ಮಂಗಳೂರು: ಫರಂಗಿಪೇಟೆಯ II ಪಿಯುಸಿ ವಿದ್ಯಾರ್ಥಿ ದಿಗಂತ್ ಪರೀಕ್ಷಾ ಭಯದಿಂದ ನಿಗೂಢವಾಗಿ ನಾಪತ್ತೆಯಾಗಿದ್ದ, 12 ದಿನಗಳ ಕಾಲ ನಡೆಸಿದ ಸಂಚಾರ ಮತ್ತು ಪೊಲೀಸರ ತನಿಖೆಯ ವಿವರಗಳು ಸಾರ್ವಜನಿಕರ ಗಮನಕ್ಕೆ ಬಂದಿವೆ.
ಕಪಿತಾನಿಯೋದ ಕಾಲೇಜಿನ ವಿದ್ಯಾರ್ಥಿ ದಿಗಂತ್ ಫೆಬ್ರವರಿ 25ರಂದು ದೇವಸ್ಥಾನಕ್ಕೆ ಹೋಗುವುದಾಗಿ ತನ್ನ ಕುಟುಂಬಕ್ಕೆ ತಿಳಿಸಿ ಮನೆ ಬಿಟ್ಟು, ರೈಲ್ವೆ ಹಳಿಯ ಬಳಿ ತನ್ನ ಚಪ್ಪಲಿಯನ್ನು ಬಿಟ್ಟುಕೊಂಡು ಅದರ ಮೇಲೆ ಮೂರು ಹನಿ ರಕ್ತ ಸುರಿದು ಹೊರಟಿದ್ದ.
ಇದೇ ಸಮಯದಲ್ಲಿ, ಸ್ನೇಹಿತನಿಂದ ಪಡೆದ ಶೂಗಳನ್ನು ಧರಿಸಿ, ರೈಲ್ವೆ ಹಳಿಯ ಮೂಲಕ ಫರಂಗಿಪೇಟೆಯಿಂದ ಅರ್ಕುಳದವರೆಗೆ ನಡೆದು, ನಂತರ ಬೈಕ್ ಮತ್ತು ಬಸ್ಸಿನ ಸಹಾಯದಿಂದ ಶಿವಮೊಗ್ಗ, ಮೈಸೂರು, ಕೆಂಗೇರಿ ಮತ್ತು ನಂದಿಹಿಲ್ಸ್ ಪ್ರದೇಶಗಳಿಗೆ ಸಂಚರಿಸಿದ್ದು ತನಿಖೆಯಲ್ಲಿ ಬಹಿರಂಗವಾಗಿದೆ.
ಶನಿವಾರ ಸಂಜೆ ಉಡುಪಿಯಿಂದ ತನ್ನ ತಾಯಿಗೆ ಫೋನ್ ಮಾಡಿದ ದಿಗಂತ್, “ನಾನು ಓಡಿಹೋದವನಲ್ಲ, ಯಾರೋ ನನ್ನನ್ನು ಹೊತ್ತುಕೊಂಡು ಹೋಗಿದ್ದಾರೆ” ಎಂದು ಹೇಳಿ ಕರೆ ಕಟ್ ಮಾಡಿದ್ದಾನೆ.
ಇದರ ನಂತರ, ಉಡುಪಿಯ ಡಿಮಾರ್ಟ್ ಅಂಗಡಿಯಲ್ಲಿ ಬಿಸ್ಕೆಟ್ ಖರೀದಿಸಲು ಹೋಗಿದ್ದಾಗ ಸಿಬ್ಬಂದಿಯ ಗಮನಕ್ಕೆ ಸಿಲುಕಿ ಪೊಲೀಸರಿಗೆ ಬಂಧನಕ್ಕೊಳಗಾದ. ಪೊಲೀಸರ ವಿಚಾರಣೆಯಲ್ಲಿ ಅವನು ಪರೀಕ್ಷೆಗೆ ಹೆದರಿ ಓಡಿಹೋದ ವಿವರವನ್ನು ಒಪ್ಪಿಕೊಂಡಿದ್ದಾನೆ.
ಹಾಗೆಯೇ, ರೈಲ್ವೆ ಹಳಿಯ ಬಳಿ ಬಿಟ್ಟಿದ್ದ ಚಪ್ಪಲಿಯ ಮೇಲಿನ ರಕ್ತದ ಹನಿಗಳು ಮತ್ತು ತಾನು ಸುಳ್ಳು ಅಪಹರಣದ ಕತೆ ಹೇಳಿದ್ದ.
ಈ ಘಟನೆಯು ವಿದ್ಯಾರ್ಥಿಗಳ ಮೇಲಿನ ಪರೀಕ್ಷಾ ಒತ್ತಡ ಮತ್ತು ಮಾನಸಿಕ ಆರೋಗ್ಯದ ಸವಾಲುಗಳನ್ನು ಮತ್ತೊಮ್ಮೆ ಎತ್ತಿಹಿಡಿದಿದೆ.
ದಿಗಂತ್ ತನ್ನ 12 ದಿನಗಳ ಸಂಚಾರದಲ್ಲಿ ಸುಮಾರು 400 ಕಿಲೋಮೀಟರ್ಗಳಿಗಿಂತ ಹೆಚ್ಚು ದೂರವನ್ನು ರೈಲು, ಬಸ್, ಬೈಕ್ ಮತ್ತು ನಡಿಗೆಯ ಮೂಲಕ ಕ್ರಮಿಸಿದ್ದು, ನಂದಿಹಿಲ್ಸ್ನಲ್ಲಿ ಎರಡು ದಿನಗಳ ಕಾಲ ಅಜ್ಞಾತವಾಗಿ ಕಳೆದಿದ್ದು, ಮತ್ತು ರಕ್ತದ ಹನಿಗಳ ಮೂಲ, ಅವನ ಮಾನಸಿಕ ಸ್ಥಿತಿ ಮತ್ತು ಸಂಚಾರದ ನಿಖರವಾದ ಗತಿ ತನಿಖೆದಾರರಿಗೆ ಆಶ್ಚರ್ಯ ತಂದಿದೆ.
ಈ ಪ್ರಕರಣವು ಪರೀಕ್ಷಾ ವ್ಯವಸ್ಥೆ ಮತ್ತು ಯುವಜನತೆಯ ಮನಸ್ಸಿನ ಬಗೆಗಿನ ಸಮಾಜದ ಪ್ರಜ್ಞೆಯನ್ನು ಕೆರಳಿಸಿದೆ ಎಂಬುದು ಗಮನಾರ್ಹ.
ವಿಷಯದ ಸ್ಪಷ್ಟವಾಗಿ ತಿಳಿದುಕೊಳ್ಳದೆ ನಾಪತ್ತೆ ಪ್ರಕರಣವನ್ನು ಒಂದು ಧರ್ಮದವರ ಮೇಲೆ ಆರೋಪಿಸಿ ಹೋರಾಟ ಮಾಡಿದವರಿಗೆ ತೃಪ್ತಿಯಾಗಿದೆಯಾ ಇಲ್ಲವೇ ಎಂಬುದು ನೋಡಬೇಕಿದೆ.




m
