Featured, ಅಂಕಣ

ಹಾಸನದಲ್ಲಿ ಪಾಳು ಕಟ್ಟಡ ಕುಸಿತ: ಮೂವರು ಸಾವು, ಇಬ್ಬರು ಗಂಭೀರ

ಹಾಸನ ಜಿಲ್ಲೆಯ ಬೇಲೂರು ಪಟ್ಟಣದಲ್ಲಿ ಮಾರ್ಚ್ 9, 2025ರಂದು ಪಾಳುಬಿದ್ದ ಹಳೆಯ ಕಟ್ಟಡ ಹಠಾತ್ ಕುಸಿದು ಮೂವರು ಸಾವನ್ನಪ್ಪಿದ್ದಾರೆ. ಇಬ್ಬರು ಗಂಭೀರ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕುಸಿದ ಕಟ್ಟಡದ ಅವಶೇಷಗಳಡಿ ಇನ್ನೂ ಹಲವರು ಸಿಲುಕಿರುವ ಶಂಕೆಯಿದೆ ಎನ್ನಲಾಗಿದೆ.

– ನಜೀರ್ ಮತ್ತು ಅಮರನಾಥ್ (ಹಣ್ಣು ಖರೀದಿಗೆ ಬಂದಿದ್ದವರು) ಸ್ಥಳದಲ್ಲೇ ಮೃತಪಟ್ಟಿದ್ದಾರೆ.

– ಮತ್ತೊಬ್ಬರ ಗುರುತು ಇನ್ನೂ ಪತ್ತೆಯಾಗಿಲ್ಲ.

– ಗಂಭೀರ ಗಾಯಗೊಂಡ ಇಬ್ಬರು ಮಹಿಳೆಯರನ್ನು ತುರ್ತು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿದೆ.

ಸತ್ಯನಾರಾಯಣ ಎಂಬುವರಿಗೆ ಸೇರಿದ್ದ ಈ ಎಂಟು ಅಂಗಡಿಗಳಿರುವ ಕಟ್ಟಡ ಹಲವು ವರ್ಷಗಳಿಂದ ಪಾಳುಬಿದ್ದಿತ್ತು. ಘಟನೆಯ ಸಮಯದಲ್ಲಿ ಅಂಗಡಿಗಳು ಕಾರ್ಯನಿರ್ವಹಿಸುತ್ತಿರಲಿಲ್ಲ. ಕುಸಿತಕ್ಕೆ ಕಟ್ಟಡದ ಹಳೆಯ ರಚನೆ ಮತ್ತು ನಿರ್ಲಕ್ಷ್ಯವೇ ಕಾರಣವೆಂದು ಪ್ರಾಥಮಿಕವಾಗಿ ಅಂದಾಜು.

ಘಟನೆಯ ನಂತರ, ಬೇಲೂರು ಪೊಲೀಸ್ ತಂಡ ಮತ್ತು ಅಗ್ನಿಶಾಮಕ ದಳ ತಾತ್ಕಾಲಿಕವಾಗಿ ದೌಡಾಯಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿತು ಸಿಲುಕಿದವರನ್ನು ಹುಡುಕುವುದು ಮತ್ತು ಅವಶೇಷಗಳನ್ನು ತೆರವುಗೊಳಿಸುವ ಪ್ರಯತ್ನಗಳು ನಡೆದಿದೆ

 ಕಟ್ಟಡ ಮಾಲೀಕರು ಮತ್ತು ಸ್ಥಳೀಯ ಪ್ರಾಧಿಕಾರಿಗಳ ನಡುವೆ ಚರ್ಚೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.

ಸ್ಥಳೀಯ ಪ್ರಾಧಿಕಾರಗಳು ಪಾಳು ಕಟ್ಟಡಗಳ ಸುರಕ್ಷತಾ ಪರಿಶೀಲನೆ ಮಾಡದಿರುವುದು ಈ ರೀತಿಯ ದುರಂತಗಳಿಗೆ ದಾರಿ ಮಾಡಿಕೊಡುತ್ತದೆ. ತುರ್ತು ಪರಿಹಾರ ಕ್ರಮಗಳ ಅಗತ್ಯವನ್ನು ಘಟನೆ ಮತ್ತೊಮ್ಮೆ ಎತ್ತಿ ತೋರಿಸಿದೆ.

m

Related Posts