ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿರುವ ಅಮಾಯಕ ಅಬ್ದುಲ್ ರಹೀಮ್ ಹತ್ಯೆ ಮತ್ತು ಇತ್ತೀಚಿನ ವರ್ಷಗಳಲ್ಲಿ ಜಿಲ್ಲೆಯಲ್ಲಿ ಮುಸ್ಲಿಂ ಸಮುದಾಯದ ಮೇಲೆ ನಿರಂತರವಾಗಿ ನಡೆಯುತ್ತಿರುವ ಕೊಲೆ, ದೌರ್ಜನ್ಯ, ದ್ವೇಷ ಭಾಷಣ, ಪ್ರಚೋದನೆ ವಿರುದ್ಧ ಯಾವುದೇ ಕ್ರಮಕೈಗೊಳ್ಳದೆ ನಿರ್ಲಕ್ಷವಹಿಸಿ ಅಮಾಯಕ ಯುವಕರ ಸಾವಿಗೆ ಕಾರಣಕರ್ತರಾದ ಪೊಲೀಸ್ ಇಲಾಖೆಯ, ಸರ್ಕಾರದ ವೈಫಲ್ಯದ ಬಗ್ಗೆ ಗಮನ ಸೆಳೆಯಲು ಬಿಸಿಸಿ ನಾಯಕರು ಬಿ. ಕೆ. ಹರಿಪ್ರಸಾದ್ ರವರನ್ನು ಭೇಟಿಯಾಗಿ ಚರ್ಚಿಸಿ,ತಕ್ಷಣ ಸರ್ಕಾರದ ಗಮನ ಸೆಳೆಯಲು ಮತ್ತು ಅಗತ್ಯ ಕ್ರಮಗಳನ್ನು ಕೈಗೊಂಡು ಜಿಲ್ಲೆಯ ಶಾಂತಿ ಸುವ್ಯವಸ್ಥೆಗೆ ದಕ್ಕೆಯಾಗುತ್ತಿರುವವರ ಬಗ್ಗೆ ಕಠಿಣ ಕ್ರಮಕೈಗೊಂಡು,ಶಾಂತಿ ನೆಲೆಸುವಂತೆ ಮಾಡಲು ಮನವಿ ಮಾಡಲಾಯಿತು. ಈ ಸಂದರ್ಭದಲ್ಲಿ ಬಿಸಿಸಿ ಅಧ್ಯಕ್ಷರಾದ ಶಬೀರ್ ಬ್ರಿಗೇಡ್, ಪ್ರಧಾನ ಕಾರ್ಯದರ್ಶಿ ನಾಸಿರ್ ಕೆಂಪಿ,ಸೇರಿದಂತೆ ಬಿಸಿಸಿ ನಾಯಕರು ಜೊತೆಗೂಡಿದರು.




m
