Featured, ಅಂಕಣ, ರಾಜ್ಯ

ಹಾಸನ | ಪ್ರಿಯಕರನೊಂದಿಗೆ ಪತ್ನಿ ಪರಾರಿ, ಮನನೊಂದು ಪತಿ ಆತ್ಮಹತ್ಯೆಗೆ ಶರಣು!

ಹೊಳೆನರಸೀಪುರ (ಹಾಸನ ಜಿಲ್ಲೆ), ಪತ್ನಿಯು ಪ್ರಿಯಕರನೊಂದಿಗೆ ಪರಾರಿಯಾದ ಘಟನೆಯಿಂದ ಮನನೊಂದ ಪತಿ ಹೇಮಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಘಟನೆ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ಮಾಕವಳ್ಳಿ ಗ್ರಾಮದ ಬಳಿ ನಡೆದಿದೆ.

ಮೃತನನ್ನು ಅರಕಲಗೂಡು ತಾಲ್ಲೂಕಿನ ಹೊನ್ನವಳ್ಳಿ ಗ್ರಾಮದ ರವಿ (೩೮) ಎಂದು ಗುರುತಿಸಲಾಗಿದೆ.

ರವಿ ಹಾಗೂ ಲಾವಣ್ಯ ದಂಪತಿಗಳು ೬ ವರ್ಷಗಳ ಹಿಂದೆ ವಿವಾಹವಾಗಿದ್ದರು. ಇವರಿಗೆ ಒಬ್ಬ ಗಂಡು ಮಗು ಇದೆ. ಇತ್ತೀಚೆಗೆ ದಂಪತಿಗಳ ನಡುವೆ ಕಲಹ ಉಂಟಾಗಿ, ಲಾವಣ್ಯ ಪತಿಯನ್ನು ತ್ಯಜಿಸಿ ಬೇರೆಡೆ ವಾಸಿಸುತ್ತಿದ್ದರು. ಈ ಸಂಬಂಧವಾಗಿ ರವಿ ಪೊಲೀಸರಿಗೆ ದೂರು ನೀಡಿದ್ದನು. ನಂತರ, ಲಾವಣ್ಯ ತನ್ನ ಪ್ರಿಯಕರನೊಂದಿಗೆ ಪರಾರಿಯಾದ ಮಾಹಿತಿ ರವಿಗೆ ತಿಳಿದು, ಅದನ್ನು ಸಹಿಸಲಾರದೆ ಅವನು ಮಾಕವಳ್ಳಿ ಬಳಿಯ ಹೇಮಾವತಿ ನದಿಗೆ ಧುಮುಕಿದನು.

ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ನದಿಯಲ್ಲಿ ಶವವನ್ನು ಹುಡುಕುವ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಈ ಪ್ರಕರಣವನ್ನು ಹೊಳೆನರಸೀಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ. ತನಿಖೆ ಪ್ರಗತಿಯಲ್ಲಿದೆ.

m

Related Posts