ಸಮಸ್ತ ಇಸ್ಲಾಮಿಕ್ ಸೆಂಟರ್ SIC ದಮ್ಮಾಮ್ ಅಲ್ ಖೋಬಾರ್ ಸಮಿತಿಯು ಸಮಸ್ತದ ಹದಿಮೂರನೇ ಪೋಷಕ ಸಂಘಟನೆ ಆಗಿದ್ದು ಗಲ್ಫ್ ರಾಷ್ಟ್ರಗಳಲ್ಲಿರುವ ಸಮಸ್ತದ ಪ್ರವರ್ತಕರ ಸಮಿತಿಯಾಗಿದೆ ಇದರ ವಾರ್ಷಿಕ ಮಹಾ ಸಭೆಯು ದಿನಾಂಕ 21/02/2025 ರಂದು ದಮ್ಮಾಮ್ ನಲ್ಲಿ ಹೈದರ್ ಅಡ್ಡೂರು ರವರ ರೂಮಿನಲ್ಲಿ ನಡೆಯಿತು, ಮಜ್ಲಿಸ್ನೂರ್ ನೊಂದಿಗೆ ಆರಂಭವಾದ ಸಭೆಯಲ್ಲಿ ಅಸ್ಸೈಯ್ಯದ್ ಅನಸ್ ಹಾದೀ ತಂಙಳ್ ಅಲ್ ಅಝ್ಹರಿರವರ ದುಆಗೆ ನೇತೃತ್ವವನ್ನು ನೀಡಿದರು ಸಿನಾನ್ ಹುದವಿರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು ಸಭಾಧ್ಯಕ್ಷತೆಯನ್ನು ಬಷೀರ್ ಅಜ್ಹರಿ ಉಸ್ತಾದರು ವಹಿಸಿದ್ದರು, ಹಾಲಿ ಅಧ್ಯಕ್ಷರಾದ ರಝಕ್ ಮಂಡೆಕೋಲು ರವರು ಸ್ವಾಗತ ಭಾಷಣ ನೆರವೇರಿಸಿದರು,
ತದನಂತರ ಕಾರ್ಯದರ್ಶಿ ಶೆರೀಫ್ ಬಾಬರವರು ಪ್ರಸಕ್ತ ಸಾಲಿನ ವರದಿಯನ್ನು ಹಾಗು ಲೆಕ್ಕ ಪತ್ರವನ್ನು ಮಂಡಿಸಿದರು, ಮತ್ತು ಪ್ರಸಕ್ತ ಸಾಲಿನ ಸಾಧನೆ, ಬೆಂಗಳೂರು ಮಿಷನ್ ಮದರಸ ಮತ್ತು SIC ದಮ್ಮಾಮ್ ಮದರಸದ ಬಗ್ಗೆ ವಿವರಣೆ ನೀಡಿದರು,
ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ DKSC ದಮ್ಮಾಮ್ ಸಮಿತಿಯ ನೇತಾರರಾದ ಇಸ್ಮಾಯಿಲ್ ಕಾಟಿಪಳ್ಳ, ಅಬ್ದುಲ್ ಹಮೀದ್ ಕೊಲ್ನಾಡ್, ಅಬೂಬಕ್ಕರ್ ಅಜಿಲಮೊಗರು ಹಾಗು ಇನ್ನಿತರರು ಭಾಗವಹಿಸಿದ್ದರು, ಅನ್ಸಾರ್ ಫೈಝಿ ಉಸ್ತಾದರು ನಸೀಹ ನಡೆಸಿಕೊಟ್ಟರು ಮತ್ತು ಕೊನೆಯಲ್ಲಿ ನಿರ್ಗಮನಾಧ್ಯಕ್ಷರಾದ ರಝಕ್ ಮಂಡೆಕೋಲುರವರು ಅಧ್ಯಕ್ಷರ ಭಾಷಣವನ್ನು ನಡೆಸಿದರು ಮತ್ತು ಸಹಕರಿಸಿದ ಪ್ರತಿಯೊಬ್ಬರನ್ನು ಈ ವೇಳೆಯಲ್ಲಿ ನೆನಸಿಕೊಂಡು ಹಾಲಿ ಸಮಿತಿಯು ತಮ್ಮ ಅಧಿಕಾರದಿಂದ ರಾಜಿನಾಮೆ ಕೊಟ್ಟು ಸಮಿತಿಯನ್ನು ಬರ್ಖಾಸ್ತುಗೊಳಿಸಲಾಯ್ತು, ಸಭಾಧ್ಯಕ್ಷರು ಹೊಸ ಸಮಿತಿಯನ್ನು ಘೋಷಿಸಲಾಯ್ತು
ಗೌರವಾಧ್ಯಕ್ಷರಾಗಿ ರಝಕ್ ಮಂಡೆಕೋಲು ರವರನ್ನು ಮತ್ತು ಹೊಸ ಸಮಿತಿಯ ಅಧ್ಯಕ್ಷರನ್ನಾಗಿ ಬಷೀರ್ ಅಜ್ಹರಿರವರನ್ನು ಆಯ್ಕೆ ಮಾಡಲಾಯ್ತು
ಉಳಿದಂತೆ ಕೆಳಕಂಡ ಪದಾಧಿಕಾರಿಗಳನ್ನು ಇತರ ಹುದ್ದೆಗಳಿಗೆ ಆಯ್ಕೆ ಮಾಡಲಾಯ್ತು
ಉಪಾಧ್ಯಕ್ಷರು : ಸಿನಾನ್ ಹುದವಿ
ಪ್ರಧಾನ ಕಾರ್ಯದರ್ಶಿ : ಶೆರೀಫ್ ಬಾಬ ಮೇನಾಲ
ಕಾರ್ಯದರ್ಶಿ: ಶರೂಫ್ ಅಡ್ಡೂರು
ಸಂಘಟನಾ ಕಾರ್ಯದರ್ಶಿ ಮತ್ತು ಮದ್ರಸ ಕನ್ವಿನೆರ್ : ದಾವೂದ್ ಕೃಷ್ಣಾಪುರ
ಖಜಾಂಜಿ : ಬಷೀರ್ ಅಡ್ಡೂರು
ಲೆಕ್ಕ ಪರಿಶೋಧಕರು : ಇಸ್ಮಾಯಿಲ್ ಕಾಟಿಪಳ್ಳ
ಸಲಹಾ ಸಮಿತಿ ಸದಸ್ಯರು: ಅಶ್ರಫ್ ಅಡ್ಡೂರು, ಹೈದೆರ್ ಅಡ್ಡೂರು, ಅಬ್ದುಲ್ ಹಮೀದ್ ವಿಟ್ಲ, ಶಂಸುದ್ದೀನ್ ಅಡ್ಡೂರ್, ರಝಕ್ ಅಡ್ಡೂರು, ಮಜೀದ್ ಅಡ್ಡೂರು, ಅಕ್ರಮ್ ಕೃಷ್ಣಾಪುರ, ನಶಾಫ್ ಅಡ್ಡೂರು ಮಹಮ್ಮದ್ ಶಾಫಿ
ಆಯ್ಕೆಯಾದ SIC ಯ ನೂತನ ಸಾರಥಿಗಳಿಗೆ ಶುಭಾಶಯ ಮತ್ತು ಕಾರ್ಯಕ್ರಮಕ್ಕೆ ಸೇರಿದ ಪ್ರತಿಯೊಬ್ಬರಿಗೂ ಶರೀಫ್ ಬಾಬ ರವರು ಧನ್ಯವಾದ ತಿಳಿಸಿ ಮೂರು ಸ್ವಲಾತಿನೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು ಮತ್ತು ಶೆರೀಫ್ ಬಾಬ ರವರು ಕಾರ್ಯಕ್ರಮವನ್ನು ನಿರೂಪಿಸಿದರು.





m
