Featured, ಅಂಕಣ, ಸ್ಥಳೀಯ

ಹಸೀನಾ ಬಾನು ಅವರಿಗೆ ಪ್ರಾಂಶುಪಾಲರಾಗಿ ಭಡ್ತಿ:- ಪುತ್ತೂರು ತಾಲೂಕಿನ ಕೆಯ್ಯರು ಕರ್ನಾಟಕ ಪಬ್ಲಿಕ್ ಸ್ಕೂಲ್ ಗೆ ನೇಮಕ

ಸುಳ್ಯ: ಸುಳ್ಯ ಸರಕಾರಿ ಜೂನಿಯರ್ ಕಾಲೇಜಿನಲ್ಲಿ ಹಿಂದಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದ ಶ್ರೀಮತಿ ಹಸೀನಾ ಬಾನು ಅವರು ಪ್ರಾಂಶುಪಾಲರಾಗಿ ಭಡ್ತಿ ಹೊಂದಿದ್ದು, ಪುತ್ತೂರು ತಾಲೂಕಿನ ಕೆಯ್ಯರು ಗ್ರಾಮದಲ್ಲಿರುವ ಕರ್ನಾಟಕ ಪಬ್ಲಿಕ್ ಸ್ಕೂಲ್ (ಕೆ.ಪಿ.ಎಸ್) ನ ಪ್ರಾಂಶುಪಾಲರಾಗಿ ನೇಮಕಗೊಂಡಿದ್ದಾರೆ.

ಶಿಕ್ಷಣ ಕ್ಷೇತ್ರದಲ್ಲಿ ದೀರ್ಘ ಅನುಭವ ಹೊಂದಿರುವ ಹಸೀನಾ ಬಾನು ಅವರು 1996ರಲ್ಲಿ ಸುಳ್ಯ ಸರಕಾರಿ ಜೂನಿಯರ್ ಕಾಲೇಜಿಗೆ ನೇಮಕಗೊಂಡು ಹಿಂದಿ ಉಪನ್ಯಾಸಕಿಯಾಗಿ 22 ವರ್ಷ ಸೇವೆ ಸಲ್ಲಿಸಿದರು. ಬಳಿಕ 2018ರಲ್ಲಿ ಬೆಳ್ಳಾರೆ ಜೂನಿಯರ್ ಕಾಲೇಜಿಗೆ ವರ್ಗಾವಣೆಯಾಗಿ, 2019 ರಿಂದ 2022ರ ಜನವರಿವರೆಗೆ ಅಲ್ಲಿ ಪ್ರಭಾರ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸಿದರು. 2023ರ ಆಗಸ್ಟ್‌ನಲ್ಲಿ ಅವರು ಪುನಃ ಸುಳ್ಯ ಜೂನಿಯರ್ ಕಾಲೇಜಿಗೆ ವರ್ಗಾವಣೆಯಾಗಿ ಇದೀಗ ಪ್ರಾಂಶುಪಾಲರಾಗಿ ಸೇವಾ ಭಡ್ತಿ ಪಡೆದಿದ್ದಾರೆ.

ಅವರು ಸಂಪಾಜೆಯ ನಿವೃತ್ತ ಶಿಕ್ಷಕ ಇಬ್ರಾಹಿಂ ಮಾಸ್ಟರ್ ರವರ ಪುತ್ರಿಯಾಗಿದ್ದು, ಅವರ ಪತಿ ಅಬ್ದುಲ್ ಕಲಾಂ ವಿದೇಶದಲ್ಲಿ ಉದ್ಯೋಗದಲ್ಲಿದ್ದಾರೆ. ಹಿರಿಯ ಪುತ್ರ ಅಬ್ದುಲ್ ವಾಹಿದ್ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪೂರೈಸಿ ಸೌದಿಯಲ್ಲಿ ಉದ್ಯೋಗದಲ್ಲಿದ್ದು, ಕಿರಿಯ ಪುತ್ರ ಫಹಾದ್ ಇತ್ತೀಚೆಗಷ್ಟೇ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪೂರ್ಣಗೊಳಿಸಿದ್ದಾರೆ.

m

Related Posts