Featured, ಇತರೆ, ಸ್ಥಳೀಯ

ಸಂಪಾಜೆ ಗ್ರಾಮ ಪಂಚಾಯತ್ : ಪಹಲ್ಗಾಮ್ ಘಟನೆ ಬಗ್ಗೆ ಸಂತಾಪ ಹಾಗೂ ಖಂಡನಾ ಸಭೆ

ಉಗ್ರಗಾಮಿಗಳಿಗೆ ಯಾವುದೇ ಜಾತಿ ಧರ್ಮ ಇಲ್ಲ. ನಾವೆಲ್ಲರೂ ಒಟ್ಟಾಗಿ ಉಗ್ರಗಾಮಿಗಳ ವಿರುದ್ಧ ಹೋರಾಟ ಮಾಡಬೇಕಾಗಿದೆ : ಟಿ.ಎಂ ಶಾಹಿದ್ ತೆಕ್ಕಿಲ್

ಸುಳ್ಯ : ಸಂಪಾಜೆ ಗ್ರಾಮ ಪಂಚಾಯತ್ ಕಚೇರಿ. ಆವರಣದಲ್ಲಿ ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸುಮತಿ ಶಕ್ತಿವೇಲು ಇವರ  ಅದ್ಯಕ್ಷತೆಯಲ್ಲಿ ಪಹಲ್ಗಾಮ್ ಘಟನೆ ಬಗ್ಗೆ ಸಂತಾಪ ಹಾಗೂ ಖಂಡನಾ ಸಭೆ ನಡೆಯಿತು.

ಸಂಪಾಜೆ ಗ್ರಾಮ ಪಂಚಾಯತ್ ಕಚೇರಿ. ಆವರಣದಲ್ಲಿ ನಡೆದ ಸಂತಾಪ ಮತ್ತು ಖಂಡನಾ ಸಭೆಯಲ್ಲಿ  ಮಾತನಾಡಿದ ಟಿ.ಎಂ ಶಾಹಿದ್ ತೆಕ್ಕಲ್ .ಉಗ್ರಗಾಮಿಗಳಿಗೆ ಯಾವುದೇ ಜಾತಿ ಧರ್ಮ ಇಲ್ಲ. ನಾವೆಲ್ಲರೂ ಒಟ್ಟಾಗಿ ಉಗ್ರಗಾಮಿಗಳ ವಿರುದ್ಧ ಹೋರಾಟ ಮಾಡಬೇಕಾಗಿದೆ . ಎಲ್ಲರೂ ಜಾತಿ ಧರ್ಮ, ಪಕ್ಷ ಮೀರಿ ಸರಕಾರವನ್ನು ಬೆಂಬಲಿಸೋಣ. ಎಂದರು. ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷರಾದ ಕೇಶವ ಬಂಗ್ಲೆಗುಡ್ಡೆ, ಸೊಸೈಟಿ ಉಪಾಧ್ಯಕ್ಷರಾದ ಯಮುನಾ , ಲಯನ್ ಪ್ರಶಾಂತ್,ಮೊದಲಾದವರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಪಂಚಾಯತ್ ಮಾಜಿ ಅಧ್ಯಕ್ಷರು ಹಾಲಿ ಸದಸ್ಯರಾದ ಜಿ. ಕೆ ಹಮೀದ್  ಗೂನಡ್ಕ, ಸುಂದರಿ, ಜಗದೀಶ್ ರೈ ಸದಸ್ಯರುಗಳಾದ ಶ್ರೀಮತಿ ವಿಮಲಾ ಪ್ರಸಾದ್, ರಜನಿ ಶರತ್ ಮನೋಜ್ ಬೈಲೆ, ವರ್ತಕರ ಸಂಘದ ಕಾರ್ಯದರ್ಶಿ ರಝಾಕ್ ಸೂಪರ್ ಸ್ವ ಸಹಾಯ ಸಂಘಗಳ ಒಕ್ಕೂಟದ ಶಿಲ್ಪಾ ಸನತ್ , ಕಾಂತಿ ಬಿ. ಎಸ್, ಲಲನ, ನಿವೃತ್ತ ಅಂಗನವಾಡಿ ಕಾರ್ಯಕರ್ತರಾಡ ಜಯಂತಿ, ಸ್ವಸಹಾಯ ಸಂಘದ ಭಾರತಿ,, ನಿವೃತ್ತ ಸೈನಿಕ ಸಚಿನ್, ಉದಯ ಪೂಜಾ ಫೈನಾನ್ಸ್ ಕಂಟ್ರಾಕ್ಟರ್ ಅಶ್ರಫ್ , ವಿಶ್ವನಾಥ್ ಗೌಡಾ ಅಂಗನವಾಡಿ ಕಾರ್ಯಕರ್ತೆ ಧರ್ಮಕಲಾ, ಪುಷ್ಪ ಸಂಪಾಜೆ  ಸುಜೀತ್  ನವಮಿ ಪಂಚಾಯತ್ ಸಿಬ್ಬಂದಿ ಗೋಪಮ್ಮಾ ಭರತ್, ಮಧುರ, ಉಮೇಶ್ ಉಪಸ್ಥಿತರಿದ್ದರು.ಅಧ್ಯಕ್ಷರಾದ ಶ್ರೀಮತಿ ಸುಮತಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು ಉಪಾಧ್ಯಕ್ಷರಾದ ಎಸ್ ಕೆ ಹನೀಫ್ ಕಾರ್ಯಕ್ರಮ ನಿರೂಪಿಸಿದರು ಸದಸ್ಯರಾದ ಸವಾದ್ ಗೂನಡ್ಕ ವಂದಿಸಿದರು

m

Related Posts