Featured, ಅಂಕಣ, ಸ್ಥಳೀಯ

ಚೆರಿಯಪಳ್ಳಿ ಮದ್ರಸದಲ್ಲಿ 50 ವರ್ಷ ಸೇವೆಗೈದ ಸದರ್ ಉಸ್ತಾದ್

 

ಉದ್ಯಾವರ ಹತ್ತನೇ ಮೈಲು ಶೇಕ್ ಸುಲ್ತಾನ್ ಚೆರಿಯಪಳ್ಳಿ ಮದ್ರಸದಲ್ಲಿ 50 ವರ್ಷ ಕಾಲ 1975 ರಿಂದ ಇದುವರೆಗೂ ಸದರ್ ಉಸ್ತಾದ್ ಆಗಿ ಸೇವೆ ಸಲ್ಲಿಸುತ್ತಿರುವ ಅಬ್ದುಲ್ ರಹಮಾನ್ ಮುಸ್ಲಿಯಾರ್ ಎಂಬ ಸದರ್ ಉಸ್ತಾದರನ್ನು ಮೊದಲ ರಂಜಾನ್ ತರಾವಿಹ್ ನಂತರ ಕಮಿಟಿ ವತಿಯಿಂದ ಕೊಡುಗೈದಾನಿ ಬಹು:ಸಯ್ಯದ್ ನೂರಿಷ್ ತಂಙಳ್ ಮತ್ತು ಸಾವಿರ ಜಮಾಅತ್ ಅದ್ಯಕ್ಷರಾದ ಬಹು:ಸಯ್ಯದ್ ಸೈಪುಲ್ಲಾ ತಂಙಳ್ಶಾ ಶಾಲು ಹೊದಿಸಿ ಸನ್ಮಾನಿಸಿದರು. ಚೆರಿಯಪಳ್ಳಿ ಜಿಸಿಸಿ ಕಮಿಟಿ ಪರವಾಗಿ ಮಮ್ಮೈಚರವರು ಕ್ಯಾಶ್ ಪ್ರೈಸ್ ಮತ್ತು ಮೆಮ್ಮೊಂಟ್ ನೀಡಿ ಗೌರವಿಸಿದರು. ಇಮಾಮ್ ಉಸ್ತಾದ್. ಹಾರಿಸ್ ಸಹದಿ. ಪ್ರೆಸಿಡೆಂಟ್ ಹನೀಫ್ ಕಜ. ಸೆಕ್ರೆಟರಿ ಶರೀಫ್.ಉಪಾದ್ಯಕ್ಷ ಜಬ್ಬಾರ್ ಮತ್ತು ಸದಸ್ಯರು ಬಾಗವಹಿಸಿದರು.ಕೊನೆಗೆ ಅಲ್ತಾಫ್ ಕೃತಜ್ಞತೆ ಹೇಳಿದರು. ಉದ್ಯಾವರ ಸಾವಿರ ಜಮಾಅತಿನ ಸಾವಿರಾರು ಜನರಿಗೆ ಸದರ್ ಉಸ್ತಾದ್ ಆಗಿಯೂ ದೀನೀಕಾರ್ಯವನ್ನು ನೆರವೇರಿಸಿದರು

m

Related Posts