ಸುಳ್ಯ : ಜಟ್ಟಿಪಳ್ಳ – ಕೊಡಿಯಾಲ್ ಬೈಲು ನಿವಾಸಿ ಕಾದರ್ ನೇಬಿಸ ದಂಪತಿಗಳ ಪುತ್ರ, ಇ-ವಾರ್ತೆ ವೆಬ್ ನ್ಯೂಸ್ ಮಾರ್ಕೆಟಿಂಗ್ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿನಾನ್ ಬಾರಿಕ್ಕಾಡ್ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ.
ನಿನ್ನೆ (ಮೇ.15) ಸಂಜೆ ಜಟ್ಟಿಪಳ್ಳ ಕೊಡಿಯಾಲ್ ಬೈಲಿನ ಇವರ ನಿವಾಸದಲ್ಲಿ ಸರಳವಾಗಿ ನಿಖಾಹ್ ನೆರವೇರಿತು. ಸಿನಾನ್ ಇವರು ಪುತ್ತೂರು ಮುರ ನಿವಾಸಿ ಹಸೈನಾರ್, ಸಫಿಯ ದಂಪತಿಗಳ ಪುತ್ರಿ ಶಂಷಾದ ಅವರನ್ನು ವಿವಾಹವಾದರು.
ಈ ಸರಳ ಸಮಾರಂಭದಲ್ಲಿ ಗಾಂಧಿನಗರ ಜುಮಾ ಮಸೀದಿ ಅಧ್ಯಕ್ಷರಾದ ಮಹಮ್ಮದ್ ಕೆ ಎಮ್ ಎಸ್, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಜಬ್ಬಾರ್ ಸ ಮೊ, ಸುಳ್ಯ ಮೂಡಾ ಅಧ್ಯಕ್ಷರಾದ ಮುಸ್ತಫಾ ಜನಾತ, ಸುಳ್ಯ ಪ್ರೆಸ್ ಕ್ಲಬ್ ಅಧ್ಯಕ್ಷರಾದ ಶರೀಫ್ ಜಟ್ಟಿಪಳ್ಳ, ಸುಳ್ಯ ನಗರ ಪಂಚಾಯತ್ ಸದಸ್ಯರಾದ ಉಮ್ಮರ್ ಕೆ ಎಸ್, ಸಿದ್ದೀಕ್ ಕ್ಕೂಕ್ಕೂ ಮೊದಲಾದವರು ಇದ್ದು ಶುಭ ಹಾರೈಸಿದರು.




m
