Featured, ಅಂತರಾಜ್ಯ

ಅತ್ತೆಗೆ ಭಾವಿ ಅಳಿಯನ ಮೇಲೆ ಲವ್ವು!! ಮಗಳ ಮದುವೆಗೆ 9 ದಿನ ಬಾಕಿ ಇದ್ದಾಗಲೇ ಅತ್ತೆ – ಭಾವಿ ಅಳಿಯ ಎಸ್ಕೇಪ್!

ಹೌದು ಇಂತದೊಂದು ವಿಚಿತ್ರ ಘಟನೆ ಉತ್ತರ ಪ್ರದೇಶದ ಆಲಿಘಡದಲದಲಿ ನಡೆದಿದೆ. ಇನ್ನೇನು ಮಗಳ ಮದುವೆಗೆ 9 ದಿನಗಳು ಮಾತ್ರ ಬಾಕಿ ಇತ್ತು ಅಷ್ಟರಲ್ಲಿ ವಧುವಿನ ತಾಯಿ ಮತ್ತು ಮಗಳ ಭಾವಿ ಪತಿ ಪರಾರಿಯಾದ ಘಟನೆ ಬಾರಿ ಸುದ್ದಿಯಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ತಲ್ವಾರ್ ಹಿಡಿದ ಫೋಟೋ ವೈರಲ್ – ಆಕ್ರೋಶ : ಇಬ್ಬರ ಬಂಧನ

ಮಾತ್ರವಲ್ಲದೆ ಮಗಳ ಮದುವೆಗೆ ಸೇರಿಸಿಟ್ಟಿದ್ದ ಚಿನ್ನಾಭರಣಗಳನ್ನು ಕೂಡು ಕದ್ದೊಯ್ದಿರುವುದಾಗಿಯೂ ಆರೋಪಿಸಲಾಗಿದೆ.

ಮದುವೆ ಫಿಕ್ಸ್ ಆದ ನಂತರದಲ್ಲಿ ಅಳಿಯ ಮನೆಗೆ ಬೇಟಿ ನೀಡುತ್ತಿದ್ದ ಮಾತ್ರವಲ್ಲದೆ ಮದುವೆಯಾಗಬೇಕಿದ್ದ ಪತ್ನಿಯ ಜೊತೆ ಪ್ರೇಮಾಂಕುರಕ್ಕೆ ಸಿಲುಕಿದ್ದು ಮಾತ್ರವಲ್ಲದೇ ಅನೈತಿಕ ಸಂಬಂಧದಲದಲ್ಲಿಕೂಡ ಏರ್ಪಟ್ಟಿದ್ದರು ಎನ್ನಲಾಗಿದೆ.

 

ಬೆಲೆಯೇರಿಕೆಗೆ ಅಡಿಪಾಯನ್ನೇ ಹಾಕಿದ ಬಿಜೆಪಿ, ಬೆಲೆಯೇರಿಕೆ ನಿಯಂತ್ರಣದ ಹೆಸರಲ್ಲಿ ನಡೆಸುತ್ತಿರುವ ಯಾತ್ರೆ .ಮತ್ತೆ ಸುಳ್ಳನ್ನು ಬಿತ್ತುವ ಕುತಂತ್ರದ ಭಾಗವಾಗಿದೆ. ಜಾನಿ.ಕೆ.ಪಿ

ಇದೇ ಏಪ್ರಿಲ್ 16 ರಂದು ಯುವಕ ಹಾಗೂ ಯುವತಿಯ ವಿವಾಹ ನಿಶ್ಚಯವಾಗಿತ್ತು. ವಿವಾಹದ ಸಿದ್ಧತೆಗಾಗಿ ಅತ್ತೆ ಮನೆಗೆ ಯುವಕ ಭೇಟಿ ನೀಡುತ್ತಿದ್ದನು. ಆದರೆ ಆ ಯುವಕನಿಗೆ ಮದುವೆಯಾಗುವ ಹುಡುಗಿ ಬಿಟ್ಟು ಆಕೆಯ ತಾಯಿ ಮೇಲೆ ಲವ್ ಆರಂಭಗೊಂಡಿತ್ತು.

 

ಚೀನಾ ಶೇ.125, ಹಲವು ದೇಶಗಳಿಗೆ 90 ದಿನಗಳ ಸುಂಕ ರದ್ದತಿ – ಟ್ರಂಪ್ ‘ನಡೆ’ಯ ಹಿನ್ನೆಲೆ ಏನು ಗೊತ್ತಾ?

ಹೀಗಾಗಿ ಯುವಕ ಯುವತಿಯ ತಾಯಿಗೆ ಮೊಬೈಲ್ ಕೊಡಿಸಿದ್ದನಂತೆ. ಆಗಾಗ ಮೊಬೈಲ್‌ನಲ್ಲಿ ಯುವಕ-ಯುವತಿ ತಾಯಿ ಮಧ್ಯೆ ಚಾಟಿಂಗ್, ಟಾಕಿಂಗ್ ನಡೀತಾ ಇತ್ತಂತೆ. ಆದ್ರೆ ಮದುವೆಯ ಸಿದ್ಧತೆಯ ಖರೀದಿಗೆಂದು ಜೊತೆಗೆ ಹೋಗಿದ್ದ ಇಬ್ಬರು ಮನೆಗೆ ವಾಪಸ್‌ ಬರಲೇ ಇಲ್ಲ!. ಅಲ್ಲದೇ ಮದುವೆಗೆಂದು ತಂದಿದ್ದ ಚಿನ್ನದ ಒಡವೆಗಳು ಕೂಡ ಕಾಣೆಯಾಗಿದ್ದವು.

 

ಸುಳ್ಯ ಪ್ರೆಸ್ ಕ್ಲಬ್ ಮಹಾಸಭೆ : ಅಧ್ಯಕ್ಷರಾಗಿ ಶರೀಫ್ ಜಟ್ಟಿಪಳ್ಳ ಅವಿರೋಧ ಆಯ್ಕೆ

ಹೀಗಾಗಿ ಅನುಮಾನಗೊಂಡ ಯುವತಿಯ ತಂದೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸದ್ಯ ಪೊಲೀಸರು ಭಾವಿ ಅಳಿಯ ಹಾಗೂ ಯುವತಿ ತಾಯಿಯ ಫೋನ್ ಟ್ರ್ಯಾಕಿಂಗ್ ಮೂಲಕ ಪತ್ತೆ ಹಚ್ಚಲು ಮುಂದಾಗಿದ್ದಾರೆ ಎಂದು ಮೂಲಗಳು ವರದಿ ಮಾಡಿದೆ.

m