮಂಗಳೂರಿನ ರಥಬೀದಿಯ ಡಾ. ದಯಾನಂದ ಪೈ ಸತೀಶ್ ಪೈ ಸ್ಮಾರಕ ಕಾಲೇಜಿನಲ್ಲಿ ನಡೆದಿದೆ.
ಸುಳ್ಯ ಕಾಲೇಜಿನ ತಂಡದಲ್ಲಿ ನಾಯಕನಾಗಿ ಮನೀಶ್ ರೈ (ನಾವೂರು), ತಿಲಕೇಶ್ ಕೆ.ಆರ್. (ಕಲ್ಲುಗುಂಡಿ), ಅಮೃತ ಟಿ.ಎಸ್. (ಕಲ್ಲುಗುಂಡಿ), ಅಮೂಲ್ಯ ಎ.ಕೆ. (ಜಟ್ಟಿಪಳ್ಳ) ಮತ್ತು ಪ್ರೀತೇಶ್ ಎ.ವಿ. (ಕಲ್ಲುಗುಂಡಿ) ಅಂತಿಮ ಮತ್ತು ಪ್ರಥಮ ವರ್ಷದ ಬಿ.ಕಾಮ್/ಬಿ.ಎ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕಾಲೇಜಿನ ಪ್ರಾಂಶುಪಾಲರಾದ ಸತೀಶ್ ಕುಮಾರ್ ಕೆ.ಆರ್. ಅವರು ತಂಡಕ್ಕೆ ಮಾರ್ಗದರ್ಶನ ನೀಡಿದ್ದು, ವಿದ್ಯಾರ್ಥಿಗಳ ಸಾಧನೆಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.





m
