Featured, ಅಂಕಣ, ಇತರೆ, ಸ್ಥಳೀಯ

ಸಾಗರದ ಮಲೆನಾಡು ಮುಸ್ಲಿಂ ಒಕ್ಕೂಟದ ವತಿಯಿಂದ “ವಕ್ಫ್ 2025 ತಿದ್ದುಪಡಿ” ಕಾಯ್ದೆ ವಿರೋಧಿಸಿ ಬೃಹತ್ ಪ್ರತಿಭಟನಾ ಸಭೆ..!

ಸಾಗರ ತಾಲ್ಲೂಕಿನ ಸಮಸ್ತ ಮುಸ್ಲಿಂ ಒಕ್ಕೂಟದ ವತಿಯಿಂದ ಇದೆ ಬರುವ ದಿನಾಂಕ26/05//2025ರ ಸೋಮವಾರ ಬೆಳಗ್ಗೆ 11-00 ಗಂಟೆಗೆ ಸಾಗರದ ಗಾಂಧಿ ಮೈದಾನದಲ್ಲಿ “ವಕ್ಫ್ ತಿದ್ದುಪಡಿ ಕಾಯ್ದೆ 2025” ವಿರೋಧಿಸಿ ಬೃಹತ್ ಪ್ರತಿಭಟನಾ ಸಭೆ ನಡೆಯಲಿದೆ ಎಂದು ಒಕ್ಕೂಟದ ಪ್ರಮುಖರಾದ ಸದಾಂ ದೊಡ್ಮನೆ ತಿಳಿಸಿದರು.

ಇಂದು ಸಾಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು “ವಕ್ಫ್” ಎಂದರೆ ಧಾರ್ಮಿಕ ಮತ್ತು ದತ್ತಿ ಉದ್ದೇಶಗಳಿಗಾಗಿ ಅಲ್ಲಾಹನ ಹೆಸರಿನಲ್ಲಿ ಅರ್ಪಿಸಲಾದ ಆಸ್ತಿ, ಆಸ್ತಿಯ ಆದಾಯದಿಂದ ಮಸೀದಿಗಳ ನಿರ್ವಹಣೆ, ಬಡವರ, ಅನಾಥರ ಸೇವೆ, ಶಿಕ್ಷಣ ಮತ್ತು ಆರೋಗ್ಯ ಸೇವೆಗಳನ್ನು ನೀಡಲಾಗುತ್ತಿದೆ, ಆದರೆ ಇದೀಗ ಕೇಂದ್ರ ಸರ್ಕಾರವು “ವಕ್ಫ್” ತಿದ್ದುಪಡಿ ಕಾಯ್ದೆ 2025″ ಎಂಬ ಹೆಸರಿನಲ್ಲಿ ಈ ಪವಿತ್ರ ವ್ಯವಸ್ಥೆಗೆ ಧಕ್ಕೆ ತರುತ್ತಿದೆ. ಇದು ಧಾರ್ಮಿಕ ಆಧಾರದ ಮೇಲೆ ದೇಶವನ್ನು ವಿಭಜಿಸಲು ಮತ್ತು “ವಕ್ಫ್” ಆಸ್ತಿಯನ್ನು ಖಾಸಗಿ ಲಾಭಕ್ಕೆ ನೀಡಲು ಮಾಡುತ್ತಿರುವ ಕುತಂತ್ರವಾಗಿದೆ ಎಂದು ತಿಳಿಸಿದ ಅವರು.

ಈ ಪ್ರತಿಭಟನೆಗೆ ಮುಖ್ಯ ಅತಿಥಿಗಳಾಗಿ :S.D.P.I ನ ರಾಜ್ಯಾಧ್ಯರಾದ ಅಬ್ದುಲ್ ಮಜೀದ್ ಸಾಹೇಬ್, ಡಾ. ಎಂ.ಎಸ್.ಎಂ. ಅಬ್ದುಲ್ ರಶೀದ್ ಝೈನಿ ಸಖಾಫಿ. ಪ್ರಖರ ವಾಗ್ಮಿಗಳಾದ ಸುಧೀರ್ ಕುಮಾರ್ ಮೂರೋಳ್ಳಿ. ಮೌಲಾನ ಮುಹಮ್ಮದ್ ಅಬು ತಾಲಿಬ್ ರಹ್ಮಾನಿ ಸಾಹೇಬ್.ಮೌಲಾನ ಸೈಯದ್ ತಸ್ವೀರ್ ಹಾಶ್ಮಿ ಸಾಹೇಬ್ ಹಾಗೂ ಇನ್ನಿತರ ಪ್ರಮುಖರು ಉಪಸ್ಥಿತರಿರುವರು ಎಂದು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಮೊಹಮ್ಮದ್ ಅಶ್ರಫ್ ರಾಜಾ.ಮೊಹಮ್ಮದ್ ಅಲಿ ಮದನಿ.ಮೊಹಮ್ಮದ್ ತುಫೇಲ್.ಮೊಹಮ್ಮದ್ ಬಿಲಾಲ್.ಮೊಹಮ್ಮದ್ ಫಾರೂಕ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ರಫೀಕ್ ಕೊಪ್ಪ ಮಲೆನಾಡ ರಹಸ್ಯ..!

m

Related Posts