Featured, ಇತರೆ, ಸ್ಥಳೀಯ

ಜಟ್ಟಿಪಳ್ಳ ಮದ್ರಸ ಆರಂಭೋತ್ಸವ ಹಾಗೂ ನೂತನ ವಿದ್ಯಾರ್ಥಿಗಳ ಪ್ರವೇಶನೋತ್ಸವ

ಮದ್ರಸವು ರಾಷ್ಟ್ರದ ಹಿತಕ್ಕಾಗಿ ಮತ್ತು ಸಮಾಜದ ಸುಸಂಸ್ಕ್ರತಿಗಾಗಿ ಕಾರ್ಯಾಚರಿಸುತ್ತಿದೆ – ಲತೀಫ್ ಸಖಾಫಿ ಗೂನಡ್ಕ

ಸುಳ್ಯ

ಹಯಾತುಲ್ ಇಸ್ಲಾಂ ಕಮಿಟಿ ರಿ.ಜಟ್ಟಿಪಳ್ಳ ಇದರ ಬುಸ್ತಾನುಲ್ ಉಲೂಂ ಮದ್ರಸದ ಆರಭೋತ್ಸವ ಹಾಗೂ ಹೊಸತಾಗಿ ದಾಖಲಾತಿ ಪಡೆದ ವಿದ್ಯಾರ್ಥಿಗಳ ಪ್ರವೇಶನೋತ್ಸವ ಕಾರ್ಯಕ್ರಮವು ಆಕರ್ಷಣೀಯವಾಗಿ ನಡೆಯಿತು. ಕಮಿಟಿಯ ಗೌರವಾಧ್ಯಕ್ಷ ಅಬೂಬಕ್ಕರ್ ಕೆ ಎ  ಜಟ್ಟಿಪಳ್ಳ ಹಾಗೂ ಉಪಾಧ್ಯಕ್ಷ ವಿ ಕೆ ಅಬೂಬಕ್ಕರ್ ಹಾಜಿ ಯವರು ಪ್ರವೇಶ ದ್ವಾರಕ್ಕೆ ಚಾಲನೆ ನೀಡಿದರು.ಆರಂಭೋತ್ಸವ ಕಾರ್ಯಕ್ರಮದಲ್ಲಿ ಮದ್ರಸ ಉಸ್ತುವಾರಿ ರಶೀದ್ ಜಟ್ಟಿಪಳ್ಳ ಸ್ವಾಗತಿಸಿ,ಪ್ರಾಸ್ಥಾವಿಕ ಭಾಷಣಗೈದರು.ಅಧ್ಯಾಪಕ ಸಿರಾಜ್ ಸಅದಿ ಅಲೆಕ್ಕಾಡಿ,ಕಮಿಟಿ ಪ್ರಧಾನ ಕಾರ್ಯದರ್ಶಿ ಶರೀಫ್ ಜಟ್ಟಿಪಳ್ಳ ಶುಭಾಶಂಸನೆಗೈದರು.ಮದ್ರಸ ಮುಖ್ಯೋಪಾಧ್ಯಯರಾದ ಅಬ್ದುಲ್ ಲತೀಫ್ ಸಖಾಫಿ ಗೂನಡ್ಕ ಮುಖ್ಯಭಾಷಣಗೈದು ಮದ್ರಸದ ಕಾರ್ಯಾಚರಣೆ ಮತ್ತು ಅನಿವಾರ್ಯತೆ ಬಗ್ಗೆ ವಿವರಿಸಿದರು.ಜನರೊಂದಿಗಿನ

ಒಡಣಾಟ,ಸಹಬಾಳ್ವೆ,ಪ್ರೀತಿ,ವಾತ್ಸಲ್ಯ,ಕರುಣೆ,ಗೌರವ,ಸೌಹಾರ್ಧತೆ,ಸಾಹೋದರ್ಯತೆ,ಸಹಿಷ್ಣುತೆ  ಮುಂತಾದ ಅನೇಕಾನೇಕ ಸುಸಂಸ್ಕೃತಿಗಳನ್ನು ಮದ್ರಸ ಕಲಿಸುತ್ತದೆ.ರಾಷ್ಟ್ರದ ಹಿತಕ್ಕಾಗಿ ಸುಂದರ ಸಮಾಜದ ನಿರ್ಮಾಣಕ್ಕಾಗಿ ಮದ್ರಸವು ಧಾರ್ಮಿಕ ಕಲಿಕೆಯೊಂದಿಗೆ ಬಹಳಷ್ಟು ಯೋಜನೆಗಳನ್ನು ರೂಪಿಸಿ ಕಾರ್ಯರೂಪಕ್ಕೆ ತರಲಾಗುತ್ತಿದೆ.ಸ್ವಾತಂತ್ರ್ಯ ದಿನಾಚರಣೆ,ಗಣರಾಜ್ಯೋತ್ಸವ ಮುಂತಾದ ರಾಷ್ಟ್ರೀಯ ಹಬ್ಬಗಳನ್ನು ಅರ್ಥ ಪೂರ್ಣವಾಗಿ ಆಚರಿಸುವ ಮೂಲಕ ದೇಶ ಪ್ರೇಮವನ್ನು ಸದೃಡಗೊಳಿಸುತ್ತಿದೆ.ಸುಚಿತ್ವ ಮತ್ತು ಪರಿಸರ ಸಂರಕ್ಷಣೆ ಹಾಗೂ ಜನರ ನಿತ್ಯ ಬದುಕಿಗೆ ಅನಿವಾರ್ಯವಾದವುಗಳನ್ನು ಮದ್ರಸ ಭೋಧಿಸುತ್ತಿದೆ.ಶಿಕ್ಷಣವೇ ಪ್ರಧಾನ ಪವಿತ್ರ ಖುರ್ ಆನಿನ ಪ್ರಥಮ ಸಂದೇಶ ಶಿಕ್ಷಣದ ಬಗ್ಗೆ ಯಾಗಿದೆ.ವಿದ್ಯಾರ್ಥಿಗಳು ಧಾರ್ಮಿಕ ಮತ್ತು ಲೌಕಿಖ ಶಿಕ್ಷಣ ಪಡೆದು ಉತ್ತಮ ಭವಿಷ್ಯ ರೂಪಿಸಲು ಸಲಹೆ ನೀಡಿದರು. ಆಧುನಿಕತೆಯೊಂದಿಗೆ ಮದ್ರಸವು ಇನ್ನಷ್ಟು ಸಂಪನ್ನವಾಗುವುದು ಕಾಲದ ಬೇಡಿಕೆಯಾಗಿದ್ದು  ಸ್ಮಾರ್ಟ್ ಕ್ಲಾಸ್ ರೂಂ ನಿರ್ಮಾಣ ಮತ್ತು ಡಿಜಟಲೀಕರಣಕ್ಕಾಗಿ ಸರ್ವರೂ ಕೈ ಜೋಡಿಸುವಂತೆ ಆಗ್ರಹಿಸಿದರು

ಇದೇ ಸಂಧಂರ್ಭ ದಾನಿಗಳು ನೀಡಿದ ಉಚಿತ ಪಠ್ಯ ಪುಸ್ತಕಗಳನ್ನು ವಿತರಿಸಲಾಯಿತು.ವಿದ್ಯಾರ್ಥಿಗಳಿಂದ ಪ್ರತಿಭಾ ಪ್ರದರ್ಶನ ನಡೆಯಿತು. ಕಾರ್ಯಕ್ರಮದಲ್ಲಿ ಹಯಾತುಲ್ ಇಸ್ಲಾಂ ಕಮಿಟಿ ಕೋಶಾಧಿಕಾರಿ ಎನ್ ಎ ಅಬ್ದುಲ್ಲ,ನಿಕಟ ಪೂರ್ವ ಅಧ್ಯಕ್ಷ ಬಶೀರ್ ಬಾಳಮಕ್ಕಿ, ರಝಾಕ್ ಕೆ ಎಮ್ ಜಟ್ಟಿಪಳ್ಳ, ಮೊಯಿದೀನ್ ಎಸ್ ಎಮ್, ಶೀಹಾಬ್ ಸಿ ಎ, ರಶೀದ್ ವಿ ಕೆ,ಅಚ್ಚು ಪ್ರಗತಿ, ಹಂಝ ಸಾಗರ್,ಮುಸ್ತಾಫ ಪೆರಾಜೆ, ಇಕ್ಬಾಲ್ ಕೆ ಎಮ್,  ಇಸ್ಮಾಯಿಲ್ ಎಸ್ ಎಮ್ ಅಬ್ಬಾಸ್ ಜಟ್ಟಿಪಳ್ಳ, ಮಹಮ್ಮದ್ ವಿ ಕೆ, ರಹಿಮಾನ್ ಸೂರ್ಥಿಲ, ಕಲೀಲ್ ಜಟ್ಟಿಪಳ್ಳ,ಅಬ್ಬಾಸ್ ಸೂರ್ಥಿಲ ಮೊದಲಾದವರು ಉಪಸ್ಥಿತರಿದ್ದರು
ಹಂಝ  ಸಾಗರ್,,ರಶೀದ್,ಅಬ್ದುರ್ರಝಾಖ್ ಮುಂತಾದವರು ಉಪಸ್ಥಿತರಿದ್ದರು.ರಕ್ಷಕ ಪೋಷಕರು ,ವಿದ್ಯಾರ್ಥಿಗಳು ಭಾಗವಹಿಸಿದರು.ಕಮಿಟಿ ಜೊತೆ ಕಾರ್ಯದರ್ಶಿ ಕಬೀರ್ ಜಟ್ಟಿಪಳ್ಳ ಕಾರ್ಯಕ್ರಮಗಳನ್ನು ನಿರೂಪಿಸಿ,ವಂದಿಸಿದರು.

m

Related Posts