Featured, ಅಂಕಣ, ರಾಜ್ಯ

ಮಂಡ್ಯ: ಟ್ರಾಫಿಕ್ ಪೊಲೀಸರ ಎಡವಟ್ಟು – ಮೂವರು ವರ್ಷದ ಮಗು ಬೈಕ್‌ನಿಂದ ಬಿದ್ದು ಮೃತ್ಯು

ಮಂಡ್ಯ, ಮೇ 26: ಟ್ರಾಫಿಕ್ ಪೊಲೀಸರು ಚಲಿಸುತ್ತಿದ್ದ ಬೈಕ್‌ಗೆ ಅಡ್ಡಗಟ್ಟಿದ ಪರಿಣಾಮ ಮೂವರು ವರ್ಷದ ಮಗು ರಸ್ತೆಗೆ ಬಿದ್ದು ಪ್ರಾಣ ಕಳೆದುಕೊಂಡ ದುರ್ಘಟನೆ ಮಂಡ್ಯದ ಸ್ವರ್ಣಸಂದ್ರದ ಬಳಿ ನಡೆದಿದೆ. ಮೃತ ಬಾಲಕನು ಗೊರವನಹಳ್ಳಿ ಗ್ರಾಮದ ರಿತೀಕ್ಷ (3) ಎಂದು ಗುರುತಿಸಲಾಗಿದೆ.

ಚಿಕಿತ್ಸೆಗೆ ಕರೆದುಕೊಂಡು ಹೋಗುತ್ತಿದ್ದಾಗ ದುರ್ಘಟನೆ

ಮಗುವಿಗೆ ನಾಯಿ ಕಚ್ಚಿದ್ದ ಕಾರಣ, ಮಗುವಿನ ತಾಯಿ ಮತ್ತು ದೊಡ್ಡಪ್ಪನವರು ರಿತೀಕ್ಷನನ್ನು ಬೈಕ್‌ನಲ್ಲಿ ಕೂರಿಸಿಕೊಂಡು ಮಂಡ್ಯ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾಗ, ರಸ್ತೆ ಮೇಲೆ ಫೈನ್ ಹಾಕಲು ನಿಂತಿದ್ದ ಪೊಲೀಸರು ಬೈಕ್‌ನ್ನು ಅಡ್ಡಗಟ್ಟಿದ್ದಾರೆ.

ದೊಡ್ಡಪ್ಪನ ಮಾತುಗಳ ಪ್ರಕಾರ, “ಮಗುವಿಗೆ ತುರ್ತು ಚಿಕಿತ್ಸೆ ಬೇಕು ಎಂದು ತಿಳಿಸಿದ್ದರೂ, ಮುಂದೆ ಮತ್ತೊಬ್ಬ ಪೊಲೀಸ್ ಅಧಿಕಾರಿಯು ಹಠಾತ್‌ವಾಗಿ ಬೈಕ್ ಹಿಡಿದರು. ನಿಯಂತ್ರಣ ತಪ್ಪಿ ಬೈಕ್ ಉರುಳಿ ಮಗು ರಸ್ತೆಗೆ ಬಿದ್ದಿತು. ನಂತರ ಹಿಂದೆ ಬರುತ್ತಿದ್ದ ಟೆಂಪೋ ಮಗು ಮೇಲೆ ಹರಿದು ತೀವ್ರ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟನು,” ಎಂದು ಭಾವುಕವಾಗಿ ವಿವರಿಸಿದ್ದಾರೆ.

ಆಕ್ರೋಶಗೊಂಡ ಸಾರ್ವಜನಿಕರಿಂದ ಪ್ರತಿಭಟನೆ

ಪೊಲೀಸರ ಎಡವಟ್ಟಿನಿಂದ ಮಗು ಸಾವಿಗೀಡಾಗಿದ್ದಕ್ಕೆ ಕುಟುಂಬಸ್ಥರು ಮತ್ತು ಸಾರ್ವಜನಿಕರು ಕಿಡಿಕಾರಿದ್ದು, ಮಂಡ್ಯ ಮಿಮ್ಸ್ ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದ್ದಾರೆ. ತಪ್ಪಿತಸ್ಥ ಪೊಲೀಸರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಗಿದೆ. ನ್ಯಾಯ ಸಿಗುವವರೆಗೂ ಪ್ರತಿಭಟನೆ ಮುಂದುವರೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಈ ಘಟನೆಯ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

m

Related Posts