ಪೆರುವಾಜೆ ಶ್ರೀ ಜಲದುರ್ಗಾ ದೇವಿ ಉದ್ಭವ ಜಮೀನು ದೇವರಮಾರು ಸರಕಾರಿ ಸ್ಥಳ ಸಂ ನಂ 98/2 ರಲ್ಲಿದ್ದು ಈ ಸ್ಥಳದಲ್ಲಿದ್ದ ಮರಗಳನ್ನು ನೆಲಸಮ ಮಾಡಿ ದೇವರ ಕಾಡನ್ನು ಇನ್ನಿಲ್ಲದಂತೆ ಮಾಡಿ ಸರಕಾರಿ ಸ್ಥಳ ಕಬಳಿಸಲು ಹುನ್ನಾರ ನಡೆಸಿದ್ದಾರೆ ಇದರ ಬಗ್ಗೆ ಸುಳ್ಯ ಶಾಸಕರಿಗೆ, ತಹಶೀಲ್ದಾರ್ ರಿಗೆ, ದತ್ತಿ ಇಲಾಖೆಯ ಸಹಾಯಕ ಆಯುಕ್ತರಿಗೆ ಹಾಗೂ ಆಡಳಿತಾಧಿಕಾರಿ ಅವರಿಗೆ ಶ್ರೀ ಜಲದುರ್ಗಾ ದೇವಿ ಉದ್ಭವ ದೇವರಮಾರು ಸಮಿತಿಯ ಸಂಚಾಲಕ ನಿತಿನ್ ರಾಜ್ ಶೆಟ್ಟಿ ಮತ್ತು ಸಹ ಸಂಚಾಲಕ ಅಂಗಾರ ಬಜ ಮನವಿ ಮಾಡಿದ್ದು ಈ ಆಕ್ರಮಣ ಮಾಡಿರುವವರ ಮೇಲೆ ಸೂಕ್ತ ಕ್ರಮ ಹಾಗೂ ಈ ಜಮೀನನ್ನು ದೇವರ ಹೆಸರಿಗೆ ಮಿಸಲಿಡಲು ತಹಶೀಲ್ದಾರ್ ಅವರಿಗೆ ಮನವಿ ಮಾಡಿದ್ದು, ಮನವಿಗೆ ಕಂದಾಯ ಇಲಾಖೆ ಸ್ಪಂದಿಸದೇ ಇದ್ದಲ್ಲಿ ದೇವಸ್ಥಾನದಿಂದ ಉದ್ಭವ ದೇವರಮಾರು ವರೆಗೆ ಪಾದಯಾತ್ರೆ ಮೂಲಕ ಪ್ರತಿಭಟನೆ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ ಇದರ ಬಗ್ಗೆ ಶೀಘ್ರ ಭಕ್ತಾದಿಗಳ ಸಭೆ ನಡೆಸಿ ದಿನಾಂಕ ನಿಗದಿ ಗೊಳಿಸಲಾಗುವುದೆಂದು ನಿತಿನ್ ತಿಳಿಸಿದ್ದಾರೆ






m
