ಮಂಗಳೂರು: ಇತ್ತೀಚೆಗೆ ಫರಂಗಿಪೇಟೆ ಎಂಬಲ್ಲಿನ ದಿಗಂತ್ ಎಂಬ ಯುವಕ ಸ್ವಯಂ ಕಾರಣಕ್ಕಾಗಿ ನಾಪತ್ತೆಯಾಗಿ ಹಲವು ದಿನಗಳ ನಂತರ ಪತ್ತೆಯಾದ ಸಹಜ ಪ್ರಕರಣ ವೊಂದನ್ನು ಭರತ್ ಶೆಟ್ಟಿ ಮತ್ತು ವೈದಿಕ ಸಂಘೀ ಪ್ರೇರಿತ ಇತರ ಕೇಸರಿ ಘೋಷಿತರು ಬಂಟ್ವಾಳದಾದ್ಯಂತ ಇನ್ನೊಂದು ಸುತ್ತು ಕೋಮು ಘರ್ಷಣೆ ನಡೆಸಲು ಪ್ರಯತ್ನ ಪಟ್ಟು ವಿಫಲವಾಗಿದ್ದಾರೆ. ದಿಗಂತ್ ಎಂಬ ಯುವಕನ ಸಹಜ ನಾಪತ್ತೆ ಪ್ರಕರಣವನ್ನು ಸ್ಥಳೀಯ ಮುಸ್ಲಿಮರ ತಲೆಗೆ ಕಟ್ಟಿ ಆ ಮೂಲಕ ಕೋಮು ಗಲಭೆ ನಡೆಸಿ ಫಸಲು ಕೊಯ್ಯಲು ಜೆಲ್ಲೆಯ ಕೇಸರಿ ಘೋಷಿತರು ಮುಸ್ಲಿಮರ ವಿರುದ್ಧ ಹಲವು ಆರೋಪ ಹೊರಿಸಿದ್ದರು. ಜಿಲ್ಲೆಯಲ್ಲಿ ಉಷ್ಣತೆ ತಾಪಮಾನ ಅಧಿಕವಾದರೂ ಕೂಡ ಅದನ್ನು ಮುಸ್ಲಿಮರ ತಲೆಗೆ ಕಟ್ಟುವ ಈ ಘೋಷಿತರು ತಮಗೆ ಸಾದ್ಯವಾದರೆ ಇನ್ಮುಂದೆ ದಿಗಂತ್ ರಂತಹ ಯುವಕರು ಸ್ಥಾನ ಪಲ್ಲಟವಾಗುವುದನ್ನು ತಡೆಯಲು ಊರಿಗೆ ದಿಡ್ಡಿ ಬಾಗಿಲು ನಿರ್ಮಿಸುವ ತಾಕತ್ತು ತೋರಿಸಲಿ. ಇತ್ತೀಚೆಗೆ ಉಡುಪಿಯ ಮಹಿಳೆಯೋರ್ವಳ ಕೊಲೆಗೆ ಸಂಬಂಧಿಸಿ ಕಾರ್ಕಳ ಶಾಸಕ ಸುನಿಲ್ ಕುಮಾರ್ ಆಪ್ತನ ಶಾಮೀಲುಗಾರಿಕೆ ಬಹಿರಂಗ ಗೊಂಡ ನಂತರದ ಪರಿಣಾಮವೇ ಇಂದು ಜಿಲ್ಲೆಯ ಕೇಸರಿ ಘೋಷಿತರಿಗೆ ಆಗಿದೆ. ಯುವಕರು ಪರೀಕ್ಷೆ ಅಥವಾ ಇನ್ನಿತರ ವಿಷಯದಲ್ಲಿ ಖಿನ್ನತೆಯಿಂದ ಆಗುವ ಸಹಜ ನಾಪತ್ತೆಯನ್ನು ತಡೆಯಲು ಈ ಕೇಸರಿ ಘೋಷಿತರಲ್ಲಿ ಯಾವುದೇ ಸಮಾಲೋಚನೆ ಯಂತಹ ಉಪಯುಕ್ತ ಯೋಜನೆಗಳು ಇಲ್ಲ!, ಅದನ್ನು ಭಿನ್ನ ಕೋಮಿನವರ ತಲೆಗೆ ಕಟ್ಟಲು ಕಚ್ಚೆ ಕಟ್ಟಿ ಓಡಿ ಬರುತ್ತಿರುವುದು ನೋಡಿದರೆ ಈ ಕೇಸರಿ ಘೋಷಿತರಿಗೆ ಇನ್ನೂ ಜೀವ ರಹಿತತಾಪೇಕ್ಷೆಯ ಹುಚ್ಚು ಬಿಟ್ಟಂತಿಲ್ಲ. ಇನ್ನಾದರೂ ತಮ್ಮ ವರ್ತನೆಯನ್ನು ಕೇಸರಿ ಘೋಷಿತರು ಅರಿಯಲಿ.
ಕೆ.ಅಶ್ರಫ್ ( ಮಾಜಿ ಮೇಯರ್)ಅಧ್ಯಕ್ಷರು.ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ




m
