ರಸ್ತೆ ತಡೆ ನಡೆಸಿ ಪ್ರತಿಭಟಿಸಿ ಸಾರ್ವಜನಿಕರಿಗೆ ತೊಂದರೆ ನೀಡಿದವರ ಮೇಲೆ ಪ್ರಕರಣ ದಾಖಲಿಸಿ
ಪುತ್ತೂರು :- ಪುತ್ತೂರು ಸರಕಾರಿ ವೈದ್ಯಾಧಿಕಾರಿ ಡಾ. ಆಶಾ ಪುತ್ತೂರಾಯರವರ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದು, ಆ ಪ್ರಕರಣವನ್ನು ಇಲಾಖೆಯು ಯಾವುದೇ ಒತ್ತಡಕ್ಕೆ ಮಣಿಯದೆ ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಪ್ ಇಂಡಿಯಾ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿಯು ಆಗ್ರಹಿಸುತ್ತಿದೆ.
ಇಲಾಖೆಯು ತನಿಖೆ ನಡೆಸುತ್ತಿದ್ದರೂ ರಾತ್ರೋ ರಾತ್ರಿ ಅರುಣ್ ಕುಮಾರ್ ಪುತ್ತಿಲ ಹಾಗೂ ಸಂಘಪರಿವಾರದ ಕಾರ್ಯಕರ್ತರು ಮಹಿಳಾ ಠಾಣೆಗೆ ಜಮಾಯಿಸಿ ಗದ್ದಲ ಸೃಷ್ಠಿಸಿದ್ದು ಮಾತ್ರವಲ್ಲದೆ, ಇಂದು ಪುತ್ತೂರು ಮುಖ್ಯ ರಸ್ತೆಯನ್ನೇ ತಡೆ ಮಾಡಿ ಸಂಚಾರ ಸುವ್ಯವಸ್ಥೆಗೆ ತಡೆಯನ್ನುಂಟು ಮಾಡಿ ಸಾರ್ವಜನಿಕರಿಗೆ ತೊಂದರೆಯನ್ನು ಮಾಡಿದ್ದು, ಇಲಾಖೆಯು ಇವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ. ಪುತ್ತೂರಿನಲ್ಲಿ ಈ ಅರುಣ್ ಕುಮಾರ್ ಪುತ್ತಿಲ ಪದೇ ಪದೇ ಪೋಲಿಸರಿಗೆ ಆವಾಜ್ ಹಾಕುತ್ತಿದ್ದರೂ ಇವನ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಲು ಯಾರು ಇಲಾಖೆಗೆ ತಡೆಯಾಗಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಬೇಕು. ಈ ಒಂದು ಘಟನೆಯನ್ನು ನೆಪವಾಗಿಸಿಟ್ಟುಕೊಂಡು ಪುತ್ತೂರಿನಲ್ಲಿ ವೈದ್ಯಕೀಯ ಸೇವೆಯೇ ಸ್ಥಗಿತಗೊಳಿಸಿದ್ದು ಖಂಡನೀಯ. ವೈದ್ಯರಿಗೆ ಏನಾದರೂ ತೊಂದರೆ ಆದರೆ ಕಾನೂನಾತ್ಮಕವಾಗಿ ಮೊದಲು ಅವರು ತಮ್ಮ ಮೇಲಿನ ಜಿಲ್ಲಾ ಆರೋಗ್ಯಾಧಿಕಾರಿ, ರಾಜ್ಯ ಆರೋಗ್ಯಾಧಿಕಾರಿ ಹಾಗೂ ಆರೋಗ್ಯ ರಕ್ಷ ಸಮಿತಿಗೆ ದೂರು ನೀಡಬೇಕಿತ್ತು ಹಾಗೂ ಸ್ಥಳೀಯ ಕ್ಷೇತ್ರ ಶಾಸಕರಿಗೆ ಮಾಹಿತಿ ನೀಡಬೇಕಿತ್ತು. ಆದರೆ ಡಾ.ಆಶಾ ಪುತ್ತೂರಾಯರವರು ಇದ್ಯಾವುದನ್ನು ಮಾಡದೆ ನೇರವಾಗಿ ಸಂಘಪರಿವಾರದ ಕಛೇರಿಗೆ ಮಾಹಿತಿ ನೀಡಿ ಒಬ್ಬ ಅತ್ಯಾಚಾರದ ಆರೋಪಿಯ ನೇತೃತ್ವದಲ್ಲಿ ಪ್ರತಿಭಟನೆಗೆ ಇಳಿದು ಕರ್ತವ್ಯ ಲೋಪವೆಸಗಿರುವಂತೆ ಮೇಲ್ನೋಟಕ್ಕೆ ಕಾಣುತ್ತಿದೆ. ಹಾಗಾಗಿ ಇವರ ಮೇಲೆ ಸೂಕ್ತ ಕಾನೂನು ಕ್ರಮ ಸಂಬಂಧಪಟ್ಟ ಇಲಾಖೆ ಕೈಗೊಂಡು ಇಲ್ಲಿಂದ ವರ್ಗಾವಣೆ ಮಾಡಬೇಕಾಗಿದೆ.
2019 ರಲ್ಲಿ ಪುತ್ತೂರು ಸರ್ಕಾರಿ ಆಸ್ಪತ್ರೆಯ ಖ್ಯಾತ ಹೆರಿಗೆ ಡಾಕ್ಟರ್ ಆಗಿರುವ ಅರ್ಚನಾ ರವರಿಗೆ ಅಂದಿನ ಬಿಜೆಪಿಯ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಎಂಬವರು ಅವಾಚ್ಯ ಶಬ್ದಗಳಿಂದ ನಿಂದಿಸಿ ಅವಹೇಳನ ಮಾಡಿದ ಕೃತ್ಯ ನಡೆದಿತ್ತು. ಆ ಸಂದರ್ಭದಲ್ಲಿ ಕೇವಲ ಒಂದು ಪತ್ರಿಕಾ ಪ್ರಕಟಣೆ ಹೊರಡಿಸಿ ಮೌನಕ್ಕೆ ಶರಣಾಗಿದ್ದ IMA ಎಂಬ ವೈದ್ಯಾದಿಕಾರಿಗಳ ಸಂಘಟನೆ, ಇಂದು ಅಷ್ಟೊಂದು ಉತ್ಸಾಹದಲ್ಲಿ ಒಬ್ಬ ಅತ್ಯಾಚಾರ ಆರೋಪಿಯ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದು ಯಾಕೆ?
ಸಂಘಪರಿವಾರದವರ ಹಾಗೆ ನಿಮ್ಮ ಪ್ರತಿಭಟನೆ ಆಕ್ರೋಶ ಎಲ್ಲವೂ ಆರೋಪಿಗಳು ಮುಸ್ಲಿಮರಾಗಿದ್ದರೆ ಮಾತ್ರವೇ?
ಈ ಘಟನೆಗೆ ಅತ್ಯಾಚಾರ ಆರೋಪಿ ಪುತ್ತಿಲನ ಜೊತೆಗೂಡಿ ವೈದ್ಯರು ಪ್ರತಿಭಟನೆಗೆ ಇಳಿದದ್ದು ವಿಪರ್ಯಾಸವಾಗಿದೆ. ಶಾಂತಿ ಸುವ್ಯವಸ್ಥೆಯಲ್ಲಿರುವ ಪುತ್ತೂರಿನಲ್ಲಿ ಅಶಾಂತಿಗೆ ಯತ್ನಿಸುತ್ತಿರುವ ಈ ಪುತ್ತಿಲ ಪರಿವಾರದ ಮೇಲೆ ಇಲಾಖೆ ಕ್ರಮ ಕೈಗೊಳ್ಳಬೇಕು, ಒತ್ತಡಕ್ಕೆ ಮಣಿದು ನಿರಪರಾಧಿಗಳ ಬಂಧನಕ್ಕೆ ಇಲಾಖೆಯು ಯತ್ನಿಸಿದ್ದಲ್ಲಿ ನಾವೂ ಕೂಡ ಬೀದಿಗಿಳಿಯಬೇಕಾದಿತು ಎಂದು ಎಸ್‍ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷರಾದ ಅಶ್ರಫ್ ಬಾವು ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




m
