Featured, ಇತರೆ, ಸ್ಥಳೀಯ

ಆರಂಬೂರಿನಲ್ಲಿ ಕಾಶ್ಮೀರದಲ್ಲಿನ ಉಗ್ರಗಾಮಿಗಳ ದಾಳಿಯನ್ನು ಖಂಡಿಸಿ ಮೊಂಬತ್ತಿ ಉರಿಸುವ ಮೂಲಕ ಪ್ರತಿಭಟನೆ*

ಆಲೆಟ್ಟಿ ಗ್ರಾಮದ ಅರಂಬೂರು ಸೇತುವೆ ಬಳಿ ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಭೀಕರ ಉಗ್ರಗಾಮಿಗಳ ದಾಳಿಯನ್ನು ಖಂಡಿಸಿ, ದಾಳಿಯಿಂದ ಅನ್ಯಾಯವಾಗಿ ಮಡಿದವರಿಗೆ ಶ್ರದ್ಧಾಂಜಲಿಯನ್ನು ಮೊಂಬತ್ತಿ ಉರಿಸುವ ಮೂಲಕ ಮಾಡಲಾಯಿತು. ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರನ್ನೂ ಮಾಜಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಯೂಸೂಫ್ ಅಂಜಿಕ್ಕಾರು ಇವರು ಸ್ವಾಗತಿಸಿದರು. ಈ ದಾಳಿಯಲ್ಲಿ ಅನ್ಯಾಯವಾಗಿ ಮಡಿದವರಿಗೆ ಒಂದು ನಿಮಿಷದ ಮೌನ ಪ್ರಾರ್ಥನೆಯನ್ನು ಸಲ್ಲಿಸಲಾಯಿತು.

ಉಗ್ರಗಾಮಿಗಳ ದಾಳಿಯನ್ನು ಖಂಡಿಸಿ ಹಿರಿಯ ಕಾಂಗ್ರೆಸ್ ನಾಯಕರಾದ ಬಾಪೂ ಸಾಹೇಬ್ ಅರಂಬೂರು, ಬ್ಲಾಕ್ ಕಾಂಗ್ರೆಸ್ ಪಕ್ಷದ ಮಾಜಿ ಅಧ್ಯಕ್ಷ ಹಾಗೂ ನಗರ ಪಂಚಾಯತ್ ಸದಸ್ಯರಾದ ಎಂ ವೆಂಕಪ್ಪ ಗೌಡ, ಮಾಜಿ ನಗರ ಪಂಚಾಯತ್ ಸದಸ್ಯರಾದ ಗೋಕುಲದಾಸ್ ಸುಳ್ಯ, ತಾಲೂಕು ಪಂಚಾಯತ್ ಕೆಡಿಪಿ ಸದಸ್ಯರಾದ ಧರ್ಮಪಾಲ ಕೊಯಂಗಾಜೆ ಇವರು ಮಾತನಾಡಿದರು.

ಈ ಸಂದರ್ಭದಲ್ಲಿ ತಾಲೂಕು ಯೂತ್ ಕಾಂಗ್ರೆಸ್ ಅಧ್ಯಕ್ಷ ಚೇತನ್ ಕಜೆಗದ್ದೆ, ಅಮ್ಮು ರೈ ಅರಂಬೂರು, ರತ್ನಾಕರ ರೈ, ತವಿದ್ ಅರಂಬೂರು, ನಾರಾಯಣ ರೈ ಅರಂಬೂರು, ಮೀನಾಕ್ಷಿ ಅರಂಬೂರು, ಜಯಲತ ಅರಂಬೂರು, ಜತ್ತಪ್ಪ ರೈ ಅರಂಬೂರು, ಕುಕ್ಕಪ್ಪ ರೈ, ದಿವಾಕರ ಪೈ, ಭವನಿಶಂಕರ ಶಂಕರ ಕಲ್ಮಡ್ಕ, ಬಶೀರ್ ಸಾಹೇಬ್ ಅರಂಬೂರು, ಬಾಷಾ ಸಾಹೇಬ್ ಅರಂಬೂರು, ಮಂಜುನಾಥ ಪೈ, ಪಹಿಮ್ ಅರಂಬೂರು , ಅಬ್ದುಲ್ಲ, ಮತ್ತಿತರರು ಉಪಸ್ಥಿತರಿದ್ದರು.

m

Related Posts