Featured, ಅಂಕಣ, ಸ್ಥಳೀಯ

ಸುಳ್ಯ : ಗುತ್ತಿಗಾರು ಬಸ್ಸ್ ಗೆ ಸೈಡ್ ಕೊಡುವ ಸಂದರ್ಭದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ವಾಲಿದ ಗೂಡ್ಸ್ ಲಾರಿ

ಸುಳ್ಯ : ಗುತ್ತಿಗಾರು ಬಾಕಿಲ ಬಳಿ ಕೊಲ್ಲಮೊಗ್ರು ಸೊಸೈಟಿಗೆ ಅಕ್ಕಿ ತುಂಬಿ ಕೊಂಡು ಬರುತ್ತಿದ್ದ ಗೂಡ್ಸ್ ಲಾರಿಯೊಂದು ಬಸ್ಸ್ ಗೆ ಸೈಡ್ ಕೊಡುವ ಸಂದರ್ಭದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಗೂಡ್ಸ್ ಲಾರಿ ರಸ್ತೆಯ ಪಕ್ಕದ ಚರಂಡಿಗೆ ವಾಲಿದ ಘಟನೆ ಇಂದು‌ ಸಂಜೆ ವರದಿಯಾಗಿದೆ.

ಈ ಒಂದು ಸ್ಥಳದಲ್ಲಿ ಅಪಘಾತ ಹೆಚ್ಚುತ್ತಿದ್ದು, ಈ ಭಾಗದಲ್ಲಿ ಗಾಳಿ ಮಳೆ ಸಂದರ್ಭದಲ್ಲಿ ರಸ್ತೆಯ ಪಕ್ಕದಲ್ಲಿ ಇದ್ದ ಬೃಹತ್ ಗಾತ್ರದ ಮರ ರಸ್ತೆ ಗೆ ಬಿದ್ದಿತ್ತು, ಆ ಸಮಯದಲ್ಲಿ ಬೃಹತ್ ಗಾತ್ರದ ಮರವನ್ನು ತುಂಡರಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದರು.

ಆದರೆ ರಸ್ತೆಯ ಪಕ್ಕದಲ್ಲಿ ಶೇಖರಿಸಿದ ಮರದ ದಿಮ್ಮಿಗಳನ್ನು ತೆರವು ಗೊಳಿಸದೆ ಇರುವುದರಿಂದ ಅಲ್ಲಿ ವಾಹನಗಳು ಸೈಡ್ ಕೊಡುವ ಸಂದರ್ಭದಲ್ಲಿ ರಸ್ತೆಯ ಮದ್ಯ ಭಾಗಕ್ಕೆ ಅನಿವಾರ್ಯವಾಗಿ ಬರಬೇಕಾದ ಪರಿಸ್ಥಿತಿ ಇರುವ ಕಾರಣ ಹೆಚ್ಚಿನ ಅಪಘಾತ ಆಗುತ್ತದೆ ಎಂದು ಸ್ಥಳೀಯರು ದೂರಿಕೊಂಡಿದ್ದಾರೆ. ಮಾತ್ರವಲ್ಲ ಸಂಬಂಧಪಟ್ಟ ಇಲಾಖೆ ಕೂಡಲೇ ರಸ್ತೆಯ ಪಕ್ಕದಲ್ಲಿ ಇರುವ ಬೃಹತ್ ಗಾತ್ರದ ಮರದ ದಿಮ್ಮಿಗಳನ್ನು ತೆರವು ಗೊಳಿಸಲು ಸ್ಥಳೀಯ ಜನರು ಮನವಿ ಮಾಡಿಕೊಂಡಿದ್ದಾರೆ.

m

Related Posts